AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Death Banned: ಈ ಊರುಗಳಲ್ಲಿ ಸಾಯುವುದೇ ನಿಷೇಧ! ಇಲ್ಲಿ ಯಾರಾದ್ರೂ ಸತ್ತರೆ ಏನಾಗುತ್ತೆ?

ಜಗತ್ತಿನ ಕೆಲವು ಊರುಗಳಲ್ಲಿ ‘ಸಾಯುವುದೇ ನಿಷೇಧ’ ಎಂಬ ವಿಚಿತ್ರ ನಿಯಮಗಳಿವೆ. ಆದರೆ ಇದರ ಹಿಂದೆ ಸಾವನ್ನು ತಡೆಯುವ ಉದ್ದೇಶವಿಲ್ಲ. ನಾರ್ವೆಯ ಲಾಂಗ್‌ಯಿಯರ್‌ಬೈನ್‌ನಲ್ಲಿ ಹೆಪ್ಪುಗಟ್ಟಿದ ನೆಲದಿಂದ ಶವಗಳನ್ನು ಸಮಾಧಿ ಮಾಡುವುದು ಕಷ್ಟವಾದರೆ, ಫ್ರಾನ್ಸ್‌ ಮತ್ತು ಸ್ಪೇನ್‌ನ ಕೆಲವು ಊರುಗಳಲ್ಲಿ ಸ್ಮಶಾನದಲ್ಲಿ ಜಾಗದ ಕೊರತೆ ಇದಕ್ಕೆ ಕಾರಣವಾಗಿದೆ.

Death Banned: ಈ ಊರುಗಳಲ್ಲಿ ಸಾಯುವುದೇ ನಿಷೇಧ! ಇಲ್ಲಿ ಯಾರಾದ್ರೂ ಸತ್ತರೆ ಏನಾಗುತ್ತೆ?
Death Banned
ಸಾಯಿನಂದಾ
| Edited By: |

Updated on: Oct 08, 2026 | 10:39 AM

Share

ಮುಖ್ಯಾಂಶಗಳು

  • ಜಗತ್ತಿನಲ್ಲಿ ಸಾಯುವುದೇ ‘ನಿಷೇಧ’ ಎನ್ನಲಾಗುವ ಊರುಗಳಿವೆ!
  • ನಾರ್ವೆಯ ಈ ಊರಲ್ಲಿ ಶವ ಹೂಳಲು ಸಾಧ್ಯವಿಲ್ಲ
  • ಸ್ಮಶಾನದಲ್ಲಿ ಜಾಗವಿಲ್ಲ- ಸಾಯುವುದನ್ನು ನಿಷೇಧ

ಸಾವು (Death) ಯಾರಿಗೂ ತಪ್ಪಿಸಲಾಗದ ನೈಸರ್ಗಿಕ ಪ್ರಕ್ರಿಯೆ. ಆದರೆ ಜಗತ್ತಿನ ಕೆಲವು ಊರುಗಳ ಬಗ್ಗೆ ಕೇಳಿದರೆ, ಅಲ್ಲಿ ಸಾಯುವುದೇ ನಿಷೇಧವಂತೆ! ಈ ವಿಚಾರ ಕೇಳಿದ ತಕ್ಷಣ ‘ಇದು ಹೇಗೆ ಸಾಧ್ಯ?’ ಎಂಬ ಪ್ರಶ್ನೆ ಮೂಡುವುದು ಸಹಜ. ನಿಜಕ್ಕೂ ಯಾರಾದರೂ ಅಲ್ಲಿ ಸತ್ತರೆ ಕಾನೂನು ಕ್ರಮ ಕೈಗೊಳ್ಳುತ್ತಾರಾ? ಇದರ ಹಿಂದೆ ವಿಚಿತ್ರವಾದರೂ ಪ್ರಾಯೋಗಿಕ ಕಾರಣಗಳಿವೆ.

ನಾರ್ವೆಯ ಆರ್ಕ್ಟಿಕ್ ಪ್ರದೇಶದಲ್ಲಿರುವ ಲಾಂಗ್‌ಯಿಯರ್‌ಬೈನ್ ಈ ಪಟ್ಟಿಯಲ್ಲಿ ಹೆಚ್ಚು ಚರ್ಚೆಯಾಗುವ ಸ್ಥಳ. ಜಗತ್ತಿನ ಅತ್ಯಂತ ಶೀತ ಪ್ರದೇಶಗಳಲ್ಲೊಂದಾದ ಇಲ್ಲಿ ನೆಲ ಸದಾ ಹೆಪ್ಪುಗಟ್ಟಿರುವುದರಿಂದ ಶವಗಳು ಸಾಮಾನ್ಯ ರೀತಿಯಲ್ಲಿ ಕೊಳೆಯುವುದಿಲ್ಲ. 1950ರಲ್ಲಿ ಸ್ಥಳೀಯ ಸ್ಮಶಾನದಲ್ಲಿ ಹಳೆಯ ಶವಗಳು ಕೊಳೆಯದೇ ಉಳಿದಿರುವುದು ಗಮನಕ್ಕೆ ಬಂದ ನಂತರ ಅಲ್ಲಿ ಸಮಾಧಿ ಮಾಡುವ ಪದ್ಧತಿಯನ್ನು ನಿಲ್ಲಿಸಲಾಯಿತು. 1918ರ ಸ್ಪ್ಯಾನಿಷ್ ಫ್ಲೂಗೆ ಬಲಿಯಾದವರ ಶವಗಳಲ್ಲಿಯೂ ವೈರಸ್‌ನ ಅವಶೇಷಗಳು ಪತ್ತೆಯಾಗಿದ್ದವು ಎಂಬ ವರದಿಗಳಿವೆ.

ಹೀಗಾಗಿ ಲಾಂಗ್‌ಯಿಯರ್‌ಬೈನ್‌ನಲ್ಲಿ ‘ಸಾಯುವುದು ಕಾನೂನುಬಾಹಿರ’ ಎನ್ನುವುದಕ್ಕಿಂತ, ಅಲ್ಲಿ ಶವವನ್ನು ಸಮಾಧಿ ಮಾಡಲು ಅವಕಾಶವಿಲ್ಲ ಎನ್ನುವುದು ಹೆಚ್ಚು ನಿಖರ. ಗಂಭೀರ ಅನಾರೋಗ್ಯದಿಂದ ಜೀವನದ ಅಂತಿಮ ಹಂತದಲ್ಲಿರುವವರನ್ನು ಸಾಮಾನ್ಯವಾಗಿ ನಾರ್ವೆಯ ಮುಖ್ಯ ಭೂಭಾಗಕ್ಕೆ ಕಳುಹಿಸಲಾಗುತ್ತದೆ. ಅಲ್ಲೇನಾದರೂ ವ್ಯಕ್ತಿ ಮೃತಪಟ್ಟರೆ, ದೇಹವನ್ನು ಸ್ಥಳೀಯವಾಗಿ ಅಂತ್ಯಸಂಸ್ಕಾರ ಮಾಡುವ ವ್ಯವಸ್ಥೆ ಕೈಗೊಳ್ಳಲಾಗುತ್ತದೆ.

ಇದೇ ರೀತಿಯ ವಿಚಿತ್ರ ‘ಸಾವು ನಿಷೇಧ’ ಘೋಷಣೆಗಳು ಫ್ರಾನ್ಸ್‌ನ ಕೆಲವು ಪಟ್ಟಣಗಳಲ್ಲೂ ಕೇಳಿಬಂದಿವೆ. ಫ್ರಾನ್ಸ್‌ನ ಲೆ ಲವಾಂಡೌ ಪಟ್ಟಣದಲ್ಲಿ 2000ರಲ್ಲಿ ಸಾಯುವುದನ್ನು ನಿಷೇಧಿಸುವ ಆದೇಶ ಹೊರಡಿಸಲಾಗಿತ್ತು. ಆದರೆ ಇದರ ಹಿಂದೆ ಯಾವುದೇ ಅಲೌಕಿಕ ಕಾರಣ ಇರಲಿಲ್ಲ. ಸ್ಥಳೀಯ ಸ್ಮಶಾನದಲ್ಲಿ ಜಾಗದ ಕೊರತೆ ಉಂಟಾಗಿತ್ತು. ಹೊಸ ಸ್ಮಶಾನ ನಿರ್ಮಿಸಲು ಅನುಮತಿ ಸಿಗದ ಹಿನ್ನೆಲೆಯಲ್ಲಿ ಅಂದಿನ ಮೇಯರ್ ಈ ವಿಚಿತ್ರ ಆದೇಶದ ಮೂಲಕ ಸಮಸ್ಯೆಯತ್ತ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದ್ದರು.

ವಿಮಾನದಲ್ಲೇ ಲೋಕಲ್ ಟ್ರೈನ್ ಅನುಭವ! ಎದ್ದು ಓಡಾಡಿದ ಪ್ರಯಾಣಿಕರು; ವಿಡಿಯೊ ನೋಡಿ ನೆಟ್ಟಿಗರು ಶಾಕ್

ಸ್ಪೇನ್‌ನ ಲಾಂಜರೋನ್ ಗ್ರಾಮದಲ್ಲೂ ಇದೇ ರೀತಿಯ ಘಟನೆ ನಡೆದಿದೆ. 1999ರಲ್ಲಿ ಅಲ್ಲಿನ ಸ್ಮಶಾನದಲ್ಲಿ ಜಾಗದ ಕೊರತೆ ಎದುರಾದಾಗ ಅಂದಿನ ಮೇಯರ್ ಜೋಸೆ ರೂಬಿಯೊ ‘ಲಾಂಜರೋನ್‌ನಲ್ಲಿ ಸಾಯುವುದನ್ನು ನಿಷೇಧಿಸಲಾಗಿದೆ’ ಎಂಬ ಆದೇಶ ಹೊರಡಿಸಿದ್ದರು. ಇದು ನಿಜವಾಗಿಯೂ ಸಾವನ್ನು ತಡೆಯುವ ಕಾನೂನುಗಿಂತ, ಸ್ಮಶಾನದ ಸಮಸ್ಯೆಯ ಬಗ್ಗೆ ಸರ್ಕಾರದ ಗಮನ ಸೆಳೆಯುವ ಸಾಂಕೇತಿಕ ಕ್ರಮವಾಗಿತ್ತು.

ಫ್ರಾನ್ಸ್‌ನ ಕ್ಯೂನ್ಯಾಕ್ ಮತ್ತು ಸರ್ಪೂರೆಂಕ್ಸ್‌ನಂತಹ ಸ್ಥಳಗಳಲ್ಲೂ ಸ್ಮಶಾನಕ್ಕೆ ಜಾಗದ ಕೊರತೆ ಸೇರಿದಂತೆ ಇದೇ ರೀತಿಯ ಕಾರಣಗಳಿಂದ ‘ಸಾವು ನಿಷೇಧ’ ಆದೇಶಗಳು ಹೊರಬಂದಿದ್ದವು ಎಂದು ದಾಖಲೆಗಳಿವೆ. ಇವುಗಳನ್ನು ಅಕ್ಷರಶಃ ಜಾರಿಗೊಳಿಸುವ ಕಾನೂನುಗಳಿಗಿಂತ, ಸ್ಥಳೀಯ ಆಡಳಿತದ ಸಮಸ್ಯೆಗಳನ್ನು ಎತ್ತಿ ತೋರಿಸಲು ಬಳಸಿದ ವಿಶಿಷ್ಟ ಕ್ರಮಗಳೆಂದು ನೋಡಲಾಗುತ್ತದೆ.

ಹೀಗಾಗಿ ಈ ಊರುಗಳಲ್ಲಿ ಕೆಲವು ಕಡೆ ಹೆಪ್ಪುಗಟ್ಟಿದ ನೆಲದಿಂದ ಸಮಾಧಿ ಮಾಡಲು ಸಾಧ್ಯವಾಗದಿರುವುದು, ಮತ್ತೆ ಕೆಲವು ಕಡೆ ಸ್ಮಶಾನದಲ್ಲಿ ಜಾಗದ ಕೊರತೆ ಮುಖ್ಯ ಕಾರಣ. ಇದೇ ಕಾರಣಕ್ಕೆ ‘ಇಲ್ಲಿ ಸಾಯುವುದೇ ನಿಷೇಧ’ ಎಂಬ ವಿಚಿತ್ರ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕುತೂಹಲ ಮೂಡಿಸಿವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ರಾಜ್ಯದ ವಿವಿಗಳಲ್ಲಿನ ಸಾವಿರಾರು ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಸಿದ್ಧತೆ!
ರಾಜ್ಯದ ವಿವಿಗಳಲ್ಲಿನ ಸಾವಿರಾರು ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಸಿದ್ಧತೆ!
ದೆಹಲಿಯಲ್ಲಿ ಇಂಡಿ ಮೈತ್ರಿಕೂಟದ ಪ್ರತಿಭಟನೆ
ದೆಹಲಿಯಲ್ಲಿ ಇಂಡಿ ಮೈತ್ರಿಕೂಟದ ಪ್ರತಿಭಟನೆ
ಬಸ್ ಚಾಲನೆ ಮಾಡುತ್ತಲೇ ಮೊಬೈಲ್‌ನಲ್ಲಿ ಹರಟೆ
ಬಸ್ ಚಾಲನೆ ಮಾಡುತ್ತಲೇ ಮೊಬೈಲ್‌ನಲ್ಲಿ ಹರಟೆ
ಅತ್ತಿಬೆಲೆ ಪೆಟ್ರೋಲ್ ಬಂಕ್​ಗೆ ನುಗ್ಗಿದ ಜಾಗ್ವಾರ್ ಕಾರು: ಭಾರಿ ಅಗ್ನಿ ಅವಘಡ
ಅತ್ತಿಬೆಲೆ ಪೆಟ್ರೋಲ್ ಬಂಕ್​ಗೆ ನುಗ್ಗಿದ ಜಾಗ್ವಾರ್ ಕಾರು: ಭಾರಿ ಅಗ್ನಿ ಅವಘಡ
ಯಾರಿಗೆ ವೆಂಕಟೇಶ್ವರ ಸ್ವಾಮಿ ಕೃಪೆ?, ಯಾರಿಗೆ ಧನಲಾಭ?
ಯಾರಿಗೆ ವೆಂಕಟೇಶ್ವರ ಸ್ವಾಮಿ ಕೃಪೆ?, ಯಾರಿಗೆ ಧನಲಾಭ?
ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಇನ್ವೆಸ್ಟರ್ ಆದ ಮಗು!
ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಇನ್ವೆಸ್ಟರ್ ಆದ ಮಗು!
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?