AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ರೈಲಿನ ಶೌಚಾಲಯದಲ್ಲಿ 6 ಗಂಟೆಗಳ ಕಾಲ ಲಾಕ್ ಆದ ಪ್ರಯಾಣಿಕ, ಮುಂದೆ ಆಗಿದ್ದೇ ಬೇರೆ ನೋಡಿ

ಕೆಲವರು ಮಾಡಿಕೊಳ್ಳುವ ಎಡವಟ್ಟುಗಳನ್ನು ಎನಿಸಿಕೊಂಡ್ರೆ ನಗು ಬರುತ್ತೆ. ಈ ಬಸ್ಸು ಅಥವಾ ರೈಲಿನಲ್ಲಿ ಕೆಲ ಪ್ರಯಾಣಿಕರು ಒಂದಲ್ಲ ಒಂದು ಎಡವಟ್ಟುಗಳನ್ನು ಮಾಡಿಕೊಳ್ತಾ ಇರ್ತಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಭಾರತೀಯ ರೈಲ್ವೆ ಪ್ರಯಾಣಿಕನೊಬ್ಬ ಆರು ಗಂಟೆಗಳ ಕಾಲ ಶೌಚಾಲಯದಲ್ಲೇ ಲಾಕ್ ಆಗಿದ್ದಾನೆ. ಅಷ್ಟಕ್ಕೂ ಆಗಿದ್ದೇನು? ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ರೈಲಿನ ಶೌಚಾಲಯದಲ್ಲಿ 6 ಗಂಟೆಗಳ ಕಾಲ ಲಾಕ್ ಆದ ಪ್ರಯಾಣಿಕ, ಮುಂದೆ ಆಗಿದ್ದೇ ಬೇರೆ ನೋಡಿ
ವೈರಲ್‌ ವಿಡಿಯೋImage Credit source: Reddit
ಸಾಯಿನಂದಾ
|

Updated on: Oct 04, 2025 | 2:08 PM

Share

ರೈಲಿನಲ್ಲಿ (Train) ಪ್ರಯಾಣಿಸುವಾಗ ನಾವು ತುಂಬಾನೇ ಜಾಗರೂಕರಾಗಿರಬೇಕು. ಹೌದು ರೈಲಿನ ಫೂಟ್ ಬೋರ್ಡ್ ಬಳಿ ನಿಂತು ನೇತಾಡುವುದು, ಬಾಗಿಲ ಬಳಿ ಕುಳಿತುಕೊಳ್ಳುವಂತಹ ತಪ್ಪುಗಳನ್ನು ಮಾಡ್ತಾರೆ. ಇನ್ನು ಕೆಲವರು ರೈಲಿನ ಬಾತ್ ರೂಮ್‌ನಲ್ಲಿ ಲಾಕ್ ಆಗ್ತಾರೆ. ಆದರೆ ಪ್ರಯಾಣಿಕನೊಬ್ಬ (passengers) ಆರು ಗಂಟೆಗೂ ಹೆಚ್ಚು ಕಾಲ ರೈಲಿನ ಶೌಚಾಲಯದೊಳಗೆ ಲಾಕ್ ಆಗಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿಗಳಿಗೆ ಕೊನೆಗೆ ಅಸಲಿ ವಿಚಾರ ತಿಳಿದಿದೆ. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದಂತೆ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಚರ್ಚೆ ಹುಟ್ಟು ಹಾಕಿದೆ.

r/IndianRailways ನಲ್ಲಿ ರೆಡ್ಡಿಟ್ ಬಳಕೆದಾರರೊಬ್ಬರು ಈ ವೀಡಿಯೊ ಹಂಚಿಕೊಂಡಿದ್ದು, ಪ್ರಯಾಣಿಕನೊಬ್ಬನು ಆರು ಗಂಟೆಗಳ ಕಾಲ ಶೌಚಾಲಯದೊಳಗೆ ಲಾಕ್ ಆಗಿದ್ದು, ರೈಲ್ವೆ ಸಿಬ್ಬಂದಿ ಜಾಮ್ ಆಗಿರುವ ಬಾಗಿಲನ್ನು ಒಡೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಒಳಗೆ ಒಬ್ಬ ಪ್ರಯಾಣಿಕನಿದ್ದಾನೆ, ಅವನು ಬಹಳ ಸಮಯದಿಂದ ಶೌಚಾಲಯದೊಳಗೆ ಸಿಲುಕಿಕೊಂಡಿದ್ದಾನೆ. ನಾವು ಬಾಗಿಲು ತೆರೆಯಲು ಪ್ರಯತ್ನಿಸುತ್ತಿದ್ದೇವೆ” ಎಂದು ಅಧಿಕಾರಿಯಲ್ಲಿ ಸಿಬ್ಬಂದಿಯೊಬ್ಬರು ಹೇಳುತ್ತಿರುವುದನ್ನು ಕಾಣಬಹುದು. ಆದರೆ ಕೊನೆಯಲ್ಲಿ ತಿರುವು ಪಡೆದುಕೊಂಡಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

Passenger stuck inside toilet for more than 6 hours. byu/Omarr_Paper inindianrailways

ಇದನ್ನೂ ಓದಿ
Image
ಹೈವೇ ರೋಡಲ್ಲಿ ಒಂದೇ ಸ್ಕೂಟಿಯಲ್ಲಿ ಐವರ ಡೇಂಜರ್ಸ್ ಸ್ಟಂಟ್
Image
ಜಿಮ್‌ನಲ್ಲಿ ಜುಟ್ಟು  ಹಿಡಿದು ಎಳೆದಾಡಿಕೊಂಡ ಮಹಿಳಾಮಣಿಯರು
Image
ತರಕಾರಿ ಕೊಳ್ಳಲು ಬಂದ ಯುವತಿಯರ ಕದ್ದು ವಿಡಿಯೋ ಮಾಡಿದ ವ್ಯಕ್ತಿ
Image
ಚಲಿಸುತ್ತಿದ್ದ ಕಾರಿ ಬೋನೆಟ್​ಗೆ ಅರೆಬೆತ್ತಲೆ ಸ್ಥಿತಿಯಲ್ಲಿ ಜಿಗಿದ ಯುವಕ

ಆ ವ್ಯಕ್ತಿಯೂ ಉದ್ದೇಶಪೂರ್ವಕವಾಗಿ ಒಳಗೆ ಚಿಲಕ ಹಾಕಿಕೊಂಡಿದ್ದಾನೆಂದು ಅರಿತುಕೊಂಡ ಅಧಿಕಾರಿಗಳು ಬಾಗಿಲನ್ನು ಸ್ವತಃ ತೆರೆಯುವಂತೆ ಒತ್ತಾಯಿಸುವುದನ್ನು ಕಾಣಬಹುದು. ಇದಾದ ಕೆಲವು ಕೆಲವು ಕ್ಷಣಗಳ ಬಳಿಕ ಪ್ರಯಾಣಿಕನು ಶೌಚಾಲಯದ ಬಾಗಿಲು ತೆರೆದು ಹೊರಬಂದಿದ್ದು, ಸಿಬ್ಬಂದಿ ಆತನ ಫೋಟೋಗಳನ್ನು ಕ್ಲಿಕಿಸಿ ಪ್ರಶ್ನಿಸಿರುವುದನ್ನು ಕಾಣಬಹುದು.

ಇದನ್ನೂ ಓದಿ:Video: ಎತ್ತಾಕ್ಕೊಂಡ್ ಹೋಯ್ತಾ ಇರೋದೇ; ಹೈವೇ ರೋಡಲ್ಲಿ ಒಂದೇ ಸ್ಕೂಟಿಯಲ್ಲಿ ಐವರ ಡೇಂಜರ್ಸ್ ಸ್ಟಂಟ್

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ಪ್ರಯಾಣಿಕರು ಬಹಳ ಬುದ್ಧಿವಂತ ಟಿಸಿಯಿಂದ ತಪ್ಪಿಸಿ ಕೊಳ್ಳಲು ಈ ರೀತಿ ತಂತ್ರ ಹೂಡಿರಬಹುದು ಎಂದು ಹೇಳಿದ್ದಾರೆ. ಮತ್ತೊಬ್ಬರು ಪ್ರಯಾಣಿಕನು ಕುಡಿದು ಶೌಚಾಲಯದೊಳಗೆ ನಿದ್ರೆಗೆ ಜಾರಿರಬಹುದು ಎಂದಿದ್ದಾರೆ. ಇಂತಹ ಮಹಾನುಭಾವರು ನಮ್ಮ ದೇಶದಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ