AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಕ್ ಶೋನಲ್ಲಿ ‘ಹನಿಮೂನ್’ ಬಗ್ಗೆ ಪ್ರಶ್ನೆ ಕೇಳಿದ ನಿರೂಪಕನಿಗೆ ಕಪಾಳಮೋಕ್ಷ ಮಾಡಿದ ಗಾಯಕಿ

ಪಾಕಿಸ್ತಾನಿ ಗಾಯಕಿ ಶಾಜಿಯಾ ಮಂಜೂರ್ ಲೈವ್ ಟಿವಿ ಕಾರ್ಯಕ್ರಮವೊಂದರಲ್ಲಿ ಕೋಪಗೊಂಡು ಸಹ-ನಿರೂಪಕನಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. 'ಹನಿಮೂನ್' ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಗಾಯಕಿ ಸಹ ನಿರೂಪಕನ ಮೇಲೆ ಕೋಪಗೊಂಡಿರುವುದು ತಿಳಿದುಬಂದಿದೆ.

ಟಾಕ್ ಶೋನಲ್ಲಿ  'ಹನಿಮೂನ್' ಬಗ್ಗೆ ಪ್ರಶ್ನೆ ಕೇಳಿದ ನಿರೂಪಕನಿಗೆ ಕಪಾಳಮೋಕ್ಷ ಮಾಡಿದ ಗಾಯಕಿ
ನಿರೂಪಕನಿಗೆ ಕಪಾಳಮೋಕ್ಷ ಮಾಡಿದ ಗಾಯಕಿ
Follow us
ಅಕ್ಷತಾ ವರ್ಕಾಡಿ
|

Updated on:Feb 28, 2024 | 12:28 PM

ಪಾಕಿಸ್ತಾನಿ ಟಾಕ್​​ ಶೋಗಳು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನಪ್ರಿಯವಾಗುತ್ತಿವೆ. ಇತ್ತೀಚಿಗಷ್ಟೇ ಟಾಕ್​​ ಶೋ ಒಂದರಲ್ಲಿ ಪಾಕಿಸ್ತಾನಿ ಗಾಯಕಿ ಶಾಜಿಯಾ ಮಂಜೂರ್ ಲೈವ್​​​​ ಕಾರ್ಯಕ್ರಮದಲ್ಲೇ ಸಹ ನಿರೂಪಕನಿಗೆ ಸರಿಯಾಗಿ ಬೈದು ಕಪಾಳಮೋಕ್ಷ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ‘ಹನಿಮೂನ್’ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಗಾಯಕಿ ಸಹ ನಿರೂಪಕ ವಿರುದ್ಧ ಕೋಪಗೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ವೈರಲ್​​ ವಿಡಿಯೋದಲ್ಲಿ ಹಾಸ್ಯನಟ ಹಾಗೂ ಸಹ-ನಿರೂಪಕ ಶೆರ್ರಿ ನನ್ಹಾ “ನಮ್ಮ ಮದುವೆಯ ನಂತರ ಹನಿಮೂನ್​​​ಗಾಗಿ ನಾನು ನಿಮ್ಮನ್ನು ನೇರವಾಗಿ ಮಾಂಟೆ ಕಾರ್ಲೋಗೆ ಕರೆದುಕೊಂಡು ಹೋಗುತ್ತೇನೆ” ಎಂದು ಗಾಯಕಿ ಶಾಜಿಯಾ ಅವರಿಗೆ ಹಾಸ್ಯಸ್ಪದವಾಗಿ ಹೇಳಿದ್ದಾನೆ.

ಸಹ ನಿರೂಪಕನಿಗೆ ಗಾಯಕಿ ಕಪಾಳಮೋಕ್ಷ ಮಾಡಿರುವ ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಅನಂತ್ ಅಂಬಾನಿ ವಿವಾಹ ಪೂರ್ವ ಸಮಾರಂಭಕ್ಕೆ ತಯಾರಾಗುತ್ತಿದೆ 2500 ಬಗೆಯ ಖಾದ್ಯಗಳು

ಲೈವ್​​ ಕಾರ್ಯಕ್ರಮದಲ್ಲಿ ಹಾಸ್ಯನಟನ ಮಾತಿಗೆ ಗಾಯಕಿ ಕೋಪಗೊಂಡಿದ್ದಾಳೆ. “ಕಳೆದ ಬಾರಿಯೂ ನೀವು ಹೀಗೆಯೇ ವರ್ತಿಸಿದ್ದೀರೀ. ಪ್ರತೀ ಬಾರಿಯೂ ತಮಾಷೆಯಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮಹಿಳೆಯರೊಂದಿಗೆ ಈ ರೀತಿ ಅಸಭ್ಯವಾಗಿ ಮಾತನಾಡುವುದು ಎಷ್ಟು ಸರಿ?” ಎಂದು ಗಾಯಕಿ ವಾಗ್ವಾದಕ್ಕೀಳಿದ್ದಿದ್ದಾರೆ. ಇದಲ್ಲದೆ ಸಹ ನಿರೂಪಕನಿಗೆ ಕಪಾಳಮೋಕ್ಷ ಮಾಡಿದ್ದಾಳೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:26 pm, Wed, 28 February 24

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ