ಮನೆಯಲ್ಲೇ ಆಕ್ಸಿಜನ್​ ತಯಾರಿಸಿ ಅಪಾಯ ಎದುರಿಸಬೇಡಿ: ತಜ್ಞರು

|

Updated on: May 11, 2021 | 5:13 PM

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ನೋಡಿದ ಜನರು ಮನೆಯಲ್ಲಿಯೇ ಅಕ್ಸಿಜನ್​ ತಯಾರಿಕೆಗೆ ಮುಂದಾಗಿದ್ದಾರೆ. ಈ ಕುರಿತಂತೆ ಭೀಕರ ಅಪಾಯವನ್ನು ಎದುರಿಸುತ್ತೀರಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಮನೆಯಲ್ಲೇ ಆಕ್ಸಿಜನ್​ ತಯಾರಿಸಿ ಅಪಾಯ ಎದುರಿಸಬೇಡಿ: ತಜ್ಞರು
ಪ್ರಾತಿನಿಧಿಕ ಚಿತ್ರ
Follow us on

ಭಾರತ ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ಸಂದರ್ಭದಲ್ಲಿ ಆಕ್ಸಿಜನ್​ ಕೊರತೆ ಕಂಡು ಬರುತ್ತಿದೆ. ಹೀಗಿರುವಾಗ ಮನೆಯಲ್ಲಿಯೇ ಆಮ್ಲಜನಕ ತಯಾರಿಕೆಯ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ನೋಡಿದ ಜನರು ಮನೆಯಲ್ಲಿಯೇ ಅಕ್ಸಿಜನ್​ ತಯಾರಿಕೆಗೆ ಮುಂದಾಗಿದ್ದಾರೆ. ಈ ಕುರಿತಂತೆ ಭೀಕರ ಅಪಾಯವನ್ನು ಎದುರಿಸುತ್ತೀರಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್​ ಮತ್ತು ಫೆಸ್​ಬುಕ್​ಗಳಲ್ಲಿ ಮನೆಯಲ್ಲಿಯೇ ಆಕ್ಸಿಜನ್​ ತಯಾರಿಸುವ ಕುರಿತಾದ ಮಾಹಿತಿಗಳು ಹರಿದಾಡುತ್ತಿದೆ. ಡಿಐವೈ ಆಕ್ಸಿಜನ್​ ಸಾಂದ್ರತೆ ವಿಧಾನದ ಮೂಲಕ ಆಕ್ಸಿಜನ್​ ತಯಾರಿಸುವ ರೀತಿ ಕೂಡಾ ಈಗಾಗಲೇ ಜನರ ಮಾತಿಗೆ ಕಾರಣವಾಗಿದೆ. ಹಾಗೂ ಇಂತಹ ವಿಷಯಕ್ಕೆ ಸಂಬಂಧಿಸಿದ ವಿಡಿಯೋಗಳು ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ. ಹೀಗಾಗಿ ವೈದ್ಯರು ಈ ಕುರಿತಂತೆ ಅಪಾಯದ ಆತಂಕ ಹೊರಹಾಕಿದ್ದಾರೆ.

ಮನೆಯಲ್ಲಿಯೇ ಆಮ್ಲಜನಕ ತಯಾರಿಸುವ ಪ್ರಯತ್ನಗಳು ವಿಶ್ವಾಸಾರ್ಹವಲ್ಲದ ವಿಧಾನಗಳಾಗಿವೆ ಎಂಬುದು ವೈದ್ಯರ ಅಭಿಪ್ರಾಯ. ಭಾರತವು ಆಮ್ಲಜನಕದ ಸರಬರಾಜನ್ನು ಹುಡುಕಲು ಪರದಾಡುತ್ತಿದೆ. ಅನೇಕ ಆಸ್ಪತ್ರೆಗಳು ಆಮ್ಲಜನಕವಿಲ್ಲ ಎಂಬ ಕಾರಣಕ್ಕೆ ರೋಗಿಗಳನ್ನು ದೂರವಿಡುತ್ತಿದೆ. ಕೊರೊನಾ ವೈರಸ್​ ಗುಣಪಡಿಸುವ ಕುರಿತಾಗಿ ಪೊಳ್ಳು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚುತ್ತಿದೆ. ಈ ವಿಡಿಯೋಗಳನ್ನು ನೀಡಿ ಆ ಕುರಿತು ಮೊರೆ ಹೋಗಬೇಡಿ ಎಮದು ವೈದ್ಯರು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಮಾತೃಭೂಮಿಗೆ ಆಕ್ಸಿಜನ್​ ಸಿಲಿಂಡರ್​ ಕಳುಹಿಸಿಕೊಟ್ಟ ಅರಬ್​ ದೇಶದ ಹಿಂದೂ ಮುಖಂಡರು