ಬೆಂಗಳೂರು ಮಾಲ್ಗಳ ವಿರೋಧ ಇವಿ ಚಾಲಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ದೊಡ್ಡ ದೊಡ್ಡ ಮಾಲ್ಗಳಲ್ಲಿ ವಾಹನಗಳಿಗೆ ಬಹುಮಹಡಿ ಪಾರ್ಕಿಂಗ್ ಸೌಲಭ್ಯ ಇದೆ ಆದರೆ ಎಲೆಕ್ಟ್ರಿಕ್ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಗಳು ಇಲ್ಲ ಎಂದು ಬೆಂಗಳೂರು ಮೂಲದ ಛಾಯಾಗ್ರಾಹಕರೊಬ್ಬರು ಎಕ್ಸ್ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಎಲೆಕ್ಟ್ರಿಕ್ ವಾಹನಗಳಿಗೆ (ಇವಿ) ಪ್ರತ್ಯೇಕ ಪಾರ್ಕಿಂಗ್ ಸ್ಥಳಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ಮಾಲ್‌ನ ಈ ಕ್ರಮ ಇವಿ ಚಾಲಕರಿಗೆ ಭಯವನ್ನು ಉಂಟು ಮಾಡಿದೆ. ನಿಶಾಂತ್ ರತ್ನಾಕರ್ ಅವರು ದಕ್ಷಿಣ ಬೆಂಗಳೂರು ಮಾಲ್‌ನಲ್ಲಿ ಇವಿಗಳಿಗಾಗಿ ಹೊರಾಂಗಣ ಪಾರ್ಕಿಂಗ್ ಸ್ಥಳಗಳನ್ನು ನೀಡಲಾಗಿದೆ ಎಂದು ಎಕ್ಸ್ನಲ್ಲಿ ಹೇಳಿದ್ದಾರೆ. ಎಲೆಕ್ಟ್ರಿಕ್ ವೆಹಿಕಲ್ ಪಾರ್ಕಿಂಗ್ ವಲಯ ಎಂಬ ಬೋರ್ಡ್ ಕೂಡ ಹಾಕಲಾಗಿದೆ. ಇದು Irrational fear psychosis ಎಂದು ಎಕ್ಸ್ನಲ್ಲಿ ಟ್ವೀಟ್ ಮಾಡಿದ್ದಾರೆ. ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದಂತೆ ಕೆಲವು ಕೆಟ್ಟ ಕ್ರಮಗಳನ್ನು ಮಾಲ್ಗಳು ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.
ಮಾಲ್ಗಳಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ಇರುವಾಗ EV ವಾಹನಗಳನ್ನು ಹೊರಗೆ ಬಿಸಿಲಿನಲ್ಲಿ ನಿಲುಗಡೆ ಮಾಡಲು ತಿಳಿಸಿರುವುದು ಇದೀಗ ಎಲ್ಲ ಅಕ್ರೋಶಕ್ಕೆ ಕಾರಣವಾಗಿದೆ. ಇತ್ತೀಚೆಗೆ ಇವಿಗಳನ್ನು ಸಾಗಿಸುವ ಟ್ರಕ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಮಾಲ್ಗಳ ಪಾರ್ಕಿಂಗ್ ಸ್ಥಳಗಳಲ್ಲಿ ಎಲೆಕ್ಟ್ರಿಕ್ ವೆಹಿಕಲ್ ನಿಲುಗಡೆಯಲ್ಲಿ ಮಾಡಲು ಅವಕಾಶ ಇಲ್ಲ ಎಂದು ಮಾಲ್ಗಳ ಸಿಬ್ಬಂದಿಗಳು ಹೇಳಿದ್ದಾರೆ.
There is some irrational fear psychosis in #NexusMall #Koramangala in #Bengaluru with regards to Electric Vehicles. While there is a big multi level parking (as seen on left), they make EVs to be parked in baking sunlight outside.
EV manufacturers kindly speak to them.#Ather pic.twitter.com/t8SGhtfcoh
— Nishant Ratnakar (@nishantr) March 23, 2024
ಎಲೆಕ್ಟ್ರಿಕ್ ವೆಹಿಕಲ್ ತಯಾರಕರು ಹಾಗೂ ಇವಿ ಸಂಸ್ಥಾಪಕರಾದ ತರುಣ್ ಮೆಹ್ತಾ ಮತ್ತು ಸ್ವಪ್ನಿಲ್ ಜೈನ್ ಅವರಿಗೆ ಅನೇಕ ಎಕ್ಸ್ ಬಳಕೆದಾರರು ಟ್ಯಾಗ್ ಮಾಡಿದ್ದಾರೆ. ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಇರುವ ತಪ್ಪು ಕಲ್ಪನೆ ತೆಗೆದು ಹಾಕಿ ಹಾಗೂ ಮಾಲ್‌ನ ಆಡಳಿತದೊಂದಿಗೆ ಮಾತನಾಡಿ ಎಂದು ತರುಣ್ ಮೆಹ್ತಾ ಮತ್ತು ಸ್ವಪ್ನಿಲ್ ಜೈನ್ಗೆ ಟ್ಯಾಗ್ ಮಾಡಿದ್ದಾರೆ.
ಇದನ್ನೂ ಓದಿ: ಅಯೋಧ್ಯೆಯಲ್ಲಿ ಮತ್ತೊಂದು ಪುಟ್ಟ ರಾಮಲಲ್ಲಾನ ವಿಗ್ರಹ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್, ಫೋಟೋ ವೈರಲ್
ಇನ್ನು ಏಪ್ರಿಲ್ 2022 ರಲ್ಲಿ, ಕಂಪನಿಯ ಹೇಳಿಕೆಯ ಪ್ರಕಾರ, ದೇಶದ ವಿವಿಧ ಭಾಗಗಳಲ್ಲಿ ಇವಿ ವಾಹನಗಳಿಗೆ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಓಲಾ ಎಲೆಕ್ಟ್ರಿಕ್ ತನ್ನ 1,441 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಹಿಂಪಡೆಯುವುದಾಗಿ ಹೇಳಿದೆ. ಒಕಿನಾವಾ ಆಟೋಟೆಕ್ ಸುಮಾರು 3,000 ವಾಹನಗಳನ್ನು ಹಿಂಪಡೆದಿದೆ. ಇನ್ನು ಇಂತಹ ಘಟನೆಗಳ ಬಗ್ಗೆ ಸರ್ಕಾರ ತನಿಖೆ ನಡೆಸುತ್ತಿದೆ. ಹಾಗೂ ಸರಿಯಾದ ಕ್ರಮ ತೆಗೆದುಕೊಳ್ಳದಿದ್ದಾರೆ ಇವಿ ಕಂಪನಿಗಳಿಗೆ ದಂಡ ವಿಧಿಸಲಾಗುವುದು ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:44 am, Tue, 26 March 24