Video: ತಲೆಬಾಗಿ ನಮಸ್ಕರಿಸಿದ ಪುಟಾಣಿಗೆ ಸೊಂಡಿಲೆತ್ತಿ ಆಶೀರ್ವಾದ ಮಾಡಿದ ಗಜರಾಜ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ನೆಟ್ಟಿಗರ ಹೃದಯ ಗೆಲ್ಲುತ್ತದೆ. ಇದೀಗ ಇಂತಹದ್ದೇ ವಿಡಿಯೋ ವೈರಲ್ ಆಗಿದ್ದು, ಪುಟ್ಟ ಹುಡುಗಿಯು ಆನೆಗೆ ನಮಸ್ಕರಿಸುತ್ತಿದ್ದಂತೆ ಆನೆಯೊಂದು ಮುದ್ದಾಗಿ ರಿಯಾಕ್ಷನ್ ನೀಡಿದೆ. ಎರಡು ಮುಗ್ಧ ಮನಸ್ಸುಗಳ ನಡುವಿನ ಶುದ್ಧ ಪ್ರೀತಿಯನ್ನು ಕಂಡು ನೆಟ್ಟಿಗರು ತಲೆ ಬಾಗಿದ್ದಾರೆ. ಈ ಕುರಿತಾದ ವಿಡಿಯೋ ಇಲ್ಲಿದೆ ನೋಡಿ.

ಆನೆಗಳು (elephant) ಭಾವನಾತ್ಮಕ ಜೀವಿಗಳು. ಆದರೆ ಈ ಆನೆಗಳಿಗೆ ಮನುಷ್ಯರು ತುಂಬಾ ಮುದ್ದಾಗಿ ಕಾಣುತ್ತಾರೆಯಂತೆ. ಹೀಗಾಗಿ ಈ ಆನೆಗಳು ಮನುಷ್ಯರೊಂದಿಗೆ ಬಹುಬೇಗನೇ ಆಪ್ತವಾಗುತ್ತವೆ. ಹೀಗೆ ಆನೆಗಳು ಮನುಷ್ಯರೊಂದಿಗೆ ಆಟ ಆಡುವ, ಬಾಂಧವ್ಯ ಸಾರುವ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಇದೀಗ ಪುಟ್ಟ ಹುಡುಗಿಯೊಂದು (little girl) ಆನೆಯನ್ನು ಕಂಡೊಡನೆ ನಮಸ್ಕರಿಸಿದ್ದು, ಆನೆಯು ತನ್ನ ಸೊಂಡಿಲನ್ನು ಎತ್ತಿ ಈ ಪುಟಾಣಿಗೆ ಆಶೀರ್ವಾದಿಸಿದೆ. ಈ ಮುದ್ದಾದ ದೃಶ್ಯವೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಪುಟಾಣಿಯನ್ನು ಕಂಡು ಆನೆ ಕೊಟ್ಟ ರಿಯಾಕ್ಷನ್ ನೋಡಿ
ಅತುಲ್ಯ ಭಾರತ್ (Atulya Bharat) ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಪುಟ್ಟ ಹುಡುಗಿಯೂ ಆನೆಯ ಕಡೆಗೆ ನಡೆದು ಬರುವುದನ್ನು ಕಾಣಬಹುದು. ಆ ಬಳಿಕ ಈ ಪುಟಾಣಿಯೂ ಆನೆ ಮಾವುತನಿಗೆ ಹಣವನ್ನು ನೀಡಿ ತಲೆ ಬಾಗಿಸಿ ಆನೆಗೆ ನಮಸ್ಕರಿಸುತ್ತಾಳೆ. ಈ ಪುಟಾಣಿಯನ್ನು ಕಂಡೊಡನೆ ಸೊಂಡಿಲನ್ನು ಎತ್ತಿದೆ. ಆ ಬಳಿಕ ಆನೆಯೂ ತನ್ನ ಸೊಂಡಿಲನ್ನು ಪುಟ್ಟ ಹುಡುಗಿಯ ತಲೆಯ ಮೇಲೆ ಇಟ್ಟು ಆಶೀರ್ವಾದ ಮಾಡುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
Receiving blessings from divine beings undoubtedly brings good fortune. pic.twitter.com/B3hsqPUVgS
— ༺अतुल्या༻ (@Atulya_Bharat__) September 17, 2025
ಇದನ್ನೂ ಓದಿ:Video: ಮಳೆಯಲ್ಲಿ ನೆನೆಯುತ್ತಿದ್ದ ಮಾಲಕಿಗೆ ಆಸರೆಯಾಗಿ ನಿಂತ ಆನೆ
ಈ ವಿಡಿಯೋ ಐದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಎಷ್ಟು ಮುದ್ದಾಗಿದೆ ಎಂದಿದ್ದಾರೆ. ಇನ್ನೊಬ್ಬರು ಪ್ರಥಮ ಪೂಜ್ಯ ಗಣಪತಿ ಬಪ್ಪಾನಿಗೆ ಜೈ ಎಂದರೆ ಮತ್ತೊಬ್ಬರು ದೈವಿಕ ಆಶೀರ್ವಾದವೂ ಜೀವನವನ್ನು ರಕ್ಷಣೆ, ಶಾಂತಿ ಹಾಗೂ ಸಮೃದ್ಧಿಯೊಂದಿಗೆ ಮುನ್ನಡೆಸುತ್ತವೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








