ನೀರು ಮಿತವಾಗಿ ಬಳಸುವ ಟಾಯ್ಲೆಟ್ ಫ್ಲಶಿಂಗ್ ತಯಾರಿಸಿ: ಕಂಪನಿಗಳಿಗೆ ಭಾಸ್ಕರ್ ರಾವ್ ಕರೆ
"ನೀರು ಮಿತವಾಗಿ ಬಳಸುವ ಟಾಯ್ಲೆಟ್ ಫ್ಲಶಿಂಗ್ ತಯಾರಿಸಿ" ಎಂದು ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಭಾರತದಲ್ಲಿನ ಟಾಪ್ ಟಾಯ್ಲೆಟ್ ಸೀಟ್ ತಯಾರಕ ಕಂಪೆನಿಗಳಾದ ಹಿಂದ್ವೇರ್,ಪ್ಯಾರಿವೇರ್ ಇಂಡಿಯಾ, ಜಾಗ್ವರ್ ಮುಂತಾದ ಕಂಪನಿಗಳಿಗೆ ಕರೆ ನೀಡಿದ್ದಾರೆ.
ಬೇಸಿಗೆಯ ತಿಂಗಳು ಪ್ರಾರಂಭವಾಗುತ್ತಿದ್ದಂತೆ ನೀರಿಲ್ಲದೇ ಪರಿತಪಿಸುವ ಜೀವ ಸಂಕುಲ. ಆದ್ದರಿಂದ ನೀರು ಭೂಮಿಯ ಮೇಲಿನ ದೇವರ ಅಮೂಲ್ಯ ಕೊಡುಗೆ ಎಂದು ಪ್ರತಿಯೊಬ್ಬರು ತಿಳಿದುಕೊಳ್ಳುವುದು ಅವಶ್ಯಕ. ಈ ಮೂಲಕ ಮನೆಯಿಂದಲೇ ಪಾತ್ರೆ ಮತ್ತು ಬಟ್ಟೆ ತೊಳೆಯಲು, ಸ್ನಾನ ಸೇರಿದಂತೆ ದಿನನಿತ್ಯ ಮಿತ ಪ್ರಮಾಣದಲ್ಲಿ ನೀರು ಬಳಸುವುದರ ಬಗ್ಗೆ ನಿಮ್ಮೊಂದಿಗೆ ನಿಮ್ಮ ಮಕ್ಕಳಿಗೆ ತಿಳುವಳಿಕೆ ನೀಡಬೇಕು. ಇದಕ್ಕೊಂದು ಉತ್ತಮ ನಿದರ್ಶನವೆಂಬಂತೆ ನೀರಿನ ಸಂರಕ್ಷಣೆಯ ಕುರಿತು ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಇತ್ತಿಚೆಗಷ್ಟೇ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹಂಚಿಕೊಂಡಿರುವ ಪೋಸ್ಟ್ನಲ್ಲಿ ಹಿಂದ್ವೇರ್,ಪ್ಯಾರಿವೇರ್ ಇಂಡಿಯಾ, ಜಾಗ್ವರ್ ಮುಂತಾದ ಭಾರತದಲ್ಲಿನ ಟಾಪ್ ಟಾಯ್ಲೆಟ್ ಸೀಟ್ ತಯಾರಕ ಕಂಪೆನಿಗಳನ್ನು ಪ್ರಸ್ತಾಪಿಸಿದ್ದಾರೆ. “ಸಾಮಾನ್ಯವಾಗಿ ಶೌಚಾಲಯ ಬಳಸುವವರಿಗೆ ಹೋಲಿಸಿದರೆ, ಫ್ಲಶಿಂಗ್ ಮೂಲಕ ಶೌಚಾಲಯ ಬಳಸುವವರು ನೀರನ್ನು ಬಳಸುವ ಪ್ರಮಾಣವನ್ನು ಸುಮಾರು 20 ಪಟ್ಟು ಹೆಚ್ಚಿದೆ. ಈ ಮೂಲಕ ನೀರಿನ ಕೊರತೆಯನ್ನು ನೀಗಿಸಲು, ನೀರನ್ನು ಉಳಿಸುವಂತಹ ಟಾಯ್ಲೆಟ್ ಫ್ಲಶಿಂಗ್ ಉಪಕರಣಗಳನ್ನು ವಿನ್ಯಾಸಗೊಳಿಸುವ ಬಗ್ಗೆ ಯೋಚಿಸುತ್ತೀರಿ ಎಂದು ನಾವು ನಿರೀಕ್ಷಿಸುತ್ತೇವೆ ” ಎಂದು ಟಾಯ್ಲೆಟ್ ಸೀಟ್ ತಯಾರಕ ಕಂಪೆನಿಗಳನ್ನು ಪ್ರಸ್ತಾಪಿಸಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಹಿಂದ್ವೇರ್ ಕಂಪೆನಿ ಪ್ರತಿಕ್ರಿಯಿಸಿದ್ದು, “ನೀರು ಹೆಚ್ಚು ಪೋಲಾಗದಂತೆ ಟಾಯ್ಲೆಟ್ ಫ್ಲಶಿಂಗ್ ಅನ್ನು ವಿನ್ಯಾಸಗೊಳಿಸುವುದರ ಬಗ್ಗೆ ನಮ್ಮ ಸಂಬಂಧಪಟ್ಟ ತಂಡದೊಂದಿಗೆ ಚರ್ಚೆ ನಡೆಸುತ್ತೇವೆ” ಎಂದು ಹೇಳಿದೆ.
ಪೋಸ್ಟ್ ಇಲ್ಲಿದೆ ನೋಡಿ:
Toilet seat makers @Hindware_India @Parryware_India , Toto, Kohler , Cera, Belmonte, Jaguar and many of you … .With such a huge water shortage, we expect you to design water saving flushing equipment… 20 litres of potable water with every single usage is such a waste of…
— Bhaskar Rao (@Nimmabhaskar22) February 27, 2024
ಇದನ್ನೂ ಓದಿ: ಹಾಟ್ ಆಗಿ ಕಾಣಲು ತನ್ನ ರಕ್ತವನ್ನು ತಾನೇ ಕುಡಿಯುತ್ತಾಳೆ ಈ ಯುವತಿ
ಪೋಸ್ಟ್ಗೆ ಸಾಕಷ್ಟು ನೆಟ್ಟಿಗರು ಪ್ರತಿಕ್ರಿಯಿಸಿದ್ದು, “ನೀರಿನ ಉಳಿತಾಯದ ಪ್ರಮುಖ ಭಾಗವೆಂದರೆ ಒಮ್ಮೆ ಬಳಸಿದ ನೀರಿನ ಮರು ಬಳಕೆ ಮಾಡುವುದು” ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ. “ನೀರನ್ನು ಉಳಿಸಲು ನಾನು ನಿನ್ನೆಯಿಂದ ಬಕೆಟ್ ಮತ್ತು ಮಗ್ ಬಳಸಿ ಸ್ನಾನ ಮಾಡಲು ಪ್ರಾರಂಭಿಸಿದೆ. ಶವರ್ ಬಳಸದೇ ಶೇಕಡಾ 50 ರಷ್ಟು ನೀರಿನ ಬಳಕೆ ಕಡಿಮೆ ಮಾಡಬಹುದು” ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:09 pm, Tue, 27 February 24