AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನೆಲ ಒರೆಸುವ ಮಾಪ್, ಲಟ್ಟಣಿಗೆ, ಚಪ್ಪಲಿ ಮುಂತಾದವುಗಳನ್ನು ಬಳಸಿ ಅದ್ಭುತ ಚಿತ್ರ ಬಿಡಿಸುತ್ತಾಳೆ ಈ ಮಹಿಳೆ

ಮಹಿಳೆಯೊಬ್ಬಳು ತಾನು ಪ್ರತಿದಿನ ಬಳಸುವ ನೆಲ ಒರೆಸುವ ಮಾಪ್, ಲಟ್ಟಣಿಕೆ,ಚಪ್ಪಲಿಗಳನ್ನು ಬಳಸಿ ಅದ್ಭುತ ಚಿತ್ರ ಬಿಡಿಸುತ್ತಾಳೆ. ಈಕೆ ಚಿತ್ರ ಬಿಡಿಸುವ ವಿಶೇಷ ಪ್ರತಿಭೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದೆ. ವಿಡಿಯೋ ಇಲ್ಲಿದೆ ನೋಡಿ.

Viral Video: ನೆಲ ಒರೆಸುವ ಮಾಪ್, ಲಟ್ಟಣಿಗೆ, ಚಪ್ಪಲಿ ಮುಂತಾದವುಗಳನ್ನು ಬಳಸಿ ಅದ್ಭುತ ಚಿತ್ರ ಬಿಡಿಸುತ್ತಾಳೆ ಈ ಮಹಿಳೆ
Artist AlexImage Credit source: instagram
ಅಕ್ಷತಾ ವರ್ಕಾಡಿ
|

Updated on: Dec 30, 2023 | 11:50 AM

Share

ಈ ಮಹಿಳೆಯ ಪ್ರತಿಭೆ ಅದ್ಭುತವಾಗಿದ್ದು, ಈಕೆ ಲಟ್ಟಣಿಗೆ,ಚಪ್ಪಲಿ ಮತ್ತು ನೆಲ ಒರೆಸುವ ಮಾಪ್ ಬಳಸಿ ಅದ್ಭುತವಾದ ವರ್ಣಚಿತ್ರ ಬಿಡಿಸಿದ್ದಾರೆ. ನಿಮ್ಮಲ್ಲಿ ಪ್ರತಿಭೆ ಇದ್ದರೆ ಯಾರನ್ನಾದರೂ ನಿಮ್ಮ ಅಭಿಮಾನಿಯನ್ನಾಗಿ ನಿಮ್ಮತ್ತ ಸೆಳೆಯಬಹುದು ಎಂಬುದಕ್ಕೆ ಇದು ಉತ್ತಮ ನಿದರ್ಶನ. ಪ್ರತೀ ನಿಮಿಷಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವೊಂದು ವಿಡಿಯೋಗಳು ಭಾರೀ ವೈರಲ್​​ ಆಗುವುದುಂಟು. ಇದೀಗಾ ಈ ಮಹಿಳೆಯ ಅದ್ಭುತವಾದ ಪ್ರತಿಭೆ ಸದ್ಯ ಲಕ್ಷಾಂತರ ನೆಟ್ಟಿಗರನ್ನು ತಲುಪಿದೆ.

ಯಾವುದೇ ಪೇಂಟ್ ಬ್ರಶ್ ಬಳಸದೇ ದಿನಬಳಕೆಯಲ್ಲಿ ಬಳಸುವ ವಸ್ತಗಳನ್ನು ಬಳಸಿ ಆಕರ್ಷಕ ಸಿಂಹ ಮುಖದ ಚಿತ್ರವನ್ನು ಬಿಡಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ವಿಡಿಯೋವನ್ನು ಸ್ವತಃ ಕಲಾವಿದೆ ಅಲೆಕ್ಸಾ ತನ್ನ @alex_artiste_peintre ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಖಾತೆಯಲ್ಲಿ ಇನ್ನಷ್ಟು ವಿಭಿನ್ನ ಶೈಲಿಯ ಕಲಾಕೃತಿಗಳನ್ನು ಕಾಣಬಹುದು.

View this post on Instagram

A post shared by Alex (@alex_artiste_peintre)

ಇದನ್ನೂ ಓದಿ: ರಾಮಾಯಣ ಧಾರಾವಾಹಿ ಚಿತ್ರೀಕರಣದ ವೇಳೆ ನಡೆದಿತ್ತು ಅಚ್ಚರಿಯ ಸಂಗತಿ: ಸೀತಾ ಪಾತ್ರಧಾರಿ ದೀಪಿಕಾ ಹೇಳಿದ್ದೇನು?

ಈ ವೀಡಿಯೋವನ್ನು ಡಿಸೆಂಬರ್​ 16ರಂದು ಹಂಚಿಕೊಂಡಿದ್ದು, ಈಗಾಗಲೇ 79 ಮಿಲಿಯನ್​​​​ ನೆಟ್ಟಿಗರನ್ನು ತಲುಪಿದೆ. ಇದಲ್ಲದೇ 3,630,304 ವೀಕ್ಷಕರು ವಿಡಿಯೋವನ್ನು ಲೈಕ್​​ ಮಾಡಿದ್ದಾರೆ. ವಿಡಿಯೋ ಎಲ್ಲೆಡೆ ವೈರಲ್​ ಅಗುತ್ತಿದ್ದಂತೆ ಆಕೆಯ ಪ್ರತಿಭೆಯನ್ನು ಕಂಡು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ಅನೇಕ ಬಳಕೆದಾರರು ಈ ಬಗ್ಗೆ ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್