ಸಾಮಾನ್ಯವಾಗಿ ಶಸ್ತ್ರ ಚಿಕಿತ್ಸೆ ಅಂದ್ರೆ ಭಯ, ಮುಂದೆ ಏನಾಗುತ್ತದೆ, ಮೊದಲಿನ ರೀತಿ ಆಗಲು ಸಾಧ್ಯವೇ ಹೀಗೆ ಹತ್ತು ಹಲವಾರು ಪ್ರಶ್ನೆಗಳು ರೋಗಿಗಳನ್ನು ಕಾಡುತ್ತಿರುತ್ತದೆ. ಮತ್ತು ಭಯದಲ್ಲಿ ರೋಗಿಗಳು ದೇವರ ಮಂತ್ರವನ್ನು ಜಪಿಸುವಂತಹದ್ದು ಮಾಡುತ್ತಿರುತ್ತಾರೆ. ಆದ್ರೆ ಇಲ್ಲೊಂದು ರೋಗಿ ಮಾತ್ರ ಆಪರೇಷನ್ ವೇಳೆ ಯಾವುದೇ ಭಯವಿಲ್ಲದೆ ಫೋನಿನಲ್ಲಿ ಗೇಮ್ ಆಡಿದ್ದಾನೆ. ಈ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ಕುರಿತ ಪೋಸ್ಟ್ ಒಂದನ್ನು ಸುಮಿತ್ ಘೋಶ್ (dx_ghosh) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಆಪರೇಷನ್ ಥಿಯೇಟರ್ ನಲ್ಲಿ ಶಸ್ತ್ರ ಚಿಕಿತ್ಸೆ ನಡೆಯುವ ಸಂದರ್ಭದಲ್ಲಿ ರೋಗಿಯೊಬ್ಬ, ತಾನು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದೇನೆ ಎಂಬ ಯಾವುದೇ ಭಯ ಕೂಡಾ ಇಲ್ಲದೆ ಹಾಯಾಗಿ ಮೊಬೈಲ್ ನಲ್ಲಿ ವಿಡಿಯೋ ಗೇಮ್ ಆಡುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಹಕ್ಕಿಗಳು ಹೇಗೆ ನಿದ್ರಿಸುತ್ತವೆ ಗೊತ್ತಾ? ಇಲ್ಲಿದೆ ನೋಡಿ ಮುದ್ದಾದ ವಿಡಿಯೋ…
ಜೂನ್ 27 ರಂದು ಹಂಚಿಕೊಳ್ಳಲಾದ ವಿಡಿಯೋ 52.8 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಡಿದ್ದು, ಈ ಭಯಂಕರ ದೃಶ್ಯವನ್ನು ಕಂಡು ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
Published On - 5:31 pm, Thu, 11 July 24