Viral Video: ಆಧಾರ್ ಲಿಂಕ್ ಆಗಿರುವ ಫೋನ್ ಬೇಕು ಅಂದಿದ್ದಕ್ಕೆ ಈ ವ್ಯಕ್ತಿ ಮಾಡಿದ್ದೇನು ನೋಡಿ? ಡಿಜಿಟಲ್ ಯುಗದಲ್ಲಿ ಮುಗ್ಧ ಜನ
ಇದು ಡಿಜಿಟಲ್ ಯುಗ. ಇಲ್ಲಿ ಪ್ರತಿಯೊಂದು ಕೆಲಸವು ಇಂಟರ್ನೆಟ್ ಮೂಲಕವೇ ನಡೆಯುತ್ತವೆ. ಆದರೆ ಇವುಗಳ ಬಗ್ಗೆ ಹಳ್ಳಿಯ ಜನರಿಗೆ ಅಷ್ಟಾಗಿ ಗೊತ್ತಿಲ್ಲ. ತಮ್ಮದೇನಾದರೂ ಕಛೇರಿ ಕೆಲಸಗಳು ಆಗ್ಬೇಕೆಂದರೆ ಅವರು ಪರದಾಡುತ್ತಿರುತ್ತಾರೆ. ಸದ್ಯ ಅಂತಹದ್ದೇ ಘಟನೆಯೊಂದು ಇದೀಗ ನಡೆದಿದ್ದು, ಯಾವುದೋ ಕೆಲಸದ ನಿಮಿತ್ತ ಡಿಜಿಟಲ್ ಸೇವಾ ಕೇಂದ್ರ ಕಛೇರಿಯವರು ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಫೋನ್ ತೆಗೆದುಕೊಂಡು ಬನ್ನಿ ಎಂದಿದ್ದಕ್ಕೆ, ಹಳ್ಳಿಯ ಮುಗ್ಧ ವ್ಯಕ್ತಿಯೊಬ್ಬರು ಮನೆಯ ಲ್ಯಾಂಡ್ ಲೈನ್ ಫೋನ್ ತೆಗೆದುಕೊಂಡು ಬಂದಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಈ ವ್ಯಕ್ತಿಯ ಮುಗ್ಧತೆಯನ್ನು ಕಂಡು ನಕ್ಕಂತಹ ಕಛೇರಿಯವರ ವಿರುದ್ಧ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.
ಇದು ಡಿಜಿಟಲ್ ಜಗತ್ತು. ದಿನದಿಂದ ದಿನಕ್ಕೆ ಬದಲಾಗುತ್ತಾ ಹೋಗುತ್ತಿರುವ, ಅಪ್ಗ್ರೇಡ್ ಆಗುತ್ತಿರುವ ಡಿಜಿಟಲ್ ಯುಗಕ್ಕೆ ನಾವು ಹೊಂದಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಇಂದು ಪ್ರತಿಯೊಂದು ಕೆಲಸವು ಇಂಟರ್ನೆಟ್ ಮುಖಾಂತರವೇ ನಡೆಯುತ್ತಿದೆ. ಹೌದು ಹಣಕಾಸು ವಹಿವಾಟಿನಿಂದ ಹಿಡಿದು, ಕಛೇರಿ ಕೆಲಸದವರೆಗೆ ಬಹುತೇಕ ಎಲ್ಲಾ ಕೆಲಸಗಳು ಇಂಟರ್ನೆಟ್ ಮೂಲಕವೇ ನಡೆಯುತ್ತಿದೆ. ಆದರೆ ಕೆಲವೊಂದು ಹಳ್ಳಿಯ ಮುಗ್ಧ ಜನರಿಗೆ ಈ ಡಿಜಿಟಲ್ ಯುಗ, ಇಂಟರ್ನೆಟ್ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಇದೇ ಕಾರಣದಿಂದ ಕಛೇರಿಗಳಲ್ಲಿ ತಮ್ಮದೇನಾದ್ರೂ ಕೆಲಸ ಆಗ್ಬೇಕಂದ್ರೆ, ಪರದಾಡುತ್ತಿರುತ್ತಾರೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಡಿಜಿಟಲ್ ಸೇವಾ ಕೇಂದ್ರ ಕಛೇರಿಯವರು, ನಿಮ್ಮ ಕೆಲಸ ಆಗ್ಬೇಕಂದ್ರೆ ಆಧಾರ್ ಕಾರ್ಡ್ ಲಿಂಕ್ ಆಗಿರುವ ಫೋನ್ ತೆಗೆದುಕೊಂಡು ಬನ್ನಿ ಅಂದಿದ್ದಕ್ಕೆ, ಈ ವಿಷಯಗಳ ಬಗ್ಗೆ ಅರಿವೇ ಇಲ್ಲದ ಹಳ್ಳಿಯ ಮುಗ್ಧ ವ್ಯಕ್ತಿಯೊಬ್ಬರು ಮನೆಯ ಲ್ಯಾಂಡ್ ಲೈನ್ ಫೋನನ್ನು ಕಛೇರಿಗೆ ತೆಗೆದುಕೊಂಡು ಬಂದಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮುಗ್ಧ ವ್ಯಕ್ತಿಯೊಬ್ಬರು ಕಚೇರಿಗೆ ಮೊಬೈಲ್ ಫೋನ್ ಬದಲಿಗೆ ಲ್ಯಾಂಡ್ ಲೈನ್ ಫೋನ್ ತೆಗೆದುಕೊಂಡು ಬಂದಂತಹ ದೃಶ್ಯವನ್ನು ಕಾಣಬಹುದು. ಈ ವಿಡಿಯೋವನ್ನು ಸಂಜಯ್ ವಾಡರ್ (@wader.sanjay) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಡಿಜಿಟಲ್ ಯುಗದಲ್ಲಿ ಮುಗ್ಧ ಗ್ರಾಹಕರ ಪರಿಸ್ಥಿತಿ, ಆಧಾರ್ ಲಿಂಕ್ ಆಗಿರೋ ಫೋನ್ ತಗೊಂಡು ಬನ್ನಿ ಅಂದ್ರೆ ಲ್ಯಾಂಡ್ ಲೈನ್ ಫೋನ್ ತೆಗೆದುಕೊಂಡು ಬಂದಿದ್ದಾರೆ; ದಯವಿಟ್ಟು ಅವರ ಬಗ್ಗೆ ತಮಾಷೆಯ ಮಾಡುವ ಬದಲು ಮುಗ್ಧ ಜನರಿಗೆ ಇದರ ಬಗ್ಗೆ ಸ್ವಲ್ಪ ವಿವರಿಸಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ವೈರಲ್ ವಿಡಿಯೋದಲ್ಲಿ ತಮ್ಮ ಕೆಲಸದ ನಿಮಿತ್ತ ಡಿಜಿಟಲ್ ಸೇವಾ ಕೇಂದ್ರ ಕಛೇರಿಗೆ ಬಂದಂತಹ ಹಳ್ಳಿಯ ಮುಗ್ಧ ವ್ಯಕ್ತಿಯೊಬ್ಬರು, ಆಧಾರ್ ನಂಬರ್ ಲಿಂಕ್ ಆಗಿರುವ ಪೋನ್ ತೆಗೆದುಕೊಂಡು ಬನ್ನಿ ಹೇಳಿದ್ದಕ್ಕೆ, ಈ ವಿಷಯಗಳ ಬಗ್ಗೆ ಯಾವುದೇ ಅರಿವಿಲ್ಲದ ಆ ವ್ಯಕ್ತಿ ಮನೆಯ ಲ್ಯಾಂಡ್ ಲೈನ್ ಫೋನ್ ಅನ್ನು ತೆಗೆದುಕೊಂಡು ಬಂದಿರುವುದನ್ನು ಕಾಣಬಹುದು. ಆದರೆ ಈ ಬಗ್ಗೆ ಅವರಿಗೆ ಮಾಹಿತಿಯನ್ನು ನೀಡುವ ಬದಲು, ಅವರ ಪರಿಸ್ಥಿತಿಯನ್ನು ನೋಡಿ ನಕ್ಕಂತಹ ಕಛೇರಿಯವರ ವಿರುದ್ಧ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.
ಇದನ್ನೂ ಓದಿ: ಅಯ್ಯೋ ಶೆಕೆ ತಡ್ಕೊಳೋಕೆ ಆಗ್ತಿಲ್ಲ, ಮೈ ಮೇಲೆ ಸ್ವಲ್ಪ ನೀರು ಹಾಕಣ್ಣೋ
ಒಂದು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 89 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಲವಾರು ಕಾಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಪಾಪ ಅವರು ಹಳ್ಳಿ ಜನರು ಅವರಿಗೆ ಇವೆಲ್ಲಾ ಗೊತ್ತಿರಲ್ಲ, ದಯವಿಟ್ಟು ಅವರ ಬಗ್ಗೆ ತಮಾಷೆ ಮಾಡಲು ಹೋಗಬೇಡಿʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಪಾಪ ಅವರಿಗೆ ಅವಮಾನ ಮಾಡ್ಬೇಡಿ, ವಿಡಿಯೋ ಮಾಡುವ ಬದಲು ಅವರಿಗೆ ಈ ವಿಷಯಗಳ ಬಗ್ಗೆ ತಿಳಿಸಿಕೊಡಬಹುದಿತ್ತಲ್ವಾʼ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼತಮಾಷೆ ಮಾಡುವ ಬದಲು, ಇಂತಹ ಮುಗ್ಧ ಮಾಹಿತಿಯನ್ನು ತಿಳಿಸಿಕೊಡಿʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ