
ಬಸ್ಸು, ರೈಲು ಅಥವಾ ಕ್ಯಾಬ್‌ನಲ್ಲಿ ಪ್ರಯಾಣಿಸುವಾಗ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅನುಭವವಾಗುತ್ತದೆ. ಕೆಲವೊಮ್ಮೆ ಸಹ ಪ್ರಯಾಣಿಕರ (passenger) ಜೊತೆಗೆ ಒಳ್ಳೆಯ ಸ್ನೇಹ ಸಂಬಂಧ ಏರ್ಪಡುವುದು ಇದೆ. ಇಲ್ಲದಿದ್ದರೆ ಸೀಟಿಗಾಗಿ ಪ್ರಯಾಣಿಸುವವರ ಜತೆಗೆ ಜಗಳಕ್ಕೆ ಇಳಿಯುವ ಘಟನೆಗಳು ನಡೆಯುತ್ತವೆ. ಆದರೆ ಕ್ಯಾಬ್‌ನಲ್ಲಿದ್ದ ಯುವಕನಿಗೆ ತನ್ನ ಸಹಪ್ರಯಾಣಿಕನನ್ನು ಕಂಡು ಶಾಕ್ ಆಗಿದೆ. ಇದೇನಪ್ಪಾ ಇದ್ರಲ್ಲಿ ಗಾಬರಿಯಾಗೋದು ಏನಿದೆ ಎಂದು ನಿಮಗೆ ಅನಿಸಬಹುದು. ಆದರೆ ಕ್ಯಾಬ್‌ನಲ್ಲಿದ್ದ ಸಹ ಪ್ರಯಾಣಿಕ ಮೇಕೆಯಾಗಿದ್ದು(Goat), ಈ ಅಪರೂಪದ ಸಹ ಪ್ರಯಾಣಿಕನ ಜತೆಗೆ ಸೆಲ್ಫಿ ಕ್ಲಿಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಈ ಕುರಿತಾದ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಒಳ್ಳೆಯ ಅನುಭವ ಎಂದು ಹೇಳಿದ್ದಾರೆ.
ಬಾಸ್ (@Basi-cally) ಹೆಸರಿನ ಎಕ್ಸ್ ಖಾತೆಯಲ್ಲಿ ಪ್ರಯಾಣಿಕನೊಬ್ಬನು ಕ್ಯಾಬ್‍ನಲ್ಲಿ ಪ್ರಯಾಣಿಸುವಾಗ ಕಾರಿನಲ್ಲಿ ಮೇಕೆಯೊಂದಿಗೆ ಸೆಲ್ಫಿ ತೆಗೆದು ಪೋಸ್ಟ್ ಮಾಡಿದ್ದಾನೆ. ಈ ಪೋಸ್ಟ್‌ಗೆ ನಾನು ಇಂದು ಶೇರ್ಡ್ ಕ್ಯಾಬ್ ಹತ್ತಿದೆ. ನಂತರ ನನ್ನ ಹಿಂದೆ ಒಂದು ಮೇಕೆ ಇರುವುದನ್ನು ಅರಿತುಕೊಂಡೆ. ಇದಲ್ಲದೆ, ಒಂಥರಾ ಚರ್ಮದ ರೀತಿಯ ವಾಸನೆ ಬರುತ್ತಿತ್ತು. ಆದರೆ ಅದು ಕಾರಿನ ಲೆದರ್ ಸೀಟ್‌ದು ಇದ್ದಿರಬಹುದು ಎಂದು ನಾನು ಭಾವಿಸಿದೆ. ಆದರೆ ನೋಡಿದಾಗ ಮೇಕೆ ಇತ್ತು ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾನೆ.
I got in a shared cab today and later realised there was a goat behind me… pic.twitter.com/v7xMw9BC2h
— Bas (@Basi_cally) September 30, 2025
ಈ ಪೋಸ್ಟ್‌ನಲ್ಲಿ ಪ್ರಯಾಣಿಕನು ಕ್ಯಾಬ್‌ನಲ್ಲಿ ಕುಳಿತಾಗ, ಮೇಕೆ ಹಿಂಭಾಗದಲ್ಲಿ ಆರಾಮವಾಗಿ ಕುಳಿತಿರುವುದನ್ನು ಗಮನಿಸಿದ್ದಾನೆ. ಈ ಪ್ರಯಾಣಿಕನು ತನ್ನ ಸೀಟಿನಲ್ಲಿ ಕುಳಿತು ನಗುತ್ತಿರುವುದನ್ನು ಕಾಣಬಹುದು. ಅವನ ಹಿಂದೆ ಕಪ್ಪು ಮೇಕೆ ಕುಳಿತಿದುಕೊಂಡಿರುವುದನ್ನು ನೀವು ಗಮನಿಸಬಹುದು.
ಇದನ್ನೂ ಓದಿ:Viral: ಬೆಂಗಳೂರಿನ ನಡುರಸ್ತೆಯಲ್ಲೇ ಕೈ ಕೊಟ್ಟ ಬೈಕ್, ಪೆಟ್ರೋಲ್ ನೀಡಿ ಮಾನವೀಯತೆ ಮೆರೆದ ರ‍್ಯಾಪಿಡೋ ಚಾಲಕ
ಸೆಪ್ಟೆಂಬರ್ 30 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಐದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಬಳಕೆದಾರರೊಬ್ಬರು, ಇದನ್ನು ಕೇಳಿ ನನಗೆ ನಗು ಬಂತು, ನನ್ನ ದಿನವನ್ನು ಅದ್ಭುತವಾಗಿಸಿತು, ನಿಮ್ಮ ಸಹ ಪ್ರಯಾಣಿಕರಿಗೆ ಬೇಕಾದಷ್ಟು ಹುಲ್ಲು ಸಿಗಲಿ ಎಂದಿದ್ದಾರೆ. ಮತ್ತೊಬ್ಬರು ಮೇಕೆದಾಟು ಕ್ಯಾಬ್ ಎಂದು ಕಾಮೆಂಟ್ ಮಾಡಿದ್ದಾರೆ. ಇದು ಭಾರತೀಯ ಸಂಸ್ಕೃತಿ ಎಂದು ಇನ್ನೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ