ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಮೈಕೊರೆಯುವ ಚಳಿ ಆರಂಭವಾಗಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಹಿಮಪಾತವೂ ಸಂಭವಿಸುತ್ತಿದ್ದು ಜನ ಮೈ ನಡುಗುವ ಚಳಿಗೆ ಹೆದರಿದ್ದಾರೆ. ಈ ನಡುವೆ ನ್ಯೂ ಹ್ಯಾಂಪ್‌ಶೈರ್‌ನ ಮೌಂಟ್ ವಾಷಿಂಗ್ಟನಲ್ಲಿ ಮೈನಸ್ 34 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದರಿಂದ ಆಹಾರ ಪದಾರ್ಥಗಳೆಲ್ಲವೂ ಗಟ್ಟಿಯಾಗುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ಲೇಟ್ನಲ್ಲಿ ಹಾಕಿದ ಆಹಾರವು ಪೋರ್ಕ್ ಚಮಚಕ್ಕೆ ಸಿಲುಕಿ ಗಟ್ಟಿಯಾಗಿರುವ ಫೋಟೋ ವೈರಲ್ ಆಗಿದೆ. ಮೌಂಟ್ ವಾಷಿಂಗ್ಟನ್ ಅಬ್ಸರ್ವೇಟರಿ (Mount Washington Observatory) ಎನ್ನುವ ಖಾಸಗಿ ವೈಜ್ಞಾನಿಕ ಮತ್ತು ಶಿಕ್ಷಣ ಸಂಸ್ಥೆ ಇದರ ಫೊಟೋ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ.
One of our Observers found an area out of the 65+ mph winds this morning and was going to have some leftover spaghetti for breakfast at #sunrise but the -30F (-34C) temperatures prevented them from even taking a bite.
Our Higher Summits Forecast: https://t.co/TaZNjmpICj pic.twitter.com/FhFhX0BnF1— Mount Washington Observatory (MWO) (@MWObs) January 11, 2022
ಮೌಂಟ್ ವಾಷಿಂಗ್ಟನ್ ಅಬ್ಸರ್ವೇಟರಿ ಪ್ರಕಾರ ಸ್ಥಳೀಯರೊಬ್ಬರು ಮನೆಯಿಂದ ಹೊರಗೆ ಬಂದು ಪಾಸ್ತಾವನ್ನು ತಿನ್ನಲು ಯತ್ನಿಸಿದ್ದಾರೆ. ಆದರೆ ಕೇವಲ 15 ಸೆಕೆಂಡ್ಗಳಲ್ಲಿ ಶೀತ ಗಾಳಿಯ ಅಬ್ಬರಕ್ಕೆ ಪೋರ್ಕ್ಗೆ ಅಂಟಿಕೊಂಡಿದ್ದ ಪಾಸ್ತಾ ಹೆಪ್ಪುಗಟ್ಟಿದೆ. ಸದ್ಯ ಇಲ್ಲಿಯ ತಾಪಮಾನ ಮೈನಸ್ 30 ಡಿಗ್ರಿ ಸೆಲ್ಸಿಯಸ್ ಇದೆ. ಜತೆಗೆ ಗಾಳಿಯು 65 mph ಇದೆ ಎಂದು ಮಾಹಿತಿ ನೀಡಿ ಪಾಸ್ತಾ ಪೋರ್ಕ್ಗೆ ಅಂಟಿಕೊಂಡು ಹೆಪ್ಪುಗಟ್ಟಿದ ಫೋಟೋವನ್ನು ಶೇರ್ ಮಾಡಲಾಗಿದೆ.
ಈ ಬಗ್ಗೆ ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದು ಕಳೆದ ಎರಡು ದಿನಗಳ ಹಿಂದೆ 65mph ಹೆಚ್ಚು ಗಾಳಿಯ ವೇಗವಿದ್ದು ಮೈನಸ್ 34 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ತಿಳಿಸಿದ್ದಾರೆ. ಸದ್ಯ ಸಾಮಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿದೆ.
ಇದನ್ನೂ ಓದಿ: