Viral Video: ಪ್ರಯಾಣಿಸುವಾಗ ಫೋನ್ ಚಾರ್ಜ್ ಏಕೆ ಬೇಗ ಖಾಲಿಯಾಗುತ್ತೆ ಗೊತ್ತಾ? ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ

ಸಾಮಾನ್ಯವಾಗಿ ನಾವೆಲ್ಲರೂ ಎಲ್ಲಾದರೂ ಹೊರಗಡೆ ಹೋಗಲು ನಿರ್ಧರಿಸಿದಾಗ ಮೊದಲು ಮಾಡುವ ಕೆಲಸ ಏನಪ್ಪಾ ಅಂದ್ರೆ, ಮೊಬೈಲ್ ಫೋನನ್ನು ಚಾರ್ಜ್ ಮಾಡುವಂತಹದ್ದು, ಹೀಗೆ 100% ಚಾರ್ಜ್ ಮಾಡಿದ್ರೂ ಕೂಡಾ ಹೊರಗಡೆ ಮೊಬೈಲ್ ಫೋನ್ ಯೂಸ್ ಮಾಡದಿದ್ರೂ ಸ್ವಲ್ಪ ಸಮಯದ ಬಳಿಕ ಚಾರ್ಜ್ ಎಲ್ಲಾ ಖಾಲಿಯಾಗಿರುತ್ತದೆ. ನೀವು ಕೂಡ ಇದನ್ನು ಗಮನಿಸಿರಬಹುದಲ್ವಾ. ಅಷ್ಟಕ್ಕೂ ಪ್ರಯಾಣಿಸುವಾಗ ಮೊಬೈಲ್ ಫೋನ್ ಯೂಸ್ ಮಾಡದಿದ್ರೂ ಕೂಡಾ, ಚಾರ್ಜ್ ಏಕೆ ಖಾಲಿಯಾಗುತ್ತೆ ಗೊತ್ತಾ? ಈ ಕುರಿತ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

Viral Video: ಪ್ರಯಾಣಿಸುವಾಗ ಫೋನ್ ಚಾರ್ಜ್ ಏಕೆ ಬೇಗ ಖಾಲಿಯಾಗುತ್ತೆ ಗೊತ್ತಾ? ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 27, 2024 | 3:31 PM

ಸಾಮಾನ್ಯವಾಗಿ ನಾವು ಎಲ್ಲೇ ಹೋದ್ರೂ ಕೂಡಾ ಮೊಬೈಲ್ ಫೋನ್ ಅನ್ನು ಜೊತೆಗೆ ತಗೊಂಡು ಹೋಗ್ತೇವೆ. ಅದ್ರಲ್ಲೂ ಎಲ್ಲಾದರೂ ಹೊರಗಡೆ ಪ್ರಯಾಣಿಸಲು ನಿರ್ಧರಿಸಿದಾಗ ಬಹುತೇಕ ನಾವೆಲ್ರೂ ಮೊದಲು ಮಾಡುವ ಕೆಲಸ ಏನಪ್ಪಾ ಅಂದ್ರೆ, ಮೊಬೈಲ್ ಅನ್ನು ಚಾರ್ಜ್ ಗೆ ಇಡುವಂತಹದ್ದು, ಹೀಗೆ ಹೊರಗಡೆ ಪ್ರಯಾಣಿಸುವ ಸಂದರ್ಭದಲ್ಲಿ ಮೊಬೈಲ್ ಫೋನನ್ನು 100% ಚಾರ್ಜ್ ಮಾಡಿದ್ದರೂ, ವಾಪಸ್ ಮನೆಗೆ ಬರುವ ಸಂದರ್ಭದಲ್ಲಿ ಫೋನ್ ಚಾರ್ಜ್ ಫುಲ್ ಖಾಲಿಯಾಗಿರುತ್ತದೆ. ಅಲ್ಲಾ ನಾನು ಹೊರಗಡೆ ಹೋದಾಗ ಹೆಚ್ಚು ಮೊಬೈಲ್ ಯೂಸ್ ಮಾಡ್ಲೇ ಇಲ್ಲಾ, ಆದ್ರೂ ಹೆಂಗೆ ಇಷ್ಟು ಚಾರ್ಜ್ ಖಾಲಿಯಾಯ್ತು ಅಂತ ನಿಮಗೂ ಅನಿಸಿದೆಯಾ. ಹೀಗೆ ಪ್ರಯಾಣಿಸುವಾಗ ಮೊಬೈಲ್ ಚಾರ್ಜ್ ಖಾಲಿಯಾಗುವುದರ ಹಿಂದೆಯೂ ಒಂದು ಇಂಟರೆಸ್ಟಿಂಗ್ ಕಾರಣವಿದೆಯಂತೆ. ಈ ಕುರಿತ ಮಾಹಿತಿಯನ್ನು ʼವಾಯ್ಸ್ ಆಫ್ ಮಲೆನಾಡುʼ ಎಂಬ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದೆ.

ವಾಯ್ಸ್ ಆಫ್ ಮಲೆನಾಡು (@voice_of_malenadu) ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಈ ಇಂಟರೆಸ್ಟಿಂಗ್ ಮಾಹಿತಿಯನ್ನು ಹಂಚಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಅವರು ಪ್ರಯಾಣಿಸುವ ಸಂದರ್ಭದಲ್ಲಿ ಮೊಬೈಲ್ ಚಾರ್ಜ್ ಏಕೆ ಬೇಗ ಖಾಲಿಯಾಗುತ್ತದೆ ಎಂಬುದರ ಬಗ್ಗೆ ವಿವರಿಸಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ಅವರು, ಟ್ರಾವೆಲ್ ಮಾಡುವಾಗ ಫೋನ್ ಚಾರ್ಜ್ ಏಕೆ ಕಡಿಮೆಯಾಗುತ್ತೆ ಗೊತ್ತಾ? ಸಾಮಾನ್ಯವಾಗಿ ನಾವು ಪ್ರಯಾಣಿಸುವಾಗ ಫೋನ್ ಬಳಸದೇ ಇದ್ರೂ ಕೂಡಾ ಫೋನ್ ಚಾರ್ಜ್ ಖಾಲಿಯಾಗುತ್ತೆ. ಅದಕ್ಕೆ ಮುಖ್ಯ ಕಾರಣ ಮೊಬೈಲ್ ಅಲ್ಲಿರುವ ಸಿಮ್ ಕಾರ್ಡ್. ಹೌದು ಪ್ರಯಾಣಿಸುವ ಸಮಯದಲ್ಲಿ ಸಿಮ್ ಕಾರ್ಡ್ ಹತ್ತಿರದ ನೆಟ್ವರ್ಕ್ ಟವರ್ ಗಳಿಗೆ ಕನೆಕ್ಟ್ ಆಗಲು ಪ್ರಯತ್ನಿಸುತ್ತದೆ. ಪ್ರಯಾಣಿಸುವ ಸಂದರ್ಭದಲ್ಲಿ ಈ ಪ್ರೋಸೆಸ್ ನಿರಂತರವಾಗಿ ನಡೆಯುತ್ತಲೇ ಇರುವುದರಿಂದ ನಾವು ಫೋನ್ ಯೂಸ್ ಮಾಡಿಲ್ಲ ಅಂದ್ರೂ ಫೋನ್ ಚಾರ್ಜ್ ಕಡಿಮೆಯಾಗುತ್ತದೆ. ಒಂದು ವೇಳೆ ಈ ಸಮಯದಲ್ಲಿ ಫ್ಲೈಟ್ ಮೋಡ್ ಆನ್ ಮಾಡಿದ್ರೆ, ಬ್ಯಾಟರಿ ಸೇವ್ ಮಾಡಬಹುದು ಎಂಬ ಇಂಟರೆಸ್ಟಿಂಗ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ನೀರು ಮಿತವಾಗಿ ಬಳಸುವ ಟಾಯ್ಲೆಟ್ ಫ್ಲಶಿಂಗ್ ತಯಾರಿಸಿ: ಕಂಪನಿಗಳಿಗೆ ಭಾಸ್ಕರ್ ರಾವ್ ಕರೆ

ಫೆಬ್ರವರಿ 14 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 88 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಲವಾರು ಕಾಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಈ ಇನ್ಫರ್ಮೇಷನ್ ತುಂಬಾ ಅದ್ಭುತವಾಗಿತ್ತುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಸಿಮ್ ಕಾರ್ಡ್ ಅನ್ನು ಮೊಬೈಲಿನಿಂದ ತೆಗೆದ್ರೆ ಸಾಕಪ್ಪಾ ಚಾರ್ಜ್ ಸೇವ್ ಆಗುತ್ತೆʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ವಿಷ್ಯ ನನ್ಗೆ ಮೊದ್ಲೇ ಗೊತ್ತಿತ್ತುʼ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್