ಪನೀರ್ ಬಿರಿಯಾನಿಯಲ್ಲಿ ಚಿಕನ್ ತುಂಡು; ಗ್ರಾಹಕನ ಆರೋಪಕ್ಕೆ ಜೊಮ್ಯಾಟೋ ಹೇಳಿದ್ದೇನು?

ಪುಣೆಯ ರೆಸ್ಟೊರೆಂಟ್‌ನಿಂದ ಜೊಮ್ಯಾಟೋ ಮೂಲಕ ಆರ್ಡರ್ ಮಾಡಿದ ಪನೀರ್ ಬಿರಿಯಾನಿಯ ಪ್ಲೇಟ್‌ನಲ್ಲಿ ಚಿಕನ್ ತುಂಡು ಸಿಕ್ಕಿದ್ದರಿಂದ ತನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ವ್ಯಕ್ತಿಯೊಬ್ಬರು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಜೊಮ್ಯಾಟೋ ಕೂಡ ಪ್ರತಿಕ್ರಿಯೆ ನೀಡಿದೆ.

ಪನೀರ್ ಬಿರಿಯಾನಿಯಲ್ಲಿ ಚಿಕನ್ ತುಂಡು; ಗ್ರಾಹಕನ ಆರೋಪಕ್ಕೆ ಜೊಮ್ಯಾಟೋ ಹೇಳಿದ್ದೇನು?
ಪನೀರ್ ಬಿರಿಯಾನಿಯಲ್ಲಿ ಚಿಕನ್ ತುಂಡು
Follow us
ಸುಷ್ಮಾ ಚಕ್ರೆ
|

Updated on: May 17, 2024 | 3:36 PM

ಪುಣೆ: ಆನ್​ಲೈನ್​ನಲ್ಲಿ ಆಹಾರವನ್ನು ಆರ್ಡರ್ ಮಾಡಿ ತಿನ್ನುವವರು ತಮ್ಮ ಆಹಾರದ ಗುಣಮಟ್ಟದ ಬಗ್ಗೆ ಎಚ್ಚರ ವಹಿಸುವುದು ಅತ್ಯಗತ್ಯ. ಪುಣೆಯ (Pune) ವ್ಯಕ್ತಿಯೊಬ್ಬರು ಜೊಮ್ಯಾಟೋ (Zomato) ಮೂಲಕ ರೆಸ್ಟೋರೆಂಟ್‌ನಿಂದ ‘ಪನೀರ್ ಬಿರಿಯಾನಿ’ ಆರ್ಡರ್ ಮಾಡಿದ್ದು, ಅದರಲ್ಲಿ ಚಿಕನ್ (Chicken) ತುಂಡು ಸಿಕ್ಕಿದೆ. ಜೊಮ್ಯಾಟೋದವರು ತಮ್ಮ ಹಣವನ್ನು ಮರುಪಾವತಿಸಿದ್ದರೂ, ಈ ಘಟನೆಯು ನನ್ನ ‘ಧಾರ್ಮಿಕ ಭಾವನೆಗಳಿಗೆ’ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ.

ಈ ಪೋಸ್ಟ್ ಎಕ್ಸ್​ನಲ್ಲಿ (ಟ್ವಿಟ್ಟರ್​) ವೈರಲ್ ಆಗುತ್ತಿದ್ದಂತೆ, ಜೊಮ್ಯಾಟೋ ಕೂಡ ಇದಕ್ಕೆ ಪ್ರತಿಕ್ರಿಯಿಸಿದೆ. ಇದು ನನ್ನ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದೆ ಎನ್ನುತ್ತಾರೆ ಪುಣೆಯ ವ್ಯಕ್ತಿ. ಯಶ್ ಗಾಡೆ ಎಂಬ ವ್ಯಕ್ತಿ ಈ ಘಟನೆಯನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ”ನಾನು ಮಹಾರಾಷ್ಟ್ರದ ಪುಣೆಯ ಕರವೇ ನಗರದ ಪಿಕೆ ಬಿರಿಯಾನಿ ಹೌಸ್​ನಿಂದ ಪನೀರ್ ಬಿರಿಯಾನಿ ಆರ್ಡರ್ ಮಾಡಿದ್ದೆ. ಅದರಲ್ಲಿ ಚಿಕನ್ ಪೀಸ್ ಸಿಕ್ಕಿತು. ನಾನು ಸಸ್ಯಾಹಾರಿಯಾಗಿದ್ದು, ನಾನು ಈಗಾಗಲೇ ಮರುಪಾವತಿ ಪಡೆದಿದ್ದೇನೆ. ಆದರೆ, ನಾನು ಧಾರ್ಮಿಕ ವ್ಯಕ್ತಿಯಾಗಿರುವುದರಿಂದ ಇದು ನನ್ನ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ.” ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಅನ್ನು 19 ಸಾವಿರ ಜನರು ವೀಕ್ಷಿಸಿದ್ದಾರೆ.

ಇದನ್ನೂ ಓದಿ: ಆರ್ಡರ್ ಮಾಡಿದ್ದು ಚಿಕನ್ನಲ್ಲ, ಪನ್ನೀರ್​ ಸ್ಯಾಂಡ್‌ವಿಚ್; 50 ಲಕ್ಷ ರೂ ಪರಿಹಾರಕ್ಕಾಗಿ ಕೋರ್ಟ್​ ಮೆಟ್ಟಿಲೇರಿದ ಮಹಿಳೆ

ಜೊಮ್ಯಾಟೋ ಪ್ರತಿಕ್ರಿಯೆ:

ಈ ಘಟನೆ ನಿಮಗೆ ಎಷ್ಟು ದುಃಖ ತಂದಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬಹುದು. ನಿಮ್ಮ ಆಹಾರದ ಆದ್ಯತೆಗಳನ್ನು ನಾವು ತುಂಬಾ ಗಂಭೀರವಾಗಿ ಪರಿಗಣಿಸುತ್ತೇವೆ. ಅದನ್ನು ಎಂದಿಗೂ ಅಗೌರವಿಸುವುದು ನಮ್ಮ ಉದ್ದೇಶವಲ್ಲ. ದಯವಿಟ್ಟು ನಿಮ್ಮ ಆರ್ಡರ್ ಐಡಿಯನ್ನು DM ಮೂಲಕ ಹಂಚಿಕೊಳ್ಳಿ. ಇದರಿಂದ ನಾವು ಇದನ್ನು ರೆಸ್ಟೋರೆಂಟ್ ಪಾರ್ಟನರ್​​ಗಳೊಂದಿಗೆ ಬೇಗನೆ ಪರಿಹರಿಸಬಹುದು.

ಇದಕ್ಕೆ ಕಮೆಂಟ್ ಮಾಡಿರುವ ಒಬ್ಬ ಬಳಕೆದಾರ ನೀವು ಸಸ್ಯಾಹಾರಿಯಾದರೆ ಶುದ್ಧ ವೆಜ್ ಹೋಟೆಲ್​ನಿಂದ ಮಾತ್ರ ಆರ್ಡರ್ ಪಡೆಯುವಂತೆ ಸಲಹೆ ನೀಡಿದ್ದಾರೆ. ಸುಮ್ಮನೆ ಮಾಂಸಾಹಾರವನ್ನು ಕೂಡ ಮಾಡುವ ಹೋಟೆಲ್​ನಿಂದ ಏಕೆ ಆಹಾರ ತರಿಸುತ್ತೀರಿ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಮಾಂಸದಷ್ಟೇ ದುಬಾರಿಯಾದ ತರಕಾರಿ: ಬೀನ್ಸ್​ 1ಕೆಜಿಗೆ ಬರೋಬ್ಬರಿ 250 ರೂ ಇಲ್ಲಿದೆ ದರ ವಿವರ

ಕೆಲವು ‘X’ ಬಳಕೆದಾರರು ಅವರನ್ನು ಟ್ರೋಲ್ ಮಾಡಿದ್ದಾರೆ. “ನೀವು ಸಸ್ಯಾಹಾರಿಯಾಗಿದ್ದರೆ ಮಾಂಸಾಹಾರಿ ಆಹಾರವನ್ನು ನೀಡುವ ರೆಸ್ಟೋರೆಂಟ್‌ನಿಂದ ಏಕೆ ಆರ್ಡರ್ ಮಾಡುತ್ತೀರಿ, ಯಾವಾಗಲೂ ಒಂದೇ ಅಡುಗೆ ಪಾತ್ರೆಯಲ್ಲಿ ಆಹಾರವನ್ನು ಬೇಯಿಸುವ ಸಾಧ್ಯತೆಗಳಿವೆ” ಎಂದು ಕೇಳಿದರು.

Zomato ಅನ್ನು ಟ್ಯಾಗ್ ಮಾಡಿರುವ ಇನ್ನೊಬ್ಬ ಎಕ್ಸ್ ಬಳಕೆದಾರರು, ”ನಿಜವಾಗಿಯೂ ಆಶ್ಚರ್ಯವಾಗಿದೆ! ಪನೀರ್ ಬಿರಿಯಾನಿ ಆರ್ಡರ್ ಮಾಡಿದರೂ ಅದರ ಬದಲಿಗೆ ಚಿಕನ್ ಸಿಕ್ಕಿತು. ಬಹಳ ನಿರಾಶಾದಾಯಕವಾಗಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ