Viral Video : ಭಾರತೀಯ ಸಿನೆಮಾ ಸಂಗೀತಕ್ಕೆ ಮರುಳಾಗದವರು ಯಾರಿದ್ದಾರೆ? ಹಳೆಯ ಚಿತ್ರಗೀತೆಗಳನ್ನು ಈಗಲೂ ವಿದೇಶಿಗರು ಕೇಳುತ್ತಾರೆ. ರೀಲ್ಸ್ಗಳನ್ನು ಮಾಡುತ್ತಾರೆ. ಈ ಮೂಲಕ ನಮ್ಮ ಗಾಯಕರುಗಳನ್ನು ಸ್ಮರಿಸುತ್ತಿರುತ್ತಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ‘ಮೇರಾ ದಿಲ್ ಯೇ ಪುಕಾರೆ ಆಜಾ’ ಲತಾ ಮಂಗೇಶ್ಕರ ಅವರ ಹಾಡಿಗೆ ಹೆಜ್ಜೆ ಹಾಕಿದ ಪಾಕಿಸ್ತಾನಿ ಯುವತಿ ಆಯೇಶಾ ನೆನಪಿರಬೇಕಲ್ಲ? ಆಕೆಯೇ ಈಕೆ. ಈ ಹಾಡಿಗೆ ಹೆಜ್ಜೆ ಹಾಕಿದ್ದೇ ತಡ ಈಕೆಯ ಪೋಸ್ಟ್ ಅನ್ನು ವೈರಲ್ ಆಗಿಸಿದರು ನೆಟ್ಟಗರು. ಇದೀಗ ಈಕೆ ಹರ್ಯಾನ್ವಿ ಹಾಡಿಗೆ ಹೆಜ್ಜೆ ಹಾಕುತ್ತಿರುವ ವಿಡಿಯೋ ಪೋಸ್ಟ್ ಮಾಡಿದ್ದಾಳೆ.
ಈ ಎರಡೂ ಹಾಡುಗಳನ್ನು ರೀಲ್ ಮಾಡುವ ಮೊದಲು ಈಕೆ ಪ್ರಾಂಜಲ್ ದಹಿಯಾ ಮತ್ತು ಉಪಾಸನಾ ಗೆಹ್ಲೋಟ್ ಹಾಡಿರುವ ತೇರೆ ಚಕ್ಕರ್ ಮೇ ಹಾಡಿಗೆ ಲಿಪ್ ಸಿಂಕ್ ಮಾಡಿ ಗಮನ ಸೆಳೆದಿದ್ದಳು. ಕ್ರಮೇಣ ಭಾರತೀಯ ಹಾಡುಗಳಿಗೆ ಹೆಜ್ಜೆ ಹಾಕಲು ಶುರುಮಾಡಿದಳು.
ಇದೀಗ ಹಂಚಿಕೊಂಡಿರುವ ಈ ವಿಡಿಯೋ ಅನ್ನು 1 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ ಮತ್ತು ಇಷ್ಟಪಟ್ಟಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ನಿಮ್ಮ ನೃತ್ಯ ಅದ್ಭುತವಾಗಿದೆ ಎಂದಿದ್ದಾರೆ ಹಲವರು. ನೀವು ಈ ಸೆಲ್ವಾರ್ನಲ್ಲಿ ಚೆನ್ನಾಗಿ ಕಾಣುತ್ತಿದ್ಧೀರಿ ಎಂದಿದ್ದಾರೆ ಮತ್ತೊಬ್ಬರು. ಸುಂದರವಾಗಿದ್ದೀರಿ ಮತ್ತು ನಿಮ್ಮ ಹಾವಭಾವಗಳೂ ಚೆಂದ ಎಂದಿದ್ದಾರೆ ಮಗದೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ