Viral: ಒಂದು ದೇಹ ಎರಡು ಜೀವ; ಮೂರು ಕಾಲು, ನಾಲ್ಕು ಕೈ,  ಒಂದು ಶಿಶ್ನ ಸಯಾಮಿ ಅವಳಿ ಮಕ್ಕಳ ಜನನ

ಇಂಡೋನೇಷ್ಯಾದಲ್ಲಿ ಅಪರೂಪದಲ್ಲಿ ಅಪರೂಪ ಪ್ರಕರಣವೊಂದು ಬೆಳಕಿಗೆ ಬಂದಿದ್ದು,  ಇಲ್ಲಿನ ಮಹಿಳೆಯೊಬ್ಬರು  ಮೂರು ಕಾಲುಗಳು, ನಾಲ್ಕು ಕೈ ಮತ್ತು ಒಂದು ಶಿಶ್ನವನ್ನು ಹೊಂದಿರುವ  ಸಯಾಮಿ ಅವಳಿ ಮಕ್ಕಳಿಗೆ ಜನ್ಮವನ್ನು ನೀಡಿದ್ದಾರೆ. 

Viral: ಒಂದು ದೇಹ ಎರಡು ಜೀವ; ಮೂರು ಕಾಲು, ನಾಲ್ಕು ಕೈ,  ಒಂದು ಶಿಶ್ನ ಸಯಾಮಿ ಅವಳಿ ಮಕ್ಕಳ ಜನನ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: May 16, 2024 | 4:25 PM

ಅವಳಿ ಮಕ್ಕಳು ಜನಿಸುವುದು ಸಾಮಾನ್ಯ ಸಂಗತಿಯಾಗಿದೆ. ಕೆಲವೊಮ್ಮೆ ಏಕಕಾಲಕ್ಕೆ  ಮೂರು ಅಥವಾ ಐದು  ಮಕ್ಕಳು ಜನಿಸಿದಂತಹ  ಪ್ರಕರಣಗಳು ನಡೆದಿವೆ. ಇದೀಗ ಅಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಒಂದು ದೇಹ ಎರು ಜೀವ ಎಂಬಂತೆ ಮಹಿಳೆಯೊಬ್ಬರು  ಮೂರು ಕಾಲು, ನಾಲ್ಕು ಕೈ ಹಾಗೂ ಒಂದು ಶಿಶ್ನವನ್ನು ಹೊಂದಿರುವ ಸಯಾಮಿ ಅವಳಿ ಮಕ್ಕಳಿಗೆ ಜನ್ಮವನ್ನು ನೀಡಿದ್ದಾರೆ.

ಡೈಲಿ ಮೇಲ್ ವರದಿಯ ಪ್ರಕಾರ ಈ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದ್ದು, ಇಲ್ಲಿನ ಮಹಿಳೆಯೊಬ್ಬರು 2018 ರಲ್ಲಿ ಇಶಿಯೋಪಾಗಸ್ ಟ್ರಿಪಸ್ ಕಂಜಾಯಿಂಡ್ ಟ್ವಿನ್ಸ್ ಎಂದು ಕರೆಯಲ್ಪಡುವ ಅಪರೂಪದ ಸಯಾಮಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇತ್ತೀಚಿಗೆ ಈ ಪ್ರಕರಣವನ್ನು ಅಮೇರಿಕನ್ ಜರ್ನಲ್ ಆಫ್ ಕೇಸ್ ರಿಪೋರ್ಟ್ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ.

ಸಾಮಾನ್ಯವಾಗಿ  ಇಂತಹ ಸಯಾಮಿ ಅವಳಿ ಜನಿಸಿದರೆ  ಶಿಶು ಸಾಯುವಂತಹ ಸಾಧ್ಯತೆಯಿರುತ್ತವೆ. ಆದರೆ ಈ ಅವಳಿ ಮಕ್ಕಳು ಆರೋಗ್ಯಕರವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಈ ಅವಳಿ ಮಕ್ಕಳು ಮೂರು ಕಾಲುಗಳು, ನಾಲ್ಕು ಕೈ ಹಾಗೂ ಒಂದು ಶಿಶ್ನ, ಒಂದು ಮೂತ್ರ ಕೋಶ, ಗುದನಾಳವನ್ನು ಹೊಂದಿದ್ದು, ಈ ಸ್ಥಿತಿಯಿಂದಾಗಿ ಈ ಅವಳಿ ಮಕ್ಕಳಿಗೆ ಕೂರಲು ಸಾಧ್ಯವಾಗದೆ 3 ವರ್ಷಗಳ ಕಾಲ ಹಾಸಿಗೆಯಲ್ಲಿಯೇ ಮಲಗಬೇಕಾಗಿತ್ತು. ಇತ್ತೀಚಿಗೆ ವೈದ್ಯರ ತಂಡವೊಂದು ಶಸ್ತ್ರ ಚಿಕಿತ್ಸೆಯ ಮೂಲಕ ಸಯಾಮಿ ಅವಳಿ ಮಕ್ಕಳ ಮೂರನೇ ಕಾಲನ್ನು ತೆಗೆದಿದ್ದಾರೆ. ಮತ್ತು ಸೊಂಟದ ಮೂಲೆಗಳನ್ನು ಸರಿಪಡಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿ, ಅವರು ಸರಿಯಾಗಿ ಕುಳಿತುಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ.

ಇದನ್ನೂ ಓದಿ: ಅಮ್ಮಾ ನಾನು ಕಳ್ಳನನ್ನು ಹಿಡಿದುಬಿಟ್ಟೆ,  ಮೆಟ್ರೋದಲ್ಲಿ ಜೇಬುಗಳ್ಳನನ್ನು ಹಿಡಿದ ಯೂಟ್ಯೂಬರ್

50 ಸಾವಿರದಿಂದ 2 ಲಕ್ಷ ಗರ್ಭಾಧಾರಣೆಗಳಲ್ಲಿ ಒಂದು ಇಂತಹ ಪ್ರಕರಣಗಳು ಕಾಣಿಸಿಕೊಳ್ಳುತ್ತವೆ. ಗರ್ಭಾಶಯದಲ್ಲಿ ಒಂದು ಫಲವತ್ತಾದ  ಮೊಟ್ಟೆ ವಿಭಜನೆಗೊಂಡು ಎರಡು ಭಾಗವಾಗಿ ಬೆಳವಣಿಗೆ ಹೊಂದಲು ಆರಂಭಿಸಿದಾಗ ಸಯಾಮಿ ಅವಳಿ ಮಕ್ಕಳು ಜನಿಸುತ್ತವೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ