ಪ್ರಧಾನಿ ಮೋದಿ ಇಂದು ಅಯೋಧ್ಯೆಗೆ ಭೇಟಿ ನೀಡಿದ್ದು, ಇಂದು ಅಯೋಧ್ಯೆಯಲ್ಲಿ ಅಮೃತ್ ಭಾರತ್ ಎಕ್ಸ್ಪ್ರೆಸ್ ಮತ್ತು ಆರು ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದಾರೆ. ಹಾಗೂ ಪುನರಾಭಿವೃದ್ಧಿಗೊಂಡ ಅಯೋಧ್ಯೆ ರೈಲು ನಿಲ್ದಾಣವನ್ನು ಸಹ ಉದ್ಘಾಟಿಸಿದರು. ಈ ನಡುವೆ ಅಯೋಧ್ಯಾ ಧಾಮ್ ರೈಲು ನಿಲ್ದಾಣದಿಂದ ವಾಪಸಾಗುತ್ತಿದ್ದ ವೇಳೆಯಲ್ಲಿ ಪ್ರಧಾನಿ ಮೋದಿ ಅವರು ಪಿ.ಎಂ ಆವಾಸ್ ಯೋಜನೆ ಮತ್ತು ಉಜ್ವಲ ಯೋಜನೆಯ ಫಲಾನುಭವಿ ಮೀರಾ ಮಾಂಝಿ ಅವರ ಮನೆಗೆ ಅಚ್ಚರಿಯ ಭೇಟಿಯನ್ನು ನೀಡಿ, ಅಲ್ಲಿ ಚಹಾ ಕುಡಿದು, ಮೀರಾ ಮಾಂಝಿ ಅವರನ್ನು ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
@MeghUpdates ಎಂಬ X ಖಾತೆಯಲ್ಲಿ ಈ ವಿಡಿಯೋವನ್ನು ಹರಿಬಿಡಲಾಗಿದ್ದು, ಅಯೋಧ್ಯೆಯಲ್ಲಿರುವ ಉಜ್ವಲ ಯೋಜನೆ ಫಲಾನುಭವಿ ಮೀರಾ ಮಾಂಝಿ ಅವರ ಮನೆಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವಿಡಿಯೋದಲ್ಲಿ ಪ್ರಧಾನಿ ಮೋದಿ ಮೀರಾ ಮಾಂಝಿ ಅವರ ಮನೆಗೆ ಭೇಟಿ ನೀಡಿ, ಅವರನ್ನು ರಾಮ ಮಂದಿರ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸುತ್ತಿರುವ ದೃಶ್ಯವನ್ನು ಕಾಣಬಹುದು.
PM Modi visits the house of a Ujwalla beneficiary Meera Majhi in Ayodhya, has tea at her residence.
She, a labaharthi behen, was the 10 croreth beneficiary of the PM Ujwalla Yojana pic.twitter.com/dX6Yo8UZfd
— Megh Updates 🚨™ (@MeghUpdates) December 30, 2023
ವೈರಲ್ ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮೀರಾ ಮಾಂಝಿ ಅವರ ಮನೆಗೆ ಅಚ್ಚರಿಯ ಭೇಟಿ ನೀಡಿರುವುದನ್ನು ಕಾಣಬಹುದು. ಅಲ್ಲದೆ ಅವರ ಮನೆಯಲ್ಲಿ ಚಹಾ ಕುಡಿದು, ಮೀರಾ ಮಾಂಝಿಯವರನ್ನು ಪ್ರಧಾನಿ ಮೋದಿ ಅವರು ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಮತ್ತು ಹೆಮ್ಮೆಯ ಪ್ರಧಾನಿಯನ್ನು ನೋಡಲೆಂದು ಅಲ್ಲಿ ಹಲವಾರು ಸಂಖ್ಯೆಯಲ್ಲಿ ಜನರೂ ನೆರೆದಿದ್ದರು. ಅಲ್ಲದೆ ಮೋದಿಯವರನ್ನು ಕಂಡು ಅಲ್ಲಿ ನೆರೆದಿದ್ದವರೆಲ್ಲ “ಜೈ ಶ್ರೀರಾಮ್” ಘೋಷಣೆಯನ್ನು ಕೂಗುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇದನ್ನೂ ಓದಿ: ನೆಲ ಒರೆಸುವ ಮಾಪ್, ಲಟ್ಟಣಿಗೆ, ಚಪ್ಪಲಿ ಮುಂತಾದವುಗಳನ್ನು ಬಳಸಿ ಅದ್ಭುತ ಚಿತ್ರ ಬಿಡಿಸುತ್ತಾಳೆ ಈ ಮಹಿಳೆ
ಡಿಸೆಂಬರ್ 30 ರಂದು ಹಂಚಿಕೊಳ್ಳಲಾದ ಈ ವಿಡಿಯೋ 29 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಯೋಧ್ಯಾ ಧಾಮ್ ನಿಲ್ದಾಣದಿಂದ ಹಿಂದಿರುಗುವಾಗ, ಪ್ರಧಾನಿ ಮೋದಿ ಅವರು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿ ಮೀರಾ ಮಾಂಝಿ ಅವರನ್ನು ಭೇಟಿ ಮಾಡಿದ್ದಾರೆ. ನಿಜಕ್ಕೂ ಮೋದಿ ಜನರ ಪ್ರಧಾನಿʼ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಇನ್ನೂ ಅನೇಕರು ಈ ಸುಂದರ ವಿಡಿಯೋಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: