ಉತ್ತರ ಪ್ರದೇಶದ ಕತರ್ನಿಯಾ ಘಾಟ್ ವನ್ಯಜೀವಿ ಅಭಯಾರಣ್ಯದಲ್ಲಿ ಅಲ್ಬಿನೋ ಜಿಂಕೆ ಅಂದರೆ ಬಿಳಿ ಬಣ್ಣದ ಜಿಂಕೆ ಸೋಮವಾರ ಬೆಳಗ್ಗೆ ಕಾಣಿಸಿಕೊಂಡಿದೆ. ಅರಣ್ಯ ಅಧಿಕಾರಿಗಳು ಈ ಅಪರೂಪದ ಜಿಂಕೆಯ ಪೋಟೋವನ್ನು ಪೋಸ್ಟ್ ಮಾಡಿದ್ದು, ಇದೀಗಾ ಈ ಪೋಸ್ಟ್ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಭಾರತೀಯ ಅರಣ್ಯ ಅಧಿಕಾರಿಗಳು ವಿವಿಧ ಸಸ್ಯ ಮತ್ತು ಪ್ರಾಣಿಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ಮತ್ತು ಶಿಕ್ಷಣ ನೀಡುವ ಉದ್ದೇಶದಿಂದ ಸಾಮಾಜಿಕ ತಾಣಗಳಲ್ಲಿ ಸಕ್ರಿಯವಾಗಿರುವುದನ್ನು ಕಾಣಬಹುದು. ಈ ಬಾರಿ ಅಧಿಕಾರಿ ಆಕಾಶ್ ದೀಪ್ ಬಧವಾನ್ ಅವರು ಅಪರೂಪದ ಅಲ್ಬಿನೋ ಜಿಂಕೆಯ ಛಾಯಾಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ, ಇದು ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಕುತೂಹಲ ಮೂಡಿಸಿದೆ. ಉತ್ತರ ಪ್ರದೇಶದ ಕತರ್ನಿಯಾ ಘಾಟ್ ವನ್ಯಜೀವಿ ಅಭಯಾರಣ್ಯದಲ್ಲಿ ಅಲ್ಬಿನೋ ಜಿಂಕೆ ಸೋಮವಾರ ಬೆಳಗ್ಗೆ ಕಾಣಿಸಿಕೊಂಡಿದೆ.
Staying true to its tagline, “Katarniaghat- Where rare is common”, an albino spotted deer fawn was sighted this morning.
PC – Pulkit Gupta, Gharial Conservation Team pic.twitter.com/KPYCQzTp1P
— Akash Deep Badhawan, IFS (@aakashbadhawan) March 9, 2023
ಇದನ್ನೂ ಓದಿ: ಸೊಂಡಿಲಿನಿಂದ ನೀರಿನ ಪೈಪ್ ಹಿಡಿದು ಸ್ನಾನ ಮಾಡುತ್ತಿರುವ ಆನೆಯ ವಿಡಿಯೋ ಇಲ್ಲಿದೆ ನೋಡಿ
ಚಿತ್ರದಲ್ಲಿ, ಅಲ್ಬಿನೋ ಜಿಂಕೆ, ಇನ್ನೆರಡು ಜಿಂಕೆಯೊಂದಿಗೆ ಹುಲ್ಲು ವನ್ಯಜೀವಿ ಅಭಯಾರಣ್ಯದಲ್ಲಿ ಹೋಗುವುದನ್ನು ಕಾಣಬಹುದು. ಈ ಫೋಟೋ ಟ್ವಿಟರ್‌ನಲ್ಲಿ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಬಳಕೆದಾರರು ಅಪರೂಪದ ಜೀವಿಯನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ. ಇನ್ನು ಕೆಲವು ಬಳಕೆದಾರರು ಅದರ ಸುರಕ್ಷತೆಯ ಬಗ್ಗೆ ಕಾಳಜಿ ಎಂದು ಕಾಮೆಂಟ್ನಲ್ಲಿ ತಿಳಿಸಿದ್ದಾರೆ.
ಈ ಪೋಸ್ಟ್ಗೆ ಐಎಫ್‌ಎಸ್ ಅಧಿಕಾರಿ ಸುಸಂತ ನಂದಾ ಪ್ರತಿಕ್ರಿಯಿಸಿದ್ದು, 15 ವರ್ಷಗಳ ಹಿಂದೆ ಒಡಿಶಾದ ಅಂಗುಲ್ ಜಿಲ್ಲೆಯ ಲಬಂಗಿ ಅತಿಥಿಗೃಹದಲ್ಲಿ ಇಂತದ್ದೇ ಜಿಂಕೆಯನ್ನು ಕಣ್ತುಂಬಿಸಿಕೊಂಡಿದ್ದೆ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:05 pm, Sun, 12 March 23