Video: ಮಳೆಯಲ್ಲಿ ನೆನೆಯುತ್ತಿದ್ದ ಮಾಲಕಿಗೆ ಆಸರೆಯಾಗಿ ನಿಂತ ಆನೆ
ಮೂಕ ಪ್ರಾಣಿಗಳು ತಮ್ಮನ್ನು ಯಾರು ಪ್ರೀತಿ ಮಾಡುತ್ತಾರೋ, ಕಾಳಜಿ ವಹಿಸುತ್ತಾರೋ ಅವರೊಂದಿಗೆ ವಿಶೇಷ ಬಾಂಧವ್ಯವನ್ನು ಬೆಳೆಸಿಕೊಳ್ಳುತ್ತವೆ. ಇದೀಗ ವೈರಲ್ ಆಗಿರುವ ಆನೆಯ ಈ ವಿಡಿಯೋನೇ ಇದಕ್ಕೆ ಸಾಕ್ಷಿ. ಹೌದು, ಮಾಲಕಿ ಮಳೆಯಲ್ಲಿ ನೆನೆಯುತ್ತಿದ್ದಂತೆ ಆನೆಯೊಂದು ಮಾಡಿರುವ ಕೆಲಸ ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ. ಈ ಹೃದಯ ಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.

ಪ್ರಾಣಿಗಳ (Animals) ಪ್ರೀತಿಯೆ ಹಾಗೆ ನಿಷ್ಕಲ್ಮಷವಾದದ್ದು. ತಮ್ಮನ್ನು ಸಾಕಿದ ಮಾಲೀಕರಿಗೆ ಪ್ರೀತಿಯನ್ನು ತೋರಿಸುತ್ತ ಜೀವನಪರ್ಯಂತ ಜೊತೆಗೆ ಇರುತ್ತವೆ. ಕೇವಲ ಶ್ವಾನಗಳಷ್ಟೇ ಅಲ್ಲ ಈ ಆನೆಗಳು ಸಹ ತಮ್ಮ ಮಾಲೀಕರಿಗೆ ವಿಧೇಯರಾಗಿರುತ್ತವೆ. ಇಂತಹದೊಂದು ದೃಶ್ಯವು ವೈರಲ್ ಆಗಿದ್ದು ಆನೆಯೊಂದು (elephant) ಮಳೆಯಲ್ಲಿ ನೆನೆಯುತ್ತಿದ್ದಂತೆ ಮಾಲೀಕಳಿಗೆ ಆಸರೆಯಾಗಿ ನಿಂತಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ಚೆಕ್ ಚೈಲರ್ಟ್ (lek chailert) ಹಂಚಿಕೊಂಡ ಈ ವಿಡಿಯೋ ನೋಡಿ ಮೂಕ ಪ್ರಾಣಿಯ ನಿಷ್ಕಲ್ಮಶ ಹಾಗೂ ಕಾಳಜಿ ಭರಿತ ನಡೆಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿವೆ.
lek chailert ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋಗೆ ಇಂದು, ನಾವು ಬಯಲಿನಲ್ಲಿದ್ದಾಗ ಗುಡುಗು ಸಹಿತ ಮಳೆ ಸುರಿಯಲು ಪ್ರಾರಂಭಿಸಿದಾಗ, ಚಾಬಾ ಮತ್ತು ಥಾಂಗ್ ಸಹಜವಾಗಿಯೇ ನನ್ನ ಹತ್ತಿರ ಬಂದರು. ತಮ್ಮ ದೇಹಗಳಿಂದ ಮಳೆಯಿಂದ ನನ್ನನ್ನು ರಕ್ಷಿಸಲು ಪ್ರಯತ್ನಿಸಿದರು. ನಾನು ನನ್ನ ರೇನ್‌ಕೋಟ್ ಧರಿಸಿದಾಗ, ಚಾಬಾ ನನ್ನನ್ನು ನಿಧಾನವಾಗಿ ಪರೀಕ್ಷಿಸಿ, ತನ್ನ ಸೊಂಡಿಲಿನಿಂದ ನನ್ನನ್ನು ಮುಟ್ಟಿದಳು.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಚಿಂತಿಸಬೇಡ, ಎಲ್ಲವೂ ಸರಿಯಾಗುತ್ತದೆ” ಎಂದು ಹೇಳುವ ಹಾಗೆ ನನಗೆ ಸಿಹಿ ಮುತ್ತು ಕೊಟ್ಟಳು ಆನೆಗಳು ಆಳವಾದ ಭಾವನಾತ್ಮಕ ಜೀವಿಗಳು. ಅವುಗಳ ಪ್ರೀತಿ ಮತ್ತು ಕಾಳಜಿಯು ವಿಸ್ತಾರವಾದದ್ದು. ಈ ಪ್ರಾಣಿಗಳು ಯಾರನ್ನಾದರೂ ನಂಬಿ ಕಾಳಜಿ ವಹಿಸಿದರೆ, ಆ ವ್ಯಕ್ತಿಯನ್ನು ತಮ್ಮವರೇ ಅಂದುಕೊಳ್ಳುತ್ತವೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ವಿಡಿಯೋದಲ್ಲಿ ಮಾಲಕಿಯೂ ಮಳೆಯಲ್ಲಿ ಒದ್ದೆಯಾಗುತ್ತಿರುವುದನ್ನು ಕಾಣಬಹುದು. ಈ ವೇಳೆಯಲ್ಲಿ ಆನೆಯೊಂದು ಆಕೆಗೆ ಆಸರೆಯಾಗಿ ನಿಂತು ಮಳೆಯಿಂದ ಒದ್ದೆಯಾಗದಂತೆ ತಡೆದಿದೆ. ಆ ಬಳಿಕ ಒಂದು ಆನೆಯೂ ತನ್ನ ಸೊಂಡಿಲಿನಿಂದ ಆಕೆಗೆ ಮುತ್ತನ್ನಿಟ್ಟಿರುವುದನ್ನು ಕಾಣಬಹುದು.
ಇದನ್ನೂ ಓದಿ:Video: ತನ್ನ ಮಾಲೀಕಳ ಜೊತೆಗೆ ಮುನಿಸಿಕೊಂಡು ಗುರ್ ಎಂದ ಮರಿಯಾನೆ
ಈ ವಿಡಿಯೋ ಆರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರ ವಿವರಿಸಲಾಗದ ಪ್ರೀತಿ, ಇದಕ್ಕಿಂತ ಸುಂದರವಾದದ್ದು ಏನಿದೆ ಎಂದು ಹೇಳಿದ್ದಾರೆ. ಈ ಮುಗ್ಧ ಜೀವಿಗಳ ಪ್ರೀತಿ ಹಾಗೂ ಕಾಳಜಿ ನಿಷ್ಕಲ್ಮಶವಾದದ್ದು ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ನಲ್ಲಿ ಬರೆದುಕೊಂಡಿದ್ದಾರೆ. ನೀವು ನಿಜಕ್ಕೂ ಅದೃಷ್ಟವಂತರು. ಇಷ್ಟು ಕಾಳಜಿ ವಹಿಸುವ ಪ್ರಾಣಿಗಳನ್ನು ಹೊಂದಿದ್ದೀರಿ. ಅವು ಪ್ರತಿಯೊಂದು ಕ್ಷಣದಲ್ಲೂ ನಿಮ್ಮನ್ನು ರಕ್ಷಿಸುತ್ತವೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








