PM Narendra Modi Karnataka Visit: ಕಲಬುರಗಿಯಲ್ಲಿ ನಗಾರಿ ಬಾರಿಸಿದ ಪ್ರಧಾನಿ ಮೋದಿ; ಬಿಜೆಪಿ ನಾಯಕರು, ಕಿಕ್ಕಿರಿದು ನೆರೆದಿದ್ದ ಜನರಿಂದ ಹರ್ಷೋದ್ಗಾರ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 19, 2023 | 4:11 PM

ಬಂಜಾರಾ ಪರಂಪರೆಯನ್ನು ಪ್ರತಿನಿಧಿಸುವ ನಗಾರಿಯನ್ನು ಪರಿಣಿತ ವಾದಕರ ಹಾಗೆ ಬಾರಿಸಿ ನೆರೆದಿದ್ದ ಲಕ್ಷಾಂತರ ಜನರನ್ನು ರಂಜಿಸಿದರು.

ಕಲಬುರಗಿ:  ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ದೇಶದ ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲಿನ ಸಂಸ್ಕೃತಿಯನ್ನು ಬಿಂಬಿಸುವ ಉಡುಗೆ ತೊಡುತ್ತಾರೆ, ಅಥವಾ ಕ್ಯಾಪ್ ಇಲ್ಲವೇ ಮೇಲ್ಹೊದಿಕೆ ಧರಿಸುತ್ತಾರೆ. ಅಷ್ಟೇ ಅಲ್ಲ, ಕೆಲವು ಸಲ ಅಲ್ಲಿನ ಪಾರಂಪರಿಕ ವಾದ್ಯಗಳನ್ನು (traditional musical instruments) ನುಡಿಸಿ ಜನರನ್ನು ರೋಮಾಂಚನಗೊಳ್ಳುವಂತೆ ಮಾಡುತ್ತಾರೆ. ಕಲಬುರಗಿಯ ಮಳಖೇಡಗೆ ಅವರು ಇಂದು ಆಗಮಿಸಿದಾಲೂ ಅದೇ ಆಗಿದ್ದು. ಬಂಜಾರಾ ಸಮುದಾಯದ ಜನರಿಗೆ ಹಕ್ಕುಪತ್ರಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿಗಳು ಕಾರ್ಯಕ್ರಮಕ್ಕೆ ಮೊದಲು ಬಂಜಾರಾ ಪರಂಪರೆಯನ್ನು ಪ್ರತಿನಿಧಿಸುವ ನಗಾರಿಯನ್ನು (nagara or kettle drum) ಪರಿಣಿತ ವಾದಕರ ಹಾಗೆ ಬಾರಿಸಿ ನೆರೆದಿದ್ದ ಲಕ್ಷಾಂತರ ಜನರನ್ನು ರಂಜಿಸಿದರು. ಅವರ ವಾದನ ಕೇಳಿದ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ