Viral Video: ಖಂಡಿತ ಇಂತಹ ಸ್ಮಾರ್ಟ್ ಫೋನ್ ಉಪಯೋಗಿಸುವ ದಿನಗಳು ಬರಬಹುದು ನೋಡಿ…
ಇಡೀ ಜಗತ್ತು ಒಂದಲ್ಲ ಒಂದು ತಂತ್ರಜ್ಞಾನಗಳಿಗೆ ಅಪ್ಡೇಟ್ ಅಗುತ್ತಿದೆ. ಅನೇಕ ತಂತ್ರಜ್ಞಾನಗಳು ನಮ್ಮ ಮುಂದೆ.ಅದರಲ್ಲೂ ಮೊಬೈಲ್ ಫೋನ್ಗಳು, ಅನೇಕ ಸ್ಮಾರ್ಟ್ ಫೋನ್ಗಳೂ ಈಗಾಗಲೇ ಉಪಯೋಗಿಸುತ್ತಿದ್ದೇವೆ ಈಗೀಗ ಕೆಲ ವರ್ಷಗಳ ಹಿಂದೆ ಇದ್ದಂತಹ ಫೋಲ್ಡೇಬಲ್ ಫೋನ್ ತರಹದ ಫೋಲ್ಡೇಬಲ್ ಸ್ಮಾರ್ಟ್ ಫೋನ್ಗಳೂ ಮಾರುಕಟ್ಟೆಗೆ ಕಾಲಿಟ್ಟಿವೆ. ಈ ನಡುವೆ ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು, ಫ್ಲೆಕ್ಸಿಬಲ್, ಫೋಲ್ಡಿಂಗ್ ಡಿಸ್ಪ್ಲೇ ಟೆಕ್ನಾಲಜಿಯ ಮೊಬೈಲ್ ಪೋನ್ ಅನ್ನು ಕಂಡು ಭವಿಷ್ಯದಲ್ಲಿ ಮುಂದೊಂದು ದಿನ ಜನರು ಹೀಗೆ ಮೊಬೈಲ್ ಅನ್ನು ವಾಚ್ ರೀತಿ ಕೈಗೆ ಕಟ್ಟಿಕೊಂಡು ಓಡಾಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ನೆಟ್ಟಿಗರು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಂತೂ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಪ್ರತಿಯೊಬ್ಬರೂ ಸ್ಮಾರ್ಟ್ ಫೋನ್ ಗಳನ್ನು ಬಳಕೆ ಮಾಡುತ್ತಿದ್ದಾರೆ. ಈ ಮೊಬೈಲ್ ಗಳು ಮಾನವರ ಜೀವನದ ಪ್ರಮುಖ ಅಂಶವಾಗಿಬಿಟ್ಟಿದೆ. ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಜಗತ್ತಿನಲ್ಲಿ ಟೆಕ್ ಕಂಪೆನಿಗಳು ಗ್ರಾಹಕರನ್ನು ಸೆಳೆಯಲು ವಿಭಿನ್ನ ವಿನ್ಯಾಸಗಳನ್ನು, ಫೀಚರ್ಸ್ ಗಳನ್ನು ಒಳಗೊಂಡಿರುವ ಮೊಬೈಲ್ ಫೋನ್ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಈಗಂತೂ ಕೆಲವೊಂದು ಟೆಕ್ ಕಂಪೆನಿಗಳು ಕೆಲ ವರ್ಷಗಳ ಹಿಂದೆ ಇದ್ದಂತಹ ಫೋಲ್ಡೇಬಲ್ ಫೋನ್ ತರಹದ ವಿಭಿನ್ನ ವಿನ್ಯಾಸದ ಫೋಲ್ಡೇಬಲ್ ಸ್ಮಾರ್ಟ್ ಫೋನ್ಗಳನ್ನು ಸಹ ಪರಿಚಯಿಸಿವೆ. ಈ ನಡುವೆ ಇಲ್ಲೊಂದು ಫ್ಲೆಕ್ಸಿಬಲ್, ಫೋಲ್ಡಿಂಗ್ ಸ್ಮಾರ್ಟ್ ಪೋನ್ ಕುರಿತ ವಿಡಿಯೋವೊಂದು ವೈರಲ್ ಆಗಿದ್ದು, ಈ ಅದ್ಭುತ ಟೆಕ್ನಾಲಜಿಯನ್ನು ಕಂಡು ಭವಿಷ್ಯದಲ್ಲಿ ಮುಂದೊಂದು ದಿನ ಜನರು ಹೀಗೆ ಮೊಬೈಲ್ ಅನ್ನು ವಾಚ್ ರೀತಿ ಕೈಗೆ ಕಟ್ಟಿಕೊಂಡು ಓಡಾಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ನೆಟ್ಟಿಗರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವಿಭಿನ್ನ ವಿನ್ಯಾಸದ ಫ್ಲೆಕ್ಸಿಬಲ್ ಫೋಲ್ಡೇಬಲ್ ಡಿಸ್ಪ್ಲೇ ಹೊಂದಿರುವ ಸ್ಮಾರ್ಟ್ ಫೋನ್ ಒಂದನ್ನು ಕಾಣಬಹುದು. @Enezator ಎಂಬ ಹೆಸರಿನ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ʼಭವಿಷ್ಯದಲ್ಲಿ ಡಿಸ್ಪ್ಲೇ ತಂತ್ರಜ್ಞಾನ ಹೀಗಿರಬಹುದುʼ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಫ್ಲೆಕ್ಸಿಬಲ್ ಆಗಿರುವಂತಹ ತೆಳ್ಳಗಿನ ಫೋಲ್ಡೇಬಲ್ ಮೊಬೈಲ್ ಫೋನ್ ಒಂದನ್ನು ಕೈಯಲ್ಲಿ ಹಿಡಿದು, ಅದನ್ನು ಫೋಲ್ಡ್ ಮಾಡುತ್ತಾ ನಂತರ ಆ ಫೋನ್ ಅನ್ನು ವಾಚ್ ನಂತೆ ಕೈಗೆ ಕಟ್ಟಿ, ಯೂಸ್ ಮಾಡುತ್ತಿರುವ ದೃಶ್ಯಾವಳಿಯನ್ನು ಕಾಣಬಹುದು.
ವಿಡಿಯೋ ಇಲ್ಲಿದೆ ನೋಡಿ:
display technology in the future pic.twitter.com/YTdOaULalO
— Enez Özen (@Enezator) February 26, 2024
ಇದನ್ನೂ ಓದಿ: ಅನಂತ್ ಅಂಬಾನಿ ವಿವಾಹ ಪೂರ್ವ ಸಮಾರಂಭಕ್ಕೆ ತಯಾರಾಗುತ್ತಿದೆ 2500 ಬಗೆಯ ಖಾದ್ಯಗಳು
ಫೆಬ್ರವರಿ 26 ರಂದು ಹಂಚಿಕೊಳ್ಳಲಾದ ಈ ವಿಡಿಯೋ 6.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼವಾವ್ಹ್ ಈ ಮೊಬೈಲ್ ಫೋನ್ ತುಂಬಾನೇ ಅದ್ಭುತವಾಗಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಫೋನ್ ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬಿಡುಗಡೆಯಾಗಲಿದೆಯೇ?ʼ ಎಂದು ಪ್ರಶ್ನೆ ಕೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼತಂತ್ರಜ್ಞಾನ ಬಹಳ ವೇಗವಾಗಿ ಸಾಗುತ್ತಿದೆʼ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಇದಂತೂ ಅದ್ಭುತ ಕಾನ್ಸೆಪ್ಟ್ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ