ಪ್ರವಾಸಿಗರೊಬ್ಬರು ಪ್ಲಾಸ್ಟಿಕ್ ಮೊಸಳೆ ಅಂದುಕೊಂಡು ಫೋಟೊ ಕ್ಲಿಕ್ಕಿಸಿಕೊಳ್ಳಲು ಹೋಗಿ ಮೊಸಳೆಯ ಬಾಯಿಗೆ ಸಿಲುಕಿದ್ದರು. ಅದೃಷ್ಟವಶಾತ್, ಪ್ರಾಣಾಪಾಯದಿಂದ ತಮ್ಮ ಜೀವವನ್ನು ರಕ್ಷಿಸಿಕೊಂಡಿದ್ದಾರೆ. ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಸರಿಸೃಪದೊಂದಿಗೆ ಫೋಟೊ ತೆಗೆಸಿಕೊಳ್ಳಲು ಕೊಳದಲ್ಲಿ ವ್ಯಕ್ತಿ ಇಳಿದಿದ್ದಾರೆ, ಆದರೆ ಮೊಸಳೆ ಜೀವಂತದ್ದಾಗಿತ್ತು. ವ್ಯಕ್ತಿ ಹತ್ತಿರ ಹೋಗುತ್ತಿದ್ದಂತೆಯೇ ಆತನ ತೋಳುಗಳನ್ನು ಬಿಗಿಯಾಗಿ ಕಚ್ಚಿ ಹಿಡಿದಿತ್ತು. ಮೈ ಜುಂ ಅನ್ನುವ ದೃಶ್ಯ ಇದೀಗ ವೈರಲ್ ಆಗಿದೆ.
ದಿ ಮಿರರ್ ವರದಿಯ ಪ್ರಕಾರ, ನವೆಂಬರ್ 10ರಂದು ಫಿಲಿಫೈನ್ಸ್ನಲ್ಲಿ ಈ ಘಟನೆ ನಡೆದಿದೆ. ಸಿಟಿಯಲ್ಲಿರುವ ಅಮಯಾ ವ್ಯೂ ಅಮ್ಯೂಸ್ಮೆಂಟ್ ಪಾರ್ಕ್ಗೆ 68 ವರ್ಷದ ವ್ಯಕ್ತಿ ಹೋಗಿದ್ದರು. ಪ್ಲಾಸ್ಟಿಕ್ ಮೊಸಳೆ ಎಂದು ತಿಳಿದ ವ್ಯಕ್ತಿ ಮೊಸಳೆಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾರೆ. ಆ ಸಂದರ್ಭದಲ್ಲಿ ಜೀವಂತ ಮೊಸಳೆ ವ್ಯಕ್ತಿಯ ಎಡಗೈಅನ್ನು ಕಚ್ಚಿ ಹಿಡಿದಿದೆ. ಭಯಗೊಂಡ ಕುಟುಂಬಸ್ಥರು ಕಿರುಚಾಡುತ್ತಿರುವುದನ್ನು ವಿಡಿಯೊದಲ್ಲಿ ಗಮನಿಸಬಹುದು.
ಮೊಸಳೆಯಿಂದ ತಪ್ಪಿಸಿಕೊಂಡ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆತನ ತೋಳಿಗೆ ಗಂಭೀರ ಗಾಯವಾಗಿದೆ ಎಂಬುದು ವರದಿಗಳಿಂದ ತಿಳಿದು ಬಂದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ವ್ಯಕ್ತಿ ಚೇತರಿಸಿಕೊಳ್ಳುತ್ತಿದ್ದಾರೆ. ಪಾರ್ಕ್ ಆವರಣವನ್ನು ತಲುಪುತ್ತಿದ್ದಂತೆಯೇ ನಮಗೆ ಯಾವುದೇ ಸಲಹೆಗಳು ಕಾಣಿಸಲಿಲ್ಲ. ಪ್ರವೇಶ ನಿಷೇಧದ ಸಲಹಾಸೂಚಿ ಇದ್ದಿದ್ದರೆ ನಾವು ಅಲ್ಲಿಗೆ ಹೋಗುತ್ತಿರಲಿಲ್ಲ ಎಂದು ವ್ಯಕ್ತಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಆ ಆರೋಪವನ್ನು ನಿರಾಕರಿಸಿದ ಅಮಯಾ ವ್ಯೂ ಪಾರ್ಕ್ ಸಲಹಾ ಸೂಚನೆಗಳು ಇತ್ತು ಎಂದು ಹೇಳಿದೆ. ಜೊತೆಗೆ ವ್ಯಕ್ತಿಯ ವೈದ್ಯಕೀಯ ಪರೀಕ್ಷೆಗೆ ಹಣ ಸಹಾಯ ನೆರವು ನೀಡುವುದಾಗಿ ಹೇಳಿದೆ.
ಅಮಯಾ ವ್ಯೂ ಪಾರ್ಕ್ನ ಮುಖ್ಯ ಕಾರ್ಯನಿರ್ವಾಹಕ ಕ್ಯಾಂಡಿ ಉನಾಬಿಯಾ ಮಾತನಾಡಿ, ನಾವು ನಿರ್ಲಕ್ಷ್ಯ ಮಾಡಿದ್ದೇವೆ ಎಂಬ ಕುಟುಂಬಸ್ಥರ ಆರೋಪವನ್ನು ನಿರಾಕರಿಸುತ್ತೇವೆ. ಆ ಸ್ಥಳವನ್ನು ನಿರ್ಭಂದಿಸಲಾಗಿದೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ನೆಟ್ಟಿಗರು ಭಯಾನಕ ದೃಶ್ಯ ನೋಡಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಎಚ್ಚರಿಕೆಯಿಂದಿರಿ ಎಂದು ಕೆಲವರು ಸಲಹೆಗಳನ್ನು ನೀಡಿದ್ದಾರೆ. ಮೊಸಳೆ ದಾಳಿಯಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ, ಅದೃಷ್ಟವಶಾತ್ ಪ್ರಾಣಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಮತ್ತೋರ್ವರು ಹೇಳಿದ್ದಾರೆ.
ಇದನ್ನೂ ಓದಿ:
Shocking Video: ರಸ್ತೆ ಖಾಲಿಯಿದ್ದರೂ ಮೂರು ಕಾರುಗಳು ಡಿಕ್ಕಿ; ಶಾಕಿಂಗ್ ವಿಡಿಯೊ ವೈರಲ್
Shocking News: ಮೂರು ತಿಂಗಳಿಂದ ತಂದೆಯ ಶವದೊಟ್ಟಿಗೇ ವಾಸ ಮಾಡುತ್ತಿದ್ದ ಪುತ್ರ !