Viral Post: 3ಸಾವಿರ ವರ್ಷಗಳಷ್ಟು ಹಳೆಯದಾದ ವಿಗ್ರಹದಲ್ಲಿ QR ಕೋಡ್ ಪತ್ತೆ; ಶಾಕ್​​ ಆದ ನೆಟ್ಟಿಗರು​​

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ಫೋಟೋ ನಿಜವೋ? ಸುಳ್ಳೋ ಎಂದು ಇನ್ನೂ ತಿಳಿದಿಲ್ಲ. ಆದರೆ ಈ ವಿಚಿತ್ರ ವಿಗ್ರಹದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದನ್ನು ಇತ್ತೀಚೆಗಷ್ಟೇ 'ಮಿಸ್ಟೀರಿಯಸ್ ವರ್ಲ್ಡ್ ' ಎಂಬ ಫೇಸ್ ಬುಕ್ ನಲ್ಲಿ ಖಾತೆಯಲ್ಲಿ ಹಂಚಿಕೊಳ್ಳಳಾಗಿದೆ.

Viral Post: 3ಸಾವಿರ ವರ್ಷಗಳಷ್ಟು ಹಳೆಯದಾದ ವಿಗ್ರಹದಲ್ಲಿ QR ಕೋಡ್ ಪತ್ತೆ; ಶಾಕ್​​ ಆದ ನೆಟ್ಟಿಗರು​​
Follow us
|

Updated on: May 17, 2024 | 2:30 PM

ಇಂದು ನಾವು ಬಳಸುವ ಕ್ಯೂಆರ್ ಕೋಡ್ ತಂತ್ರಜ್ಞಾನವು 3000 ವರ್ಷಗಳ ಹಿಂದೆಯೇ ಅಸ್ತಿತ್ವದಲ್ಲಿ ಇತ್ತೇ ಎಂಬ ಸಾಕಷ್ಟು ಗೊಂದಲಗಳು ಇದೀಗಾ ನೆಟ್ಟಿಗರಲ್ಲಿ ಹುಟ್ಟಿಕೊಂಡಿದೆ. ಯಾಕೆಂದರೆ ಸುಮಾರು 3000 ವರ್ಷಗಳಷ್ಟು ಹಳೆಯದಾದ ವಿಗ್ರಹವೊಂದರ ತಲೆಯ ಭಾಗದಲ್ಲಿ ಕ್ಯೂಆರ್ ಕೋಡ್​​ನಂತಹ ಆಕೃತಿ ಪತ್ತೆಯಾಗಿದೆ. ಈ ವಿಗ್ರಹದ ಫೋಟೋವನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ಈ ಫೋಟೋ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ವಿಗ್ರಹವು ಅಮೆರಿಕದ ಪ್ರಾಚೀನ ನಾಗರೀಕತೆಯಗಿಂತಲೂ ಹಿಂದಿನದ್ದು ಎಂದು ಪರಿಗಣಿಸಲಾಗಿದೆ. ಈ ಪುರಾತನ ಪ್ರತಿಮೆಯು ಸಾಮಾನ್ಯ ಪ್ರತಿಮೆಗಳಿಗಿಂತ ವಿಭಿನ್ನ ಮತ್ತು ವಿಚಿತ್ರವಾಗಿದೆ. ಯಾಕೆಂದರೆ ಪ್ರತಿಮೆಯ ತಲೆಯ ಬದಲಿಗೆ ನಾವೀಗ ಆನ್‌ಲೈನ್ ಪೇಮೆಂಟ್​​​ಗಾಗಿ ಬಳಸುತ್ತಿರುವ ಕ್ಯೂಆರ್ ಕೋಡ್ ರೀತಿಯಲ್ಲಿ ಕೆತ್ತಲಾಗಿದೆ. ಮೂರು ಸಾವಿರ ವರ್ಷಗಳಷ್ಟು ಹಳೆಯದಾದ ಮಾಯಾ ನಾಗರಿಕತೆಯು ಕೆಲವು ಪ್ರಮುಖ ಕಾರ್ಯಗಳಿಗೆ ಇಂತಹ ತಂತ್ರಜ್ಞಾನವನ್ನು ಬಳಸಿರಬಹುದು ಎಂದು ಜನರು ಹೇಳುತ್ತಿದ್ದಾರೆ.

ಇದನ್ನೂ ಓದಿ:  95 ವರ್ಷ ಹಳೆಯ ಬ್ರಿಟಿಷ್ ಇಂಡಿಯಾದ ಪಾಸ್‌ಪೋರ್ಟ್ ಹೇಗಿತ್ತು ನೋಡಿ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ಫೋಟೋ ನಿಜವೋ? ಸುಳ್ಳೋ ಎಂದು ಇನ್ನೂ ತಿಳಿದಿಲ್ಲ. ಆದರೆ ಈ ವಿಚಿತ್ರ ವಿಗ್ರಹದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದನ್ನು ಇತ್ತೀಚೆಗಷ್ಟೇ ‘ಮಿಸ್ಟೀರಿಯಸ್ ವರ್ಲ್ಡ್ ‘ ಎಂಬ ಫೇಸ್ ಬುಕ್ ನಲ್ಲಿ ಖಾತೆಯಲ್ಲಿ ಹಂಚಿಕೊಂಡಿದ್ದು, 31ಸಾವಿರಕ್ಕೂ ಹೆಚ್ಚು ಲೈಕುಗಳನ್ನು ಪಡೆದುಕೊಂಡಿದೆ. ಸಾವಿರಾರು ಫೇಸ್​ಬುಕ್​​​​ ಬಳಕೆದಾರರು ಬಗೆಬಗೆಯಾಗಿ ಕಾಮೆಂಟ್​​​​ ಸೆಕ್ಷನ್​​ನಲ್ಲಿ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: