Viral Video: ಇದು ಕೆಂಪಿರುವೆ ಪಾನಿಪುರಿ, ಹೊಸ ಚಾಟ್ಸ್ ಹೇಗಿದೆ ನೋಡಿ
ಸೋಶಿಯಲ್ ಮೀಡಿಯಾದಲ್ಲಿ ಕೆಂಪಿರುವೆ ಪಾನಿಪುರಿಯ ವಿಡಿಯೋ ವೈರಲ್ ಆಗುತ್ತಿದೆ. varuntotlani ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋ 80,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಪಾನಿಪುರಿ ಪ್ರಿಯರಿಗೆ ಇದು ದೊಡ್ಡ ಆಘಾತವನ್ನುಂಟು ಮಾಡಿದ್ದು, ಅನೇಕರಲ್ಲಿ ಅಸಹ್ಯವನ್ನು ಉಂಟು ಮಾಡಿದೆ.
ಪಾನಿಪುರಿ, ಮಸಾಲೆಪುರಿ, ಸೇವ್ ಪುರಿ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಸಂಜೆ ಹೊತ್ತಾದರೆ ಸಾಕು ಚಾಟ್ಸ್ ಅಂಗಡಿ ಮುಂದೆ ಜನವೋ ಜನ. ಇದೀಗ ಪಾನಿಪುರಿಯ ಹೊಸ ರೆಸಿಪಿಯ ವಿಡಿಯೊವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಪಾನಿಪುರಿಯ ಮೇಲೆ ಸತ್ತ ಕೆಂಪಿರುವೆಯಿಂದ ಅಲಂಕಾರ ಮಾಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಸದ್ಯ ಈ ವಿಡಿಯೋ ಪಾನಿಪುರಿ ಪ್ರಿಯರಿಗೆ ಶಾಕ್ ನೀಡಿದೆ. varuntotlani ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಕೆಂಪಿರುವೆ ಪಾನಿಪುರಿಯ ವಿಡಿಯೋ ಹಂಚಿಕೊಳ್ಳಲಾಗಿದೆ. ಅಕ್ಟೋಬರ್ 14ರಂದು ಹಂಚಿಕೊಂಡಿರುವ ಈ ವಿಡಿಯೋ ಇಲ್ಲಿಯವರೆಗೆ 80 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

