ಲಟ್ಟಣಿಗೆ ಇಲ್ಲದೇ ರೌಂಡ್​ ರೊಟ್ಟಿ ತಟ್ಟುವುದು ಹೇಗೆ? ಸರಳ ವಿಧಾನದ ವಿಡಿಯೋ ವೈರಲ್​ ಆಯ್ತು

ರೊಟ್ಟಿ ಅಂದಾಕ್ಷಣ ನೋಡಲು ರೌಂಡ್​ ಆಕಾರದಲ್ಲಿಬೇಕು. ಹಾಗಿರುವಾಗ ಲಟ್ಟಣಿಗೆ ಇಲ್ಲದೇ ರೌಂಡ್​ಆಗಿ ರೊಟ್ಟಿ ತಟ್ಟುವುದು ಹೇಗೆ? ಅತಿ ಸುಲಭದಲ್ಲಿ ಹುಡುಗಿ ರೊಟ್ಟಿ ತಟ್ಟುತ್ತಾಳೆ.

ಲಟ್ಟಣಿಗೆ ಇಲ್ಲದೇ ರೌಂಡ್​ ರೊಟ್ಟಿ ತಟ್ಟುವುದು ಹೇಗೆ? ಸರಳ ವಿಧಾನದ ವಿಡಿಯೋ ವೈರಲ್​ ಆಯ್ತು
ರೌಂಡ್​ ರೊಟ್ಟಿ
Follow us
shruti hegde
|

Updated on:May 12, 2021 | 12:57 PM

ಭಾರತದಲ್ಲಿ ಅತಿ ಹೆಚ್ಚು ಜನರು ರೊಟ್ಟಿಯನ್ನು ಇಷ್ಟಪಡುತ್ತಾರೆ. ಬೆಳಿಗ್ಗೆಯ ಉಪಹಾರಕ್ಕೆ ಅಥವಾ ಸಂಜೆಯ ಸಮಯದಲ್ಲಿ ಹಸಿದಾಗ ರೊಟ್ಟಿ ತಟ್ಟುವುದು ಸಾಮಾನ್ಯ. ರೊಟ್ಟಿ ತಯಾರಿಸುವ ಮೊದಲು ಹಿಟ್ಟು ಕಲಸುವುದಕ್ಕೆ ಒಂದು ಶೈಲಿಯಿದೆ. ಕಲಸಿದ ಹಿಟ್ಟನ್ನು ಉಂಡೆಗಳನ್ನಾಗಿ ಮಾಡಿ ಲಟ್ಟಿಸುವ ಕ್ರಮ ಬೇರೆಯೇ ಇದೆ. ರೊಟ್ಟಿ ಅಂದಾಕ್ಷಣ ನೋಡಲು ರೌಂಡ್​ ಆಕಾರದಲ್ಲಿಬೇಕು. ಹಾಗಿರುವಾಗ ಲಟ್ಟಣಿಗೆ ಇಲ್ಲದೇ ರೌಂಡ್​ಆಗಿ ರೊಟ್ಟಿ ತಟ್ಟುವುದು ಹೇಗೆ? ಅತಿ ಸುಲಭದಲ್ಲಿ ಹುಡುಗಿ ರೊಟ್ಟಿ ತಟ್ಟುತ್ತಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋ ನೋಡಿ ನೆಟ್ಟಿಗರು ಆಶ್ಚರ್ಯಪಟ್ಟಿದ್ದಾರೆ.

ಹುಡುಗಿ ಸರಳವಾಗಿ ರೊಟ್ಟಿ ತಟ್ಟುತ್ತಾಳೆ. ಕಲಸಿದ ರೊಟ್ಟಿಯಲ್ಲಿನ ಒಂದು ಉಂಡೆಯನ್ನು ತಯಾರಿಸಿಕೊಳ್ಳುತ್ತಾಳೆ. ರೊಟ್ಟಿ ಮಣೆಯ ಮೇಲೆ ಉಂಡೆಯನ್ನು ಇಟ್ಟು ಅದರ ಮೇಲೆ ಪ್ಲಾಸ್ಟಿಕ್​ ಹಾಳೆಯೊಂದನ್ನು​ ಮುಚ್ಚುತ್ತಾಳೆ. ಊಟ ಮಾಡುವ ತಾಟಿನ ಹಿಂಭಾಗವನ್ನು ಅದರ ಮೇಲಿಟ್ಟು ಒತ್ತುತ್ತಾಳೆ. ತಟ್ಟೆಯ ಆಕಾರದಲ್ಲಿಯೇ ತೆಳ್ಳನೇಯ ಪದರವುಳ್ಳ, ರೌಂಡ್​ ಆಕಾರದ ರೊಟ್ಟಿ ಸಿದ್ಧವಾಗುತ್ತದೆ. ಹುಡುಗಿ ಬಹಳ ಸುಲಭದಲ್ಲಿ ರೊಟ್ಟಿಯನ್ನು ಸಿದ್ಧ ಮಾಡುತ್ತಾಳೆ. ಮತ್ತು ಕಷ್ಟಪಡದೇ ಸಂಗೀತಕ್ಕೆ ತಲೆಯಾಡಿಸುತ್ತಾ ರೊಟ್ಟಿ ತಯಾರಿಸುವ ವಿಡಿಯೋ ಇದೀಗ ವೈರಲ್​ ಆಗಿದೆ.

ಸರಳ ವಿಧಾನದಲ್ಲಿ ಹಣ್ಣುಗಳ ಸಿಪ್ಪೆ ಸುಲಿಯುವುದು, ತರಕಾರಿಯ ಸಿಪ್ಪೆ ಸುಲಿಯುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್​ ಆಗುತ್ತಲೇ ಇರುತ್ತದೆ. ಹಾಗೆಯೇ ಬೆಳ್ಳುಳ್ಳಿ ಸಿಪ್ಪೆ ಬಿಡಿಸಲು ಜನರು ಅದೆಷ್ಟು ಕಷ್ಟ ಪಡುತ್ತಾರೆ ಅಲ್ವೇ? ಸರಳ ವಿಧಾನದಲ್ಲಿ ಬೆಳ್ಳುಳ್ಳಿ ಸಿಪ್ಪೆ ಬಿಡಿಸುವ ವಿಡಿಯೋ ಕೂಡಾ ಈ ಹಿಂದೆ ವೈರಲ್​ ಆಗಿತ್ತು. ವಿಡಿಯೋದಲ್ಲಿ ಹೇಳಿದಂತೆ, ಬೆಳ್ಳುಳ್ಳಿಯನ್ನು ತೆಗೆದುಕೊಂಡು ಚಾಕುವಿನಿಂದ ಅಡ್ಡವಾಗಿ ಕತ್ತರಿಸಬೇಕು. ನಂತರ ಬೆಳ್ಳುಳ್ಳಿಯ ಮೇಲಿನ ಭಾಗದಲ್ಲಿ ಚಾಕುವಿನಿಂದ ಕತ್ತರಿಸಬೇಕು. ಕತ್ತರಿಸಿದ ಎರಡೂ ಭಾಗವನ್ನು ಒಳಮುಖವಾಗಿ ತಿರುಗಿಸಿದರೆ ಬೆಳ್ಳುಳ್ಳಿ ಸಿಪ್ಪೆ ಬಹುಬೇಗ ಬಿಟ್ಟುಕೊಳ್ಳುತ್ತದೆ.

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಖರ್ಚೇ ಇಲ್ಲ, ಟೈರ್​ ಹತ್ತಿ ರಸ್ತೆಯಲ್ಲಿ ಚಲಿಸಿದ ಬಾಲಕ! ಸ್ಟಂಟ್ ವಿಡಿಯೋ ವೈರಲ್​

Published On - 12:51 pm, Wed, 12 May 21