Momo: ಮೊನ್ನೆಮೊನ್ನೆಯಷ್ಟೇ ತಿಂದ ಮೋದಕದ ರುಚಿ ಇನ್ನೂ ಬಾಯಲ್ಲಿದೆ. ಮತ್ತೀಗೇಕೆ ಮೊದಕ ಎನ್ನುತ್ತಿದ್ದೀರೇ? ಒದು ಮೋದಕನ ವಂಶಸ್ಥ ಮೊಮೊ. ಇದೀಗ ವೈರಲ್ ಆಗಿರುವ ಈ ಮೊಮೊದಲ್ಲಿ ತರಕಾರಿಯೂ ಇಲ್ಲ ಚಿಕನ್ನೂ ಇಲ್ಲ. ಇದರೊಳಗೆ ಅನಾನಸ್ ಹಣ್ಣಿದೆ. ಪೈನಾಪಲ್ ಮೊಮೊ (Pineapple Momo) ಎಂಬ ಶೀರ್ಷಿಕೆಯಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಅನಾನಸಿನ ಚೂರುಗಳನ್ನು ಹಿಟ್ಟಿನೊಳಗೆ ತುಂಬಿ ಉಗಿಯ ಮೇಲೆ ಬೇಯಿಸಲಾಗುತ್ತದೆ. ನಂತರ ಅವುಗಳನ್ನು ಕರಿಯಲಾಗುತ್ತದೆ. ಈ ವಿಡಿಯೋ ನೋಡಿದ ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನನಗೆ ಹಾರ್ಪಿಕ್ ಮೊಮೊ ಬೇಕಿತ್ತು. ಈ ಮೊಮೊ ನೋಡಿ ನನಗೆ ಒಂದೇ ಸಮ ಅಳು ಬರುತ್ತಿದೆ. ಗರುಡ ಪುರಾಣದಲ್ಲಿ ಇವನಿಗೆ ವಿಶೇಷವಾಗಿ ಶಿಕ್ಷೆ ಕಾದಿದೆ… ಅಂತೆಲ್ಲ ಪ್ರತಿಕ್ರಿಯಿಸುತ್ತಿದ್ದಾರೆ.
ಇದನ್ನೂ ಓದಿ : Viral Video: ಬೆಂಗಳೂರಿನಲ್ಲಿ ಬ್ಯಾಟ್ಮೊಬೈಲ್, ಮಿಸ್ಟರಿ ಮಷೀನ್, ಬಂಬಲ್ಬೀ ಕಾರುಗಳು; ನೆಟ್ಟಿಗರ ಹಾಸ್ಯದಲೆ
ಈ ವಿಡಿಯೋ ಅನ್ನು ಆ. 24ರಂದು ಇನ್ಸ್ಟಾಗ್ರಾಂನ ಜತಿನ್ ಕುಮಾರ್ ಎನ್ನುವವರು ಹಂಚಿಕೊಂಡಿದ್ದಾರೆ. ಇಂಥ ವಿಚಿತ್ರ ಪಾಕಪ್ರಯೋಗ ಕಂಡು ನೆಟ್ಟಿಗರು ಕಿಡಿಕಾರಿದ್ದಾರೆ. ಯಾವ ದೇವರೂ ನಿನ್ನನ್ನು ಕ್ಷಮಿಸಲಾರ ಎಂದು ಒಬ್ಬರು. ನಾನಂತೂ ಸತ್ತರೂ ಮೊಮೊ ತಿನ್ನಲಾರೆ ಎಂದಿದ್ದಾರೆ ಇನ್ನೊಬ್ಬರು. ಈ ಮೊಮೊದ ಬೆಲೆ ಎಷ್ಟು ಎಂದು ಕೇಳಿದ್ದಾರೆ ಮತ್ತೊಬ್ಬರು.
ಅಣ್ಣಾ ಒಂದು ಪ್ಲೇಟ್ ಮೊಮೊ ಕೊಡು ಆದರೆ ಅದರೊಂದಿಗೆ ಚಟ್ನಿ ಕೊಡಬೇಡ ತೊಟ್ಟು ಹಾರ್ಪಿಕ್ ಕೊಡು ಎಂದಿದ್ದಾರೆ ಒಬ್ಬರು. ಇದು ಮಾಡುತ್ತಿರುವವರ ತಪ್ಪಲ್ಲ, ತಿನ್ನುವವರ ತಪ್ಪು ಎಂದಿದ್ದಾರೆ ಇನ್ನೊಬ್ಬರು. ಪಿಝಾನಲ್ಲಿ ಕೂಡ ನಾನು ಪೈನಾಪಲ್ ತಿನ್ನುವುದಿಲ್ಲ, ಇನ್ನು ಮೊಮೊದಲ್ಲಿ? ಎಂದು ಕೇಳಿದ್ದಾರೆ ಮತ್ತೊಬ್ಬರು. ಯಾರಾದರೂ ಚಾಕೊಲೇಟ್ ಮೊಮೊ ತಿಂದಿದ್ದೀರಾ? ಎಂದು ಕೇಳಿದ್ದಾರೆ ಮಗದೊಬ್ಬರು.
ಇದನ್ನೂ ಓದಿ : Viral Video: ಈ ಹೆಬ್ಬಾವುಗಳು ಸಬ್ಸ್ಟೇಷನ್ನಲ್ಲಿ ಕೆಲಸ ಹುಡುಕಿಕೊಂಡು ಬಂದಿವೆಯೇ?
ನೀನು ನರಕದಲ್ಲಿ ಬೀಳುತ್ತೀ ಎಂದು ಒಬ್ಬರು. ನನಗೆ ಇವನು ಏನು ಮಾಡುತ್ತಿದ್ದಾನೆ ಎಂದು ಕಾಣುತ್ತಲೇ ಇಲ್ಲ ಎಂದು ಇನ್ನೊಬ್ಬರು. ನನಗೆ ಪಾಯಿಸನ್ ಮೊಮೊ ತಿನ್ನಬೇಕು ಎನ್ನಿಸುತ್ತಿದೆ ಈ ವಿಡಿಯೋ ನೋಡಿದಮೇಲೆ ಎನ್ನುತ್ತಿದ್ದಾರೆ ಮತ್ತೂ ಒಬ್ಬರು.
ಒಟ್ಟಾರೆಯಾಗಿ ಈ ವಿಚಿತ್ರ ಪಾಕ ಪ್ರಯೋಗ ನೋಡಿದ ಮೇಲೆ ನಿಮಗೆ ಏನೆನ್ನಿಸಿತು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:24 pm, Fri, 29 September 23