ಪಾಕಿಸ್ತಾನಿ ಪತ್ರಕರ್ತ ಚಂದ್ ನವಾಬ್ ಮತ್ತೆ ಬಂದಿದ್ದಾರೆ. ಕರಾಚಿಯ ಹವಾಮಾನದ ಬಗ್ಗೆ ಅವರು ವರದಿ ಮಾಡಿರುವ ವಿಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಪಾಕಿಸ್ತಾನದ ಚಂದ್ ನವಾಬ್ ತನ್ನ ದೇಶದಲ್ಲಿ ಅಷ್ಟೊಂದು ಪ್ರಸಿದ್ಧ ವ್ಯಕ್ತಿಯೆನಲ್ಲ, ಆದರೆ ಭಾರತದಲ್ಲಿನ ಜನರು ಅವರನ್ನು ಚೆನ್ನಾಗಿ ತಿಳಿದಿದ್ದಾರೆ. ಅವರ ವಿಶಿಷ್ಟವಾದ ವರದಿ ಮಾಡುವ ಶೈಲಿಯಿಂದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಅವರು ಚಿರಪರಿಚಿತ. ಅವರ ಇತ್ತೀಚಿನ ವಿಡಿಯೋದಲ್ಲಿ, ಚಾಂದ್ ನವಾಬ್ ಕರಾಚಿಯಲ್ಲಿನ ಧೂಳಿನ ಚಳಿಗಾಲದ ಗಾಳಿಯ ಬಗ್ಗೆ ವರದಿ ಮಾಡುವುದನ್ನು ಕಾಣಬಹುದು.
Chand Nawab reporting on Karachi’s dusty winter winds. Warns doblay-patlay people that they can be blown away by the dust storm. pic.twitter.com/mgYmW2mrbG
— Naila Inayat (@nailainayat) January 22, 2022
ಕರಾಚಿಯ ಹವಾಮಾನವು ತುಂಬಾ ಆಹ್ಲಾದಕರವಾಗಿದ್ದು, ತಂಪಾದ ಗಾಳಿ ಬೀಸುತ್ತಿದೆ. ಈ ಚಂಡಮಾರುತವನ್ನು ನೋಡಲು ಜನರು ಬರಬಹುದು. ಈ ಚಂಡಮಾರುತದಿಂದ ಕೂದಲು ಹಾರಾಡುತ್ತಿವೆ. ನನ್ನ ಬಾಯಿಯಲ್ಲಿ ಕೊಳಕು ಹೋಗುತ್ತಿದೆ. ಕಣ್ಣು ಸಹ ತೆರೆಯಲು ಸಾಧ್ಯವಾಗುತ್ತಿಲ್ಲ ಎಂದು ಅವರು ವರದಿಯಲ್ಲಿ ಹೇಳಿದ್ದಾರೆ. ತೆಳ್ಳಗಿರುವವರು ಮತ್ತು ದುರ್ಬಲರು ಇಂದು ಸಮುದ್ರ ತೀರಕ್ಕೆ ಬರಬಾರದು, ಇಲ್ಲದಿದ್ದರೆ ಅವರು ಗಾಳಿಯೊಂದಿಗೆ ಹಾರಿ ಹೋಗುವ ಸಾಧ್ಯತೆಯಿದೆ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.
ಹವಾಮಾನವನ್ನು ಆನಂದಿಸಲು ಜನರು ಮಧ್ಯಪ್ರಾಚ್ಯಕ್ಕೆ ಹೋಗಬೇಕಾಗಿಲ್ಲ, ಬದಲಿಗೆ ಕರಾಚಿಗೆ ಬರಬವುದು ಎಂದು ಹೇಳಿದ್ದಾರೆ. ಇನ್ನೂ ವಿಡಿಯೋದಲ್ಲಿ ಒಂಟೆಯ ಮೇಲೆ ಕುಳಿತು ಹವಾಮಾನದ ಬಗ್ಗೆ ವರದಿ ಮಾಡುವುದನ್ನು ಕಾಣಬಹುದು. “ಸದ್ಯ, ನಾನು ಅರೇಬಿಯಾದ ಯಾವುದೇ ಮರುಭೂಮಿಯಲ್ಲಿಲ್ಲ, ಆದರೆ ಕರಾಚಿಯ ಸಮುದ್ರ ತೀರದಲ್ಲಿದ್ದೇನೆ. ದುಬೈ ಮತ್ತು ಸೌದಿ ಅರೇಬಿಯಾದಂತಹ ಧೂಳಿನ ಚಂಡಮಾರುತವನ್ನು ಇಂದು ಕರಾಚಿಯಲ್ಲಿ ಅನುಭವಿಸಬಹುದಾಗಿ ಎಂದು ಅವರು ಹೇಳಿದ್ದಾರೆ.
ಚಾಂದ್ ನವಾಬ್ ಕರಾಚಿಯ ಹವಾಮಾನದ ಬಗ್ಗೆ ವರದಿ ಮಾಡುತ್ತಿದ್ದಂತೆ ಪತ್ರಕರ್ತೆ ನೈಲಾ ಇನಾಯತ್ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. “ಕರಾಚಿಯ ಧೂಳಿನ ಚಳಿಗಾಲದ ಗಾಳಿಯ ಕುರಿತು ಚಾಂದ್ ನವಾಬ್ ವರದಿ ಮಾಡುತ್ತಿದ್ದಾರೆ. ತೆಳಗಿರುವವರು ಮತ್ತು ದುರ್ಬಲರು ಈ ಧೂಳಿನ ಬಿರುಗಾಳಿಯಿಂದ ಹಾರಿಹೋಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿರುವುದನ್ನು ಶೀರ್ಷಿಕೆಯಲ್ಲಿ ಕಾಣಬಹುದಾಗಿದೆ. ಇನ್ನೂ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೀಕ್ಷಣೆ ಮತ್ತು ಮೆಚ್ಚುಗೆಯನ್ನು ಸಹ ಪಡೆಯುತ್ತಿದೆ.
ಚಾಂದ್ ನವಾಬ್ ಪಾಕಿಸ್ತಾನದ ಜನಪ್ರಿಯ ಪತ್ರಕರ್ತ. ARY ನ್ಯೂಸ್‌ಗಿಂತ ಮೊದಲು, ಚಾಂದ್ ನವಾಬ್ ಕರಾಚಿ ಮೂಲದ ಇಂಡಸ್ ನ್ಯೂಸ್‌ಗಾಗಿ ಕೆಲಸ ಮಾಡುತ್ತಿದ್ದರು. ನೀವು ಸಲ್ಮಾನ್ ಖಾನ್ ಅವರ ಬಜರಂಗಿ ಭಾಯ್ಜಾನ್ ಅನ್ನು ನೋಡಿದ್ದರೆ, ಅದೇ ಹೆಸರಿನ ಪತ್ರಕರ್ತನ ಪಾತ್ರವನ್ನು ನವಾಜುದ್ದೀನ್ ಸಿದ್ದಿಕಿ ನಿರ್ವಹಿಸಿದ್ದು ನಿಮಗೆ ನೆನಪಾಗುತ್ತದೆ.
ಇದನ್ನೂ ಓದಿ;
ಸುಭಾಷ್ ಚಂದ್ರ ಬೋಸ್ 125ನೇ ಜನ್ಮದಿನ; ಮರಳಿನ ಕಲಾಕೃತಿ ಮೂಲಕ ಸ್ಮರಿಸಿದ ಕಲಾವಿದ ಸುದರ್ಶನ್ ಪಟ್ನಾಯಕ್