ವಿಮೆ ಹಣ ಪಡೆಯಲು ತನ್ನ ಎರಡೂ ಕಾಲುಗಳನ್ನು ಕತ್ತರಿಸಿ ಬಕೆಟ್ ಒಳಗೆ ಇರಿಸಿದ್ದ ವ್ಯಕ್ತಿ

ಕಳೆದ ವರ್ಷ ನವೆಂಬರ್‌ನಲ್ಲಿ ಈತ ತನ್ನ ಎರಡೂ ಕಾಲುಗಳನ್ನು ಕತ್ತರಿಸಿ, ಕಾಲುಗಳನ್ನು ಸಂಬಂಧಿಕರೊಬ್ಬರ ಸಹಾಯದಿಂದ ಬಕೆಟ್‌ನಲ್ಲಿ ಇರಿಸಿ ಅದರ ಮೇಲೆ ಟೈಯರ್​​​ನಿಂದ ಮುಚ್ಚಿ ಅಡಗಿಸಿಟ್ಟಿದ್ದ. ಬಳಿಕ ವಿಮೆ ಹಣ ಪಡೆಯಲು ಆಕ್ಸಿಡೆಂಟ್​​​​​ ಆಗಿದೆ ಸುಳ್ಳು ಕಥೆ ಕಟ್ಟಿರುವುದು ತನಿಖೆಯ ವೇಳೆ ತಿಳಿದುಬಂದಿದೆ.

ವಿಮೆ ಹಣ ಪಡೆಯಲು ತನ್ನ ಎರಡೂ ಕಾಲುಗಳನ್ನು ಕತ್ತರಿಸಿ ಬಕೆಟ್ ಒಳಗೆ ಇರಿಸಿದ್ದ ವ್ಯಕ್ತಿ
ವಿಮೆ ಹಣ ಪಡೆಯಲು ತನ್ನ ಎರಡೂ ಕಾಲು ಕತ್ತರಿಸಿದ ವ್ಯಕ್ತಿImage Credit source: Pinterest
Follow us
ಅಕ್ಷತಾ ವರ್ಕಾಡಿ
|

Updated on:Feb 27, 2024 | 11:11 AM

ಮಿಸೌರಿ: ವಿಮೆ ಹಣವನ್ನು ಪಡೆಯಲು ಸಣ್ಣಪುಟ್ಟ ವಂಚನೆಗಳನ್ನು ಮಾಡುವವರನ್ನು ನೀವು ನೋಡಿರಬಹುದು. ಆದರೆ ಅಮೆರಿಕದ ಮಿಸೌರಿಯಲ್ಲಿ ನೆಲೆಸಿರುವ 60ವರ್ಷದ ವ್ಯಕ್ತಿಯೊಬ್ಬರು ಯಾರೂ ಊಹಿಸಲೂ ಸಾಧ್ಯವಾಗದಂತಹ ಅಪರಾಧ ಎಸಗಿದ್ದಾರೆ. ಆರೋಗ್ಯ ವಿಮೆ ಹಣವನ್ನು ಪಡೆಯಲು ತನ್ನ ಎರಡು ಕಾಲುಗಳನ್ನು ಕತ್ತರಿಸಿದ್ದಾರೆ. ಇತಿಹಾಸದಲ್ಲೇ ಇದೊಂದು ವಿಚಿತ್ರ ಪ್ರಕರಣ ಎಂದು ಪ್ರಕರಣದ ತನಿಖಾಧಿಕಾರಿ ಹೊವೆಲ್ ಕೌಂಟಿ ಶೆರಿಫ್ ತಿಳಿಸಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಈತ ತನ್ನ ಎರಡೂ ಕಾಲುಗಳನ್ನು ಕತ್ತರಿಸಿದ್ದ. ಇದಲ್ಲದೇ ವಿಮೆ ಹಣ ಪಡೆಯಲು ಟ್ರ್ಯಾಕ್ಟರ್‌ನ ಹಿಂಬದಿಯಲ್ಲಿ ಅಳವಡಿಸಿದ್ದ ಮೊವರ್‌ನಿಂದ ಅವರ ಕಾಲು ತುಂಡಾಗಿದೆ ಎಂದು ಹೇಳಿದ್ದರು. ಆದರೆ, ಈ ಅಪಘಾತದ ನಂತರ ಅವರ ಕಾಲು ಎಲ್ಲಿಯೂ ಪತ್ತೆಯಾಗಿರಲ್ಲಿಲ್ಲ. ಇದಲ್ಲದೇ ಕಾಲಿನ ಗಾಯ ಮೊವರ್‌ನಿಂದ ಕಾಲು ಕತ್ತರಿಸಿದಂತೆ ಕಾಣಿಸುತ್ತಿರಲಿಲ್ಲ. ಇದರಿಂದ ಪೊಲೀಸರಲ್ಲಿ ಅನುಮಾನ ಹುಟ್ಟಿಕೊಂಡಿದೆ.

ತನಿಖೆ ಪ್ರಾರಂಭಿಸಿದಾಗ ವ್ಯಕ್ತಿ ಪಾರ್ಶ್ವವಾಯುವಿನಿಂದ ತನ್ನ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದ ಎಂದು ತಿಳಿದುಬಂದಿದೆ. ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ವ್ಯಕ್ತಿ ಟ್ರ್ಯಾಕ್ಟರ್ ಹೇಗೆ ಚಲಾಯಿಸಿದ ಎಂಬ ಮತ್ತೊಂದು ಪ್ರಶ್ನೆ ಪೊಲೀಸರಲ್ಲಿ ಹುಟ್ಟಿಕೊಂಡಿದೆ. ಈ ವೇಳೆ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಸತ್ಯಾಂಶ ತಿಳಿದು ಗಾಬರಿಯಾಗಿದೆ. ವಿಮೆ ಹಣ ಪಡೆಯಲು ಈ ವ್ಯಕ್ತಿ ತನ್ನ ಎರಡೂ ಕಾಲುಗಳನ್ನು ಕತ್ತರಿಸಿ ಬಕೆಟ್ ಒಳಗೆ ಅಡಗಿಸಿಟ್ಟಿದ್ದ. ಬಳಿಕ ಆಕ್ಸಿಡೆಂಟ್​​​​​ ಆಗಿದೆ ಸುಳ್ಳು ಕಥೆ ಹೇಳಿರುವುದು ತನಿಖೆಯ ವೇಳೆ ತಿಳಿದುಬಂದಿದೆ.

ಇದನ್ನೂ ಓದಿ: ಹಾಟ್ ಆಗಿ ಕಾಣಲು ತನ್ನ ರಕ್ತವನ್ನು ತಾನೇ ಕುಡಿಯುತ್ತಾಳೆ ಈ ಯುವತಿ

ಪಾರ್ಶ್ವವಾಯುವಿಗೆ ಒಳಗಾದ ತನ್ನ ಕಾಲಿನಿಂದ ಯಾವುದೇ ಪ್ರಯೋಜನವಾಗದ ಕಾರಣ, ಅದನ್ನು ಕತ್ತರಿಸುವ ಮೂಲಕ ಹಣ ಪಡೆಯಲು ಬಯಸಿದ್ದರು. ಬಳಿಕ ಕತ್ತರಿಸಿದ ಕಾಲುಗಳನ್ನು ಸಂಬಂಧಿಕರೊಬ್ಬರ ಸಹಾಯದಿಂದ ಬಕೆಟ್‌ನಲ್ಲಿ ಇರಿಸಿ ಅದರ ಮೇಲೆ ಟೈಯರ್​​​ನಿಂದ ಮುಚ್ಚಿ ಅಡಗಿಸಿಟ್ಟಿದ್ದರು.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:08 am, Tue, 27 February 24

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್