ಉತ್ತರ ಪ್ರದೇಶ: ಪತಿ ಮೊಮೊಸ್ ತರಲಿಲ್ಲ ಎನ್ನುವ ಕಾರಣಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ
ಪತಿ ಮೊಮೊಸ್ ತರುವುದನ್ನು ಮರೆತಿದ್ದಾರೆ ಎನ್ನುವ ಕಾರಣಕ್ಕೆ ಪತ್ನಿಯೊಬ್ಬಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದೀಗ ರಾಜಿ ಸಂಧಾನ ನಡೆದಿದ್ದು ಪತಿ ವಾರಕ್ಕೆ ಎರಡು ದಿನ ಮೊಮೊಸ್ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
ಪ್ರತಿ ಮನೆಯಲ್ಲೂ ಪತಿ-ಪತ್ನಿ ನಡುವೆ ಸಣ್ಣ ಪುಟ್ಟ ವಿಚಾರಕ್ಕೆ ಮನಸ್ತಾಪ, ಕೋಪಗಳೆಲ್ಲವೂ ಸಾಮಾನ್ಯ. ಆದರೆ ಪತಿ ಮೊಮೊಸ್ ತರಲಿಲ್ಲ ಎನ್ನುವ ಕಾರಣಕ್ಕೆ ಪತ್ನಿಯೊಬ್ಬಳು ಪೊಲೀಸ್ ಠಾಣೆ ಮೆಟ್ಟಿಲೇರಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮಹಿಳೆಯೊಬ್ಬರು ತನ್ನ ಪತಿಗೆ ಮೊಮೊಸ್ ತರುವಂತೆ ಕೇಳಿದ್ದರು, ಆದರೆ ಪತಿ ತರದಿದ್ದಾಗ ಜಗಳ ಆರಂಭವಾಗಿತ್ತು ಅದು ಪೊಲೀಸರವರೆಗೂ ತಲುಪಿದೆ. ಪತ್ನಿ ಪೊಲೀಸರಿಗೆ ಕರೆ ಮಾಡಿ ಮೊಮೊಸ್ ತರದ ಪತಿ ವಿರುದ್ಧ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಪ್ರಕರಣವನ್ನು ಕೌಂಟುಂಬಿಕ ಸಲಹಾ ಕೇಂದ್ರಕ್ಕೆ ವರ್ಗಾಯಿಸಿದ್ದಾರೆ. ನಂತರ ಕೌಂಟುಂಬಿಕ ಸಲಹಾ ಕೇಂದ್ರದ ಅಧಿಕಾರಿಗಳು ಪತಿ-ಪತ್ನಿಯರ ನಡುವಿನ ಜಗಳ ಬಗೆಹರಿಸಲು ಠಾಣೆಗೆ ಕರೆ ತಂದಿದ್ದರು.
ಇದೀಗ ಒಂದು ಒಪ್ಪಂದಕ್ಕೆ ಬರಲಾಗಿದ್ದು, ಪತಿ ತನ್ನ ಪತ್ನಿಗೆ ವಾರಕ್ಕೆ ಎರಡು ಬಾರಿ ಮೊಮೊಸ್ ತಿನ್ನಿಸುವುದಾಗಿ ಭರವಸೆ ನೀಡಿದ್ದಾನೆ. ನಂತರ ಇಬ್ಬರ ನಡುವಿನ ಜಗಳ ಕೊನೆಗೊಂಡಿದೆ. ಕೆಲವು ದಿನಗಳ ಹಿಂದಷ್ಟೇ ಅವರಿಬ್ಬರ ಮದುವೆಯಾಗಿತ್ತು, ಭಾರತದಲ್ಲಿ ಅತಿ ಹೆಚ್ಚು ಪ್ರಚಲಿತದಲ್ಲಿರುವ ತಿಂಡಿ ಮೊಮೊಸ್ ಆಗಿದೆ.
ಮತ್ತಷ್ಟು ಓದಿ:ಇಡ್ಲಿ ಪ್ರಿಯರಿಗೆ ಶಾಕಿಂಗ್ ಸುದ್ದಿ; ಇನ್ಮುಂದೆ ಈ ತಿಂಡಿ ತಿನ್ನುವಾಗ ಯೋಚಿಸಬೇಕು!
ಕಳೆದ ತಿಂಗಳಷ್ಟೇ ದೆಹಲಿಯಲ್ಲಿ ಮೊಮೊಸ್ ತಿನ್ನುತ್ತಿದ್ದ ಯುವಕನೊಬ್ಬ ಹೆಚ್ಚುವರಿಯಾಗಿ ಚಟ್ನಿ ಕೇಳಿದ್ದಕ್ಕೆ ಅಂಗಡಿಯವ ಚಾಕುವಿನಿಂದ ಇರಿದಿರುವ ಘಟನೆ ನಡೆದಿತ್ತು. ದೆಹಲಿಯ ಶಾಹದಾರ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಮೊಮೊಸ್ ತಿನ್ನುತ್ತಿದ್ದ ಸಂದೀಪ್ ಎಂಬ ವ್ಯಕ್ತಿ ಅಂಗಡಿಯವ ವಿಕಾಸ್ಗೆ ಹೆಚ್ಚುವರಿ ಚಟ್ನಿ ಕೊಡುವಂತೆ ಕೇಳಿದ್ದ, ಆಗ ಜಗಳ ಆರಂಭವಾಗಿತ್ತು.
ಸೀರೆ ಕೊಡಿಸಲ್ಲ ಎಂದು ಜಗಳ ಹತ್ರಾಸ್ನ ಯುವಕನೊಬ್ಬ 6 ತಿಂಗಳ ಹಿಂದೆ ರೋಹ್ಟಾದ ಹುಡುಗಿಯನ್ನು ಮದುವೆಯಾಗಿದ್ದ. ಪತಿ ತನಗೆ ಇಷ್ಟವಾದ ಸೀರೆಗಳನ್ನು ತಂದುಕೊಟ್ಟಿಲ್ಲ ಎಂದು ಮಹಿಳೆ ಆರೋಪಿಸಿದ್ದಾಳೆ. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದ್ದು, ಪತ್ನಿ ಕೋಪಗೊಂಡು ಪೋಷಕರ ಮನೆಗೆ ಹೋಗಿದ್ದಾಳೆ, ಇದು ಪತಿ-ಪತ್ನಿಯರ ನಡುವಿನ ಎರಡನೇ ಕೌನ್ಸೆಲಿಂಗ್ ಆಗಿದೆ. ಈಗ ಇಬ್ಬರೂ ರಾಜಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ