Viral Video: ರಸ್ತೆಯಲ್ಲೇ ಸಿಪಿಆರ್ ಮಾಡಿ ಬಾಲಕನ ಪ್ರಾಣ ಉಳಿಸಿದ ವೈದ್ಯೆ
ರಸ್ತೆಯಲ್ಲೇ ಸಿಪಿಆರ್ ಮಾಡಿ ಬಾಲಕನ ಪ್ರಾಣ ಉಳಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಸಿಪಿಆರ್ ಮಾಡುತ್ತಿರುವುದನ್ನು ಕಾಣಬಹುದು. ಬಾಲಕನ ಪ್ರಾಣ ಉಳಿಸಿದ ವೈದ್ಯೆಗೆ ಸ್ಥಳೀಯರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಆಂಧ್ರ ಪ್ರದೇಶ: ವಿಜಯವಾಡದ ಅಯ್ಯಪ್ಪನಗರದ ಆರು ವರ್ಷದ ಸಾಯಿ ಎಂಬ ಬಾಲಕ ಮೇ 5ರಂದು ಸಂಜೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿದ್ದಾನೆ. ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರಿಂದ ಪೋಷಕರು ಮಗುವನ್ನು ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಧಾವಿಸಿದ್ದಾರೆ. ಆದರೆ ರಸ್ತೆ ಮಧ್ಯೆದಲ್ಲೇ ಬಾಲಕನ ಸ್ಥಿತಿ ಗಂಭೀರವಾಗಿದ್ದು, ಅದೇ ದಾರಿಯಲ್ಲಿ ಹೋಗುತ್ತಿದ್ದ ಮೆಡ್ಸಿ ಆಸ್ಪತ್ರೆಯ ಪ್ರಸೂತಿ ತಜ್ಞೆ ನನ್ನಪನೇನಿ ರವಳಿ ಅವರು ರಸ್ತೆಯಲ್ಲೇ ಸಿಪಿಆರ್ ಮಾಡಿ ಬಾಲಕನ ಪ್ರಾಣ ಉಳಿಸಿದ್ದಾರೆ.
ರಸ್ತೆಯಲ್ಲೇ ಸಿಪಿಆರ್ ಮಾಡಿ ಬಾಲಕನ ಪ್ರಾಣ ಉಳಿಸಿದವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಸಿಪಿಆರ್ ಮಾಡುತ್ತಿರುವುದನ್ನು ಕಾಣಬಹುದು. ಬಳಿಕ ಬಾಲಕ ಉಸಿರಾಡಲು ಪ್ರಾರಂಭಿಸಿದ್ದು, ಕೂಡಲೇ ಬಾಲಕನನ್ನು ದ್ವಿಚಕ್ರ ವಾಹನದಲ್ಲಿ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇದನ್ನೂ ಓದಿ: ಒಂದು ದೇಹ ಎರಡು ಜೀವ; ಮೂರು ಕಾಲು, ನಾಲ್ಕು ಕೈ, ಒಂದು ಶಿಶ್ನ ಸಯಾಮಿ ಅವಳಿ ಮಕ್ಕಳ ಜನನ
ಆಸ್ಪತ್ರೆಗೆ ತೆರಳಿದ ಬಳಿಕ ಬಾಲಕ ಸಂಪೂರ್ಣ ಚೇತರಿಸಿಕೊಂಡಿದ್ದಾನೆ. 24 ಗಂಟೆಗಳ ಕಾಲ ನಿಗಾದಲ್ಲಿಟ್ಟು ತಲೆಯ ಸಿಟಿ ಸ್ಕ್ಯಾನ್ ಮಾಡಲಾಗಿದೆ. ಬಳಿಕ ಬಾಲಕ ಸಂಪೂರ್ಣವಾಗಿ ಆರೋಗ್ಯವಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದು, ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಲಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:59 pm, Fri, 17 May 24