
ಬಸ್, ಲಾರಿ ಸೇರಿ ಇನ್ನಿತರ ವಾಹನಗಳು ಸ್ಟಾರ್ಟ್ ಆಗದೆ ಇದ್ದಾಗ ಅದನ್ನು ಒಂದಷ್ಟು ಮಂದಿ ಸೇರಿ ತಳ್ಳುವುದು ಸರ್ವೇ ಸಾಮಾನ್ಯ. ಈ ದೃಶ್ಯವನ್ನು ನಾವು ಆಗಾಗ ನೋಡುತ್ತಿರುತ್ತೇವೆ. ಆದರೆ ಉತ್ತರಪ್ರದೇಶದ ಮೀರತ್ ಜಿಲ್ಲೆಯ ದೌರಾಲಾ ರೈಲ್ವೆ ಸ್ಟೇಶನ್ನಲ್ಲಿ ಪ್ರಯಾಣಿಕರು ರೈಲನ್ನು ತಳ್ಳಬೇಕಾಗಿ ಬಂತು. ಅನೇಕರು ಸೇರಿ ಟ್ರೇನ್ ತಳ್ಳುವ ದೃಶ್ಯ ಈಗ ಸಿಕ್ಕಾಪಟೆ ವೈರಲ್ ಆಗಿದೆ. ದೌರಾಲಾ ರೈಲ್ವೆ ಸ್ಟೇಶನ್ನಲ್ಲಿ ನಿಂತಿದ್ದ ಸಹರಾನ್ಪುರ-ದೆಹಲಿ ಪ್ರಯಾಣಿಕರ ರೈಲಿನ ಎಂಜಿನ್ ಮತ್ತು ಎರಡು ಕೋಚ್ಗಳಿಗೆ ಬೆಂಕಿ ತಗುಲಿತ್ತು. ರೈಲು ನಿಂತಿದ್ದ ಕಾರಣ ಪ್ರಯಾಣಿಕರು ಕೋಚ್ಗಳಿಂದ ಇಳಿದು ಪ್ರಾಣ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಯಿತು.
ಹೀಗೆ ಬೆಂಕಿ ತಗುಲಿದ ಎಂಜಿನ್ ಮತ್ತು ಎರಡು ಕಂಪಾರ್ಟ್ಮೆಂಟ್ಗಳನ್ನು ರೈಲಿನ ಉಳಿದ ಕಂಪಾರ್ಟ್ಮೆಂಟ್ನಿಂದ ಬೇರ್ಪಡಿಸಿ ದೂರ ಸರಿಸಲು ಹೀಗೆ ಪ್ರಯಾಣಿಕರಲ್ಲ ಸೇರಿ ತಳ್ಳಿದ್ದಾರೆ. ಎಂಜಿನ್ ಬೇರ್ಪಟ್ಟ ಕಾರಣ ರೈಲು ಮುಂದೆ ಚಲಿಸಲು ಸಾಧ್ಯವಿಲ್ಲ. ಬೆಂಕಿ ತಗುಲಿದ ಕೋಚ್ಗಳನ್ನು ಕೂಡಲೇ ಬೇರ್ಪಡಿಸದೆ ಇದ್ದರೆ, ಅದು ಇನ್ನಷ್ಟು ಬೋಗಿಗಳಿಗೆ ವ್ಯಾಪಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಸ್ಟೇಶನ್ನಲ್ಲಿದ್ದ ಪ್ರಯಾಣಿಕರೆಲ್ಲ ಸೇರಿ, ಉದ್ದನೆಯ ರೈಲನ್ನು ತಳ್ಳಿದ್ದಾರೆ. ಯಾರಿಗೂ ಪ್ರಾಣ ಹಾನಿಯಾಗಲಿಲ್ಲ. ಹಾಗಂತ ಬೆಂಕಿ ತಗುಲಲು ಕಾರಣವೇನು ಎಂಬುದು ಇನ್ನೂ ಗೊತ್ತಾಗಿಲ್ಲ.
ಬಿಹಾರದ ಮಧುಬನಿ ರೈಲ್ವೆ ಸ್ಟೇಶನ್ನಲ್ಲಿ ನಿಂತಿದ್ದ ಖಾಲಿ ರೈಲಿನಲ್ಲಿ ಫೆ.19ರಂದು ಬೆಂಕಿ ಕಾಣಿಸಿಕೊಂಡು (Fire In Train) ಆತಂಕ ಸೃಷ್ಟಿಸಿತ್ತು. ಬೆಳಗ್ಗೆ 9.13ರ ಹೊತ್ತಿಗೆ ಸ್ವತಂತ್ರ ಸೇನಾನಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲಿಗೆ ಬೆಂಕಿ ತಗುಲಿ ಹೊತ್ತಿ ಉರಿದಿತ್ತು. ರೈಲಿನಲ್ಲಿ ಪ್ರಯಾಣಿಕರು ಇಲ್ಲದ ಕಾರಣ ಯಾವುದೇ ಸಾವು-ನೋವಿನ ವರದಿಯಾಗಿಲ್ಲ. ಬೆಂಕಿ ಉರಿದು, ದಟ್ಟವಾದ ಹೊಗೆ ಆವರಿಸಿದ್ದ ರೈಲಿನ ವಿಡಿಯೋ ವೈರಲ್ ಆಗಿತ್ತು. ಅಲ್ಲಿನ ಸಿಬ್ಬಂದಿ ಬಕೆಟ್ಗಳ ಮೂಲಕ ನೀರು ಹಾಕಿ ನಂದಿಸಿದ್ದರು.
ಇದನ್ನೂ ಓದಿ: Shane Warne: ಅಗಲಿದ ಕ್ರಿಕೆಟ್ ದಂತಕಥೆಯ ಹೆಸರನ್ನು ಜೀವಂತವಾಗಿರಿಸಲು ಮುಂದಾದ ಕ್ರಿಕೆಟ್ ಆಸ್ಟ್ರೇಲಿಯಾ