Frozen Lake Marathon: ಲಡಾಖ್​​​​ನ ಪ್ಯಾಂಗೊಂಗ್ ತ್ಸೋ ಸರೋವರದಲ್ಲಿ ನಡೆದ ವಿಶ್ವದ ಅತ್ಯಂತ ಸವಾಲಿನ ಮ್ಯಾರಥಾನ್

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 28, 2024 | 5:17 PM

ಲಡಾಖ್​​​ನಲ್ಲಿರುವ ವಿಶ್ವಪ್ರಸಿದ್ಧ ಪ್ಯಾಂಗೊಂಗ್ ತ್ಸೋ ಸರೋವದರಲ್ಲಿ ಫೆಬ್ರವರಿ 20 ರಂದು ಎರಡನೇ ವರ್ಷದ ಫ್ರೋಜನ್ ಲೇಕ್ ಮ್ಯಾರಥಾನ್ ಸ್ಪರ್ಧೆಯು ಯಶಸ್ವಿಯಾಗಿ ನಡೆಯಿತು. ಈ ಒಂದು ಸ್ಪರ್ಧೆಯಲ್ಲಿ ಏಳು ವಿವಿಧ ದೇಶಗಳ  ಒಟ್ಟು 120 ಆಟಗಾರರು ಭಾಗವಹಿಸಿದ್ದರು. 

ಲಡಾಖ್ ಹಲವಾರು ಪ್ರವಾಸಿಗರ ಕನಸಿನ ತಾಣ. ಇಲ್ಲಿನ ನಿಸರ್ಗದ ಸೌಂದರ್ಯವನ್ನು ಸವಿಯಲೆಂದೇ ಪ್ರತಿ ವರ್ಷ ಹಲವಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.  ಇಲ್ಲಿನ ಪ್ರಸಿದ್ಧ ಪ್ಯಾಂಗೊಂಗ್ ಸರೋವರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಪ್ರವಾಸ ಕೈಗೊಳ್ಳುತ್ತಾರೆ. ಭಾರತ ಮತ್ತು ಚೀನಾ ನಡುವಿನ ಗಡಿ ಭಾಗದಲ್ಲಿರುವ   ಪ್ಯಾಂಗಾಂಗ್ ಸರೋವರವು ಚಳಿಗಾಲದಲ್ಲಿ ಮೈನಸ್ 30 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸುತ್ತದೆ. ಇದರಿಂದ ಈ ಸರೋವರವು ಚಳಿಗಾಲದಲ್ಲಿ ಸಂಪೂರ್ಣವಾಗಿ ಹೆಪ್ಪುಗಟ್ಟುತ್ತವೆ. ಇಂತಹ ಸಂದರ್ಭದಲ್ಲಿ  ಇಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ, ಹವಾಮಾನ ಬದಲಾವಣೆ  ಮತ್ತು ಪರಿಸರ ಕಾಳಜಿಯ  ಬಗ್ಗೆ  ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಳೆದ ವರ್ಷ   ಇಲ್ಲಿ ಪ್ರಥಮ ವರ್ಷದ ʼಫ್ರೋಜನ್ ಲೇಕ್ ಮ್ಯಾರಥಾನ್ʼ ಕ್ರೀಡೆಯನ್ನು ಏರ್ಪಡಿಸಲಾಗಿತ್ತು. ಅದೇ ರೀತಿ ಈ ವರ್ಷವೂ ಕೂಡಾ ಫೆಬ್ರವರಿ 20 ರಂದು ಎರಡನೇ ಆವೃತ್ತಿಯ ಫ್ರೋಜನ್ ಲೇಕ್ ಮ್ಯಾರಥಾನ್ ಕ್ರೀಡೆಯನ್ನು ಏರ್ಪಡಿಸಲಾಗಿತ್ತು. ಈ ಒಂದು ಸ್ಪರ್ಧೆಯಲ್ಲಿ ವಿವಿಧ ಏಳು ದೇಶಗಳ 120 ಆಟಗಾರರು ಭಾಗವಹಿಸಿದ್ದರು.

ಸಮುದ್ರ ಮಟ್ಟದಿಂದ 13,862 ಅಡಿ ಎತ್ತರದಲ್ಲಿ ನಡೆದ ಈ ಮ್ಯಾರಥಾನ್ ಸ್ಪರ್ಧೆಯನ್ನು ಅಡ್ವೆಂಚರ್ ಸ್ಪೋರ್ಟ್ಸ್ ಫೌಡೇಶನ್ ಲಡಾಖ್ (ASFL) ಲಡಾಖ್ ನ ಕೇಂದ್ರಾಡಳಿತ ಪ್ರದೇಶ  ಮತ್ತು ಭಾರತೀಯ ಸೇನೆಯ ಸಹಯೋಗದೊಂದಿಗೆ ಏರ್ಪಡಿಸಿತ್ತು. 21 ಕಿಮೀ ಮತ್ತು 10 ಕಿಮೀ ಗಳ ಎರಡು ವಿಭಾಗದ ಮ್ಯಾರಥಾನ್   ಸ್ಪರ್ಧೆಯಲ್ಲಿ  ಮುಖ್ಯ ಅಥಿಯಾಗಿ ಲಡಾಖ್ ಪ್ರದೇಶದ ಯುವಜನ ಸೇವೆ ಮತ್ತು ಕ್ರೀಡಾ ಕಾರ್ಯದರ್ಶಿ ರವೀಂದರ್ ಕುಮಾರ್ ಮತ್ತು ಚುಶುಲ್ ಕ್ಷೇತ್ರದ ಕೌನ್ಸಿಲರ್ ಕೊಂಚೋಕ್ ಸ್ಟಾಂಜಿನ್ ಭಾಗವಹಿಸಿದ್ದರು.  ಥಿಸ್ಟ್ರನ್ ಎಂಬ ಥೀಮ್ ಅಡಿಯಲ್ಲಿ ನಡೆದ ಈ ಸ್ಪರ್ಧೆಯ ಉದ್ದೇಶವು ಹಿಮಾಲಯದ ಹಿಮ ನದಿಗಳ ಕ್ಷಿಪ್ರ ಕರಗುವಿಕೆಯ ಬಗ್ಗೆ ಜಾಗೃತಿ ಮೂಡಿಸುವುದಾಗಿತ್ತು.

ಮಾನ್, ಮೆರಾಕ್, ಸ್ಪಾಂಗ್ಮಿಕ್ ಮತ್ತು ಫೋಬ್ರಾಂಗ್  ಮುಂತಾದ ಪ್ಯಾಂಗಾಂಗ್ ಪ್ರದೇಶದ ಸ್ಥಳೀಯ ಜನರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇವರು  ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಆಟಗಾರರಿಗೆ ಉತ್ತಮ ಆಥಿತ್ಯವನ್ನು ನೀಡುವುದರ ಜೊತೆಗೆ ಈ  ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ನಡೆಸಿಕೊಟ್ಟರು.

ಇದನ್ನೂ ಓದಿ: ಭವಿಷ್ಯದಲ್ಲಿ ಇಂತಹ ಅದ್ಭುತ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬಂದ್ರೂ ಬರಬಹುದು ನೋಡಿ

ವಿಶ್ವದ ಅತ್ಯಂತ ಸವಾಲಿನ ಮ್ಯಾರಥಾನ್:

ಮ್ಯಾರಥಾನ್  ಸ್ಪರ್ಧೆಯು ಸಾಗರ ಮಟ್ಟಕ್ಕಿಂತ 14,273 ಅಡಿ ಎತ್ತರದಲ್ಲಿರುವ ಹೆಪ್ಪುಗಟ್ಟಿದ  ಸರೋವರದಲ್ಲಿ ನಡೆಯಿತು. ಚಳಿಗಾಲದಲ್ಲಿ ಇಲ್ಲಿನ ತಾಪಮಾನವು -15 ಡಿಗ್ರಿ ಸೆಲ್ಸಿಯಸ್  ನಷ್ಟಿತ್ತು. ಈ ತಾಪಮಾನದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವುದು ದೊಡ್ಡ ಸವಾಲಾಗಿತ್ತು. ಸುರಕ್ಷತೆಯ ದೃಷ್ಟಿಯಿಂದ ಸಂಘಟಕರು ಸ್ಥಳದಲ್ಲಿ ಹಲವಾರು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರು ಎಂದು ವರದಿಯಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ