ಅಯ್ಯೋ ಶೆಕೆ ತಡ್ಕೊಳೋಕೆ ಆಗ್ತಿಲ್ಲ, ಮೈ ಮೇಲೆ ಸ್ವಲ್ಪ ನೀರು ಹಾಕಣ್ಣೋ

ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಪ್ರಾಣಿಗಳಿಗೆ ಸಂಬಂಧಿಸಿದ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವು ದೃಶ್ಯಗಳು ನಮ್ಮ ಮನ ಗೆಲ್ಲುತ್ತವೆ. ಸದ್ಯ ಅಂತಹದೊಂದು ಮುದ್ದಾದ ವಿಡಿಯೋ ವೈರಲ್ ಆಗಿದ್ದು, ತನ್ನ ಮೈ ಮೇಲೆ ವ್ಯಕ್ತಿಯೊಬ್ಬರು ನೀರನ್ನು ಹಾಕಿದಾಗ ಬೀದಿ ನಾಯಿಯೊಂದು ಖುಷಿಯಿಂದ ಕುಣಿದಾಡಿದೆ.

ಅಯ್ಯೋ ಶೆಕೆ ತಡ್ಕೊಳೋಕೆ ಆಗ್ತಿಲ್ಲ, ಮೈ ಮೇಲೆ ಸ್ವಲ್ಪ ನೀರು ಹಾಕಣ್ಣೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 27, 2024 | 4:38 PM

ಬೇಸಿಗೆ ಕಾಲ ಬಂದೇ ಬಿಟ್ಟಿದೆ. ಬಿಸಿಲಿನ ಶಾಖ ನಿಧಾನಕ್ಕೆ ಹೆಚ್ಚಾಗುತ್ತಿದೆ. ಈ ಬೇಸಿಗೆಯ ರಣ ಬಿಸಿಲು ಭೂಮಿಯನ್ನು ಒಣಗಿಸುವುದು ಮಾತ್ರವಲ್ಲದೆ ನಮ್ಮ ಅರೋಗ್ಯದ ಮೇಲೂ ಹಲವಾರು ಪರಿಣಾಮಗಳನ್ನು ಬಿರುತ್ತದೆ. ಅಷ್ಟೇ ಅಲ್ಲದೆ ಈ ಸುಡು ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳು ಸಹ ಕುಡಿಯುವ ನೀರು ಮತ್ತು ಆಹಾರಕ್ಕಾಗಿ ಹುಡುಕಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮನುಷ್ಯರಾದ ನಾವು ಈ ಬೇಸಿಗೆಯಲ್ಲಿ ಕೂಲ್ ಆಗಿರಲು ಹಲವಾರು ಪ್ರಯತ್ನಗಳನ್ನು ಮಾಡುತ್ತಿರುತ್ತೇವೆ. ಆದರೆ ಮೂಕ ಪ್ರಾಣಿ ಪಕ್ಷಿಗಳು ಬಿಸಿಲ ತಾಪಕ್ಕೆ ಬಸವಳಿಯುತ್ತವೆ. ಅದೇ ರೀತಿ ಇಲ್ಲೊಂದು ಬಿಸಿಲ ಝಳಕ್ಕೆ ಬಸವಳಿದ ಬೀದಿ ನಾಯಿಯೊಂದು ತನ್ನ ಮೈ ಮೇಲೆ ವ್ಯಕ್ತಿಯೊಬ್ಬರು ನೀರು ಚಿಮುಕಿಸಿದಾಗ ಖುಷಿಯಿಂದ ಕುಣಿದಾಡಿದೆ. ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಬಿಸಿಲ ತಾಪದಿಂದ ತತ್ತರಿಸಿದ ಬೀಡಾಡಿ ಶ್ವಾನವೊಂದು ಮೈ ಮೇಲೆ ನೀರು ಬಿದ್ದಾಗ ಸಂತೋಷದಿಂದ ಕುಣಿದಾಡುವ ದೃಶ್ಯವನ್ನು ಕಾಣಬಹುದು.

@viralwallet ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ಇಂದು ನಮ್ಮ ಸಿಟಿಯಲ್ಲಿ ತಾಪಮಾನ ತುಂಬಾನೇ ಹೆಚ್ಚಾಗಿತ್ತು. ಈ ಪರಿಸ್ಥಿತಿಯಿಂದ ನಲುಗಿದ ಬೀದಿನಾಯಿ ವ್ಯಕ್ತಿಯೊಬ್ಬರ ಬಳಿ ಮೈ ಮೇಲೆ ನೀರು ಹಾಕುವಂತೆ ಕೇಳಿತು. ಮೈ ಮೇಲೆ ನೀರು ಬಿದ್ದಾಗ ಅದು ಸಂತೋಷದಿಂದ ಕುಣಿಯಿತು ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

View this post on Instagram

A post shared by Viral Wallet (@viralwallet)

ವೈರಲ್ ವಿಡಿಯೋದಲ್ಲಿ ಯಾವುದೋ ನಗರದಲ್ಲಿ ಬಿಸಿಲಿನ ಶಾಖಕ್ಕೆ ಬಸವಳಿದು ಪೆಟ್ರೋಲ್ ಬಂಕ್ ಬಳಿ ಬಂದಂತಹ ಬೀದಿ ನಾಯಿಯೊಂದು, ‘ಈ ಸುಡು ಬಿಸಿಲಿಗೆ ಮೈಯೆಲ್ಲಾ ಸುಟ್ಟು ಹೋದಂತಾಗಿದೆ, ಪ್ಲೀಸ್ ನನ್ ಮೈ ಮೇಲೆ ಸ್ವಲ್ಪ ನೀರು ಹಾಕಣ್ಣೋ’ ಎಂದು ಅಲ್ಲಿನ ಕೆಲಸದವರ ಬಳಿ ಕೇಳುತ್ತೆ. ಶ್ವಾನದ ಭಾವನೆಯನ್ನು ಅರ್ಥ ಮಾಡಿಕೊಂಡಂತಹ ಆ ವ್ಯಕ್ತಿ ತಕ್ಷಣ ಅಲ್ಲಿದ್ದ ಟ್ಯಾಂಕ್ ನಿಂದ ನೀರನ್ನು ತೆಗೆದು ಶ್ವಾನದ ಮೈ ಮೇಲೆ ಚಿಮುಕಿಸುತ್ತಾರೆ. ಮೈ ಮೇಲೆ ನೀರು ಬೀಳುತ್ತಿದ್ದಂತೆ ಶ್ವಾನವು ಅಬ್ಬಬ್ಬಾ ಈಗ ತುಂಬಾನೇ ರಿಫ್ರೆಶ್ ಆಯಿತು ಎನ್ನುತ್ತಾ ಖುಷಿಯಿಂದ ಕುಣಿದು ಕುಪ್ಪಲಿಸುವಂತಹ ಸುಂದರ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಪ್ರಯಾಣಿಸುವಾಗ ಫೋನ್ ಚಾರ್ಜ್ ಏಕೆ ಬೇಗ ಖಾಲಿಯಾಗುತ್ತೆ ಗೊತ್ತಾ? ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ

ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 1 ಲಕ್ಷಕ್ಕೂ ಅಧಿಕ ಲೈಕ್ಸ್ ಗಳನ್ನು ಪಡೆದುಕೊಂದಿದೆ. ಹಾಗೂ ಹಲವಾರು ಕಾಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ‘ಆ ವ್ಯಕ್ತಿ ತುಂಬಾನೇ ಹೃದಯವಂತ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ಧನ್ಯವಾದಗಳು….”ಎಲ್ಲರೂ ಜೀವನದಲ್ಲಿ ದೊಡ್ಡ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ ಆದರೆ ನಾವೆಲ್ಲರೂ ಹೀಗೆ ಬಹಳ ಪ್ರೀತಿಯಿಂದ ಸಣ್ಣಪುಟ್ಟ ಕೆಲಸಗಳನ್ನು ಮಾಡಬಹುದು’ ಎಂಬ ಕಾಮೆಟ್ ಬರೆದುಕೊಂದ್ದಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಈ ದೃಶ್ಯ ತುಂಬಾನೇ ಮುದ್ದಾಗಿದೆ’ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ವಿಡಿಯೋಗೆ ಭಾರೀ ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು