ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಮಾದರಿಯಾಗಬೇಕು, ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ದಾರಿದೀಪವಾಗಬೇಕು. ಆದರೆ ಇಲ್ಲೊಂದು ಶಾಲೆಯಲ್ಲಿ ಮಕ್ಕಳಿಗೆ ಮಾದರಿಯಾಗಬೇಕಿದ್ದ ಶಿಕ್ಷಕರೇ ದಾರಿ ತಪ್ಪಿದ್ದಾರೆ. ಹೌದು ಇತ್ತೀಚಿಗೆ ಪ್ರತಿಷ್ಠಿತ ಶಾಲೆಯೊಂದರಲ್ಲಿ ನಾಚಿಕೆಗೇಡಿನ ಸಂಗತಿಯೊಂದು ನಡೆದಿದ್ದು, ಹೆಡ್ ಮಾಸ್ಟರ್ ಮತ್ತು ಲೇಡಿ ಟೀಚರ್ ಶಾಲಾ ಕೊಠಡಿಯಲ್ಲಿಯೇ ರೊಮ್ಯಾನ್ಸ್ ಮಾಡಿದ್ದಾರೆ. ಇವರ ಚಕ್ಕಂದದ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿದ್ಯಾ ದೇಗುಲದಲ್ಲಿ ಇಂತಹ ಹೇಯ ಕೃತ್ಯ ನಡೆಸಿರುವುದಕ್ಕೆ ನೆಟ್ಟಿಗರು ಭಾರೀ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ವರದಿಗಳ ಪ್ರಕಾರ ಈ ನಾಚಿಕೆಗೇಡಿನ ಘಟನೆ ಉತ್ತರ ಪ್ರದೇಶದ ಜಾನ್‌ಪುರದಲ್ಲಿ ನಡೆದಿದ್ದು, ಇಲ್ಲಿನ ಪ್ರತಿಷ್ಠಿತ ಕಾನ್ವೆಂಟ್ ಶಾಲೆಯೊಂದರಲ್ಲಿ ಪ್ರಿನ್ಸಿಪಾಲ್ ಮತ್ತು ಶಿಕ್ಷಕಿಯೊಬ್ಬರು ಚಕ್ಕಂದವಾಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಈ ಇಬ್ಬರೂ ಶಾಲಾ ಕೊಠಡಿಯಲ್ಲಿಯೇ ಒಬ್ಬರನ್ನೊಬ್ಬರು ತಬ್ಬಿಕೊಂಡು ಸರಸ ಸಲ್ಲಾಪದಲ್ಲಿ ತೊಡಗಿದ್ದು, ಈ ದೃಶ್ಯವನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿ ಯಾರೋ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಶಾಲೆಯಲ್ಲಿ ಮಹಾನ್ ವ್ಯಕ್ತಿಗಳ ಫೋಟೋಗಳ ಮುಂದೆಯೇ ಇಂತಹ ಕೃತ್ಯ ಎಸಗಿದ ಈ ಇಬ್ಬರೂ ಶಿಕ್ಷಕರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಕುರಿತ ಪೋಸ್ಟ್ ಒಂದನ್ನು Hindikhabar ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಮಹಿಳಾ ಶಿಕ್ಷಕಿಯೊಂದಿಗೆ ಪ್ರಿನ್ಸಿಪಾಲ್ ಚಕ್ಕಂದವಾಡಿದ ವಿಡಿಯೋ ವೈರಲ್ ಆಗಿದೆ, ಶಿಕ್ಷಕರು ತಮ್ಮ ಘನತೆಯನ್ನು ಮರೆತಾಗ ವಿದ್ಯಾರ್ಥಿಗಳ ಭವಿಷ್ಯ ಏನಾಗಬಹುದು?” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
जौनपुर
⏩स्कूल के प्रिंसिपल ने महिला टीचर के साथ किया गंदा काम, वीडियो वायरल
⏩कैसे होगा छात्र-छात्राओं का उज्जवल भविष्य, जब प्रिंसिपल और टीचर ही भूल जाएंगे अपनी मर्यादा
⏩पूरा मामला सरपतहा थाना क्षेत्र के एक कान्वेंट स्कूल बताया जा रहा है#up #hindikhabar #jaunpur… pic.twitter.com/5OrrRix201
— हिन्दी ख़बर | Hindi Khabar 🇮🇳 (@HindiKhabar) July 8, 2024
ವೈರಲ್ ವಿಡಿಯೋದಲ್ಲಿ ಶಾಲಾ ಕೊಠಡಿಯೊಳಗೆ ಮಹಾನ್ ವ್ಯಕ್ತಿಗಳ ಫೋಟೋಗಳ ಮುಂದೆಯೇ ಹೆಡ್ ಮಾಸ್ಟರ್ ಮತ್ತು ಟೀಚರ್ ಒಬ್ಬರನ್ನೊಬ್ಬರು ತಬ್ಬಿಕೊಂಡು ಸರಸ ಸಲ್ಲಾಪದಲ್ಲಿ ತೊಡಗಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ನಡುರಸ್ತೆಯಲ್ಲಿ ಯುವತಿಯ ಖಾಸಗಿ ಅಂಗ ಸ್ಪರ್ಶಿಸಿದ ಕಾಮುಕ; ವಿಡಿಯೋ ವೈರಲ್
ಜೂನ್ 08 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಲ್ಲಾ ಇಂತಹ ಶಿಕ್ಷಕರು ನಾಚಿಕೆ ಮತ್ತು ವಿನಯವನ್ನು ಬದಿಗಿಟ್ಟು ವಿದ್ಯಾರ್ಥಿಗಳಿಗೆ ಏನನ್ನು ಕಲಿಸುತ್ತಾರೆʼ ಎಂದು ಕಿಡಿಕಾರಿದ್ದಾರೆ. ಇನ್ನೂ ಅನೇಕರು ವಿದ್ಯಾ ದೇಗುಲದಲ್ಲಿ ಇಂತಹ ಹೇಯ ಕೃತ್ಯ ನಡೆಸಿರುವುದಕ್ಕೆ ಭಾರೀ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ