ಲಂಡನ್ನ ಕೆಫೆಯಲ್ಲಿ ವಿರಾಟ್-ಅನುಷ್ಕಾ ಮಗಳು; ವೈರಲ್ ಆಯ್ತು ಫೋಟೋ
ವಿರಾಟ್ ಹಾಗೂ ವಮಿಕಾ ಲಂಡನ್ನ ಹೋಟೆಲ್ ಒಂದಕ್ಕೆ ತೆರಳಿದ್ದಾರೆ. ಈ ಸಂದರ್ಭದ ಫೋಟೋನ ಫ್ಯಾನ್ಸ್ ಕ್ಲಿಕ್ಕಿಸಿ ವೈರಲ್ ಮಾಡಿದ್ದಾರೆ. ಇದರಲ್ಲಿ ವಿರಾಟ್ ಮಗಳು ವಮಿಕಾಳ ಮುಖ ಕಾಣಿಸಿಲ್ಲ. ವಿರಾಟ್ ಅವರು ತಲೆಗೆ ಹ್ಯಾಟ್ ಧರಿಸಿದ್ದಾರೆ. ಕೊಹ್ಲಿ ಎದುರು ಭಾಗದಲ್ಲಿ ಮಗಳು ವಮಿಕಾ ಕುಳಿತಿದ್ದಾಳೆ.
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ (Anushka Sharma) ದಂಪತಿ ಸದ್ಯ ಸುದ್ದಿಯಲ್ಲಿದ್ದಾರೆ. ಈ ದಂಪತಿಗೆ ಲಂಡನ್ನಲ್ಲಿ ಗಂಡುಮಗುವಿನ ಜನನ ಆಗಿದೆ. ಸದ್ಯ ಈ ದಂಪತಿ ಲಂಡನ್ನಲ್ಲೇ ಇದ್ದಾರೆ. ಇವರ ಜೊತೆ ವಮಿಕಾ ಕೂಡ ಲಂಡನ್ನಲ್ಲಿಯೇ ಇದ್ದಾಳೆ. ವಿರಾಟ್ ಹಾಗೂ ವಮಿಕಾ ಹೋಟೆಲ್ನಲ್ಲಿರೋ ಫೋಟೋ ಒಂದು ವೈರಲ್ ಆಗಿದೆ. ಈ ಫೋಟೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅನುಷ್ಕಾ ಹಾಗೂ ವಿರಾಟ್ ದಂಪತಿಗೆ ಶುಭಾಶಯಗಳ ಸುರಿಮಳೆ ಬಂದಿದೆ.
ಅನುಷ್ಕಾ ಶರ್ಮಾ ಅವರಿಗೆ ಗಂಡುಮಗು ಜನಿಸಿದೆ. ಈ ವಿಚಾರವನ್ನು ದಂಪತಿ ರಿವೀಲ್ ಮಾಡಿದ್ದಾರೆ. ಮಗುವಿಗೆ ಅಕಾಯ್ ಎಂದು ಹೆಸರು ಇಡಲಾಗಿದೆ. ಕಳೆದ ಬಾರಿ ಅನುಷ್ಕಾ ಮಗು ಜನಿಸುತ್ತಿರುವ ವಿಚಾರವನ್ನು ರಿವೀಲ್ ಮಾಡಿದ್ದರು. ಆದರೆ, ಈ ಬಾರಿ ಹಾಗಲ್ಲ. ಅವರು ಈ ವಿಚಾರವನ್ನು ಗುಟ್ಟಾಗಿಯೇ ಇಟ್ಟಿದ್ದರು. ಮಗು ಜನಿಸಿದ ನಂತರ ಅವರು ಈ ವಿಚಾರದ ಬಗ್ಗೆ ಹೇಳಿಕೊಂಡಿದ್ದಾರೆ. ಸದ್ಯ ಈ ದಂಪತಿ ಲಂಡನ್ನಲ್ಲೇ ಇದ್ದಾರೆ.
ಲಂಡನ್ನ ಹೋಟೆಲ್ ಒಂದಕ್ಕೆ ವಿರಾಟ್ ಹಾಗೂ ವಮಿಕಾ ತೆರಳಿದ್ದಾರೆ. ಈ ಸಂದರ್ಭದ ಫೋಟೋನ ಕೆಲವರು ಕ್ಲಿಕ್ಕಿಸಿ ವೈರಲ್ ಮಾಡಿದ್ದಾರೆ. ಇದರಲ್ಲಿ ವಮಿಕಾಳ ಮುಖ ಕಾಣಿಸಿಲ್ಲ. ವಿರಾಟ್ ಅವರು ತಲೆಗೆ ಹ್ಯಾಟ್ ಧರಿಸಿದ್ದಾರೆ. ಕೊಹ್ಲಿ ಎದುರು ಭಾಗದಲ್ಲಿ ಮಗಳು ವಮಿಕಾ ಕುಳಿತಿದ್ದಾಳೆ. ಈ ಫೋಟೋಗೆ ‘ಸೋ ಕ್ಯೂಟ್’ ಎಂದು ಕ್ಯಾಪ್ಶನ್ ನೀಡಲಾಗಿದೆ.
ಈ ಫೋಟೋಗೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ‘ಎಷ್ಟು ದೊಡ್ಡ ಆಗಿದ್ದಾಳೆ ವಮಿಕಾ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ‘ಮಗಳ ಪ್ರೀತಿಯ ಅಪ್ಪ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಅನುಷ್ಕಾಗೆ ಲಂಡನ್ನಲ್ಲಿ ಮಗು ಹುಟ್ಟಿದ್ದು ಏಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಇದೆ.
ಇದನ್ನೂ ಓದಿ:ಅನುಷ್ಕಾ ಶರ್ಮಾಗೆ ಅನಾರೋಗ್ಯ? ಮೂಡಿದೆ ದೊಡ್ಡ ಅನುಮಾನ
ಸದ್ಯ ಭಾರತ ಹಾಗೂ ಇಂಗ್ಲೆಂಡ್ ಟೆಸ್ಟ್ ನಡೆಯುತ್ತಿದೆ. ಇದಕ್ಕೆ ವಿರಾಟ್ ಕೊಹ್ಲಿ ಅವರು ಅಬ್ಸೆಂಟ್ ಆಗಿದ್ದಾರೆ. ಅವರು ಈ ಸಂದರ್ಭದಲ್ಲಿ ಕುಟುಂಬದ ಜೊತೆ ಇರೋ ನಿರ್ಧಾರಕ್ಕೆ ಬಂದಿದ್ದಾರೆ. ಅವರು ಮಗಳ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಅನುಷ್ಕಾ ಶರ್ಮಾ ಅವರು ಸದ್ಯ ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ