Ratan Tata: ಬಾಡಿಗಾರ್ಡ್​ ಇಲ್ಲದೆ ತಾಜ್ ಹೋಟೆಲ್​ಗೆ ನ್ಯಾನೋ ಕಾರಲ್ಲಿ ಬಂದಿಳಿದ ರತನ್ ಟಾಟಾ; ಸರಳತೆಗೆ ನೆಟ್ಟಿಗರು ಫಿದಾ

| Updated By: ಸುಷ್ಮಾ ಚಕ್ರೆ

Updated on: May 18, 2022 | 8:19 PM

ಭಾರತದ ಪ್ರಮುಖ ಕೈಗಾರಿಕೋದ್ಯಮಿಯಾಗಿರುವ ರತನ್ ಟಾಟಾ ಯಾವುದೇ ಬಾಡಿಗಾರ್ಡ್​ ಅಥವಾ ಸೆಕ್ಯುರಿಟಿ ಇಲ್ಲದೆ ಮುಂಬೈನ ತಾಜ್ ಹೋಟೆಲ್​ಗೆ ಟಾಟಾ ನ್ಯಾನೋ ಕಾರಿನಲ್ಲಿ ಬಂದಿಳಿದಿರುವ ವಿಡಿಯೋ ಭಾರೀ ವೈರಲ್ ಆಗಿದೆ.

Ratan Tata: ಬಾಡಿಗಾರ್ಡ್​ ಇಲ್ಲದೆ ತಾಜ್ ಹೋಟೆಲ್​ಗೆ ನ್ಯಾನೋ ಕಾರಲ್ಲಿ ಬಂದಿಳಿದ ರತನ್ ಟಾಟಾ; ಸರಳತೆಗೆ ನೆಟ್ಟಿಗರು ಫಿದಾ
ನ್ಯಾನೋ ಕಾರಲ್ಲಿ ಬಂದಿಳಿದ ರತನ್ ಟಾಟಾ
Follow us on

ಮುಂಬೈ: ಟಾಟಾ ಸಮೂಹದ ಮಾಜಿ ಅಧ್ಯಕ್ಷ ರತನ್ ಟಾಟಾ (Ratan Tata) ಅವರು ತಮ್ಮ ಸರಳತೆಗೆ ಹೆಸರುವಾಸಿಯಾಗಿದ್ದಾರೆ. ಅವರ ಸರಳತೆಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಅವರು ಎಷ್ಟು ಸರಳವಾದ ಜೀವನ ನಡೆಸುತ್ತಾರೆ ಎಂಬುದನ್ನು ತೋರಿಸುವ ಮತ್ತೊಂದು ಘಟನೆ ಈಗ ಟ್ವಿಟ್ಟರ್​ನಲ್ಲಿ ಭಾರೀ ಚರ್ಚೆಯಾಗುತ್ತಿದೆ. ಭಾರತದ ಪ್ರಮುಖ ಕೈಗಾರಿಕೋದ್ಯಮಿಯಾಗಿರುವ ರತನ್ ಟಾಟಾ ಯಾವುದೇ ಬಾಡಿಗಾರ್ಡ್​ ಅಥವಾ ಸೆಕ್ಯುರಿಟಿ ಇಲ್ಲದೆ ಮುಂಬೈನ ತಾಜ್ ಹೋಟೆಲ್​ಗೆ (Taj Hotel) ಟಾಟಾ ನ್ಯಾನೋ ಕಾರಿನಲ್ಲಿ ಬಂದಿಳಿದಿರುವ ವಿಡಿಯೋ ಭಾರೀ (Video Viral) ವೈರಲ್ ಆಗಿದೆ. ತಮ್ಮ ಶ್ರೀಮಂತಿಕೆಯನ್ನು ತೋರಿಸಿಕೊಳ್ಳಲು ಎಲ್ಲರೂ ಏನೇನೋ ಸರ್ಕಸ್ ಮಾಡುವ ಈಗಿನ ಕಾಲದಲ್ಲೂ ಕೋಟ್ಯಧಿಪತಿಯಾದ ರತನ್ ಟಾಟಾ ನ್ಯಾನೋ ಕಾರಿನಲ್ಲಿ (Nano Car) ಬಂದಿರುವುದು ಅವರ ಸರಳತೆಯನ್ನು ಎತ್ತಿ ಹಿಡಿದಿದೆ.

ರತನ್ ಟಾಟಾ ಯಾವುದೇ ಭದ್ರತಾ ಸಿಬ್ಬಂದಿಗಳಿಲ್ಲದೆ ನ್ಯಾನೋ ಕಾರಿನಲ್ಲಿ ಬಂದಾಗ ತಾಜ್ ಹೋಟೆಲ್ ಸಿಬ್ಬಂದಿ ಅವರಿಗೆ ಸೆಕ್ಯುರಿಟಿ ನೀಡಿ ಒಳಗೆ ಬರಮಾಡಿಕೊಂಡರು. ಇತ್ತೀಚೆಗಷ್ಟೇ ಟ್ವೀಟ್ ಮಾಡಿದ್ದ ರತನ್ ಟಾಟಾ ಭಾರತದಲ್ಲಿ ನ್ಯಾನೋ ಕಾರನ್ನು ಬಿಡುಗಡೆ ಮಾಡುವ ಹಿಂದಿನ ಪ್ರೇರಣೆ ಏನು? ಎಂಬ ಬಗ್ಗೆ ಬರೆದಿದ್ದರು. ನಾನು ಕಾರಿನಲ್ಲಿ ಹೋಗುವಾಗ ಸ್ಕೂಟರ್‌ಗಳಲ್ಲಿ ಗಂಡ-ಹೆಂಡತಿ ಮಕ್ಕಳು ಕಷ್ಟಪಟ್ಟು ಕುಳಿತುಕೊಂಡು ಹೋಗುವುದನ್ನು ಸದಾ ನೋಡುತ್ತಿದ್ದೆ. ಹೀಗಾಗಿ, ಒಂದು ಸಣ್ಣ ಕುಟುಂಬ ಆರಾಮಾಗಿ ಕುಳಿತುಕೊಂಡು ಹೋಗುವ ಕಾರೊಂದನ್ನು ಬೈಕ್​ನ ಬೆಲೆಯಲ್ಲೇ ಪರಿಚಯಿಸಬೇಕೆಂದು ನಿರ್ಧರಿಸಿ ನ್ಯಾನೋ ಕಾರನ್ನು ಬಿಡುಗಡೆ ಮಾಡಿದೆ ಎಂದು ರತನ್ ಟಾಟಾ ಬರೆದುಕೊಂಡಿದ್ದರು.

ಇದನ್ನೂ ಓದಿ
Viral Video: ಜ್ಯುವೆಲರಿ ಶಾಪ್​ನಲ್ಲಿ ಚಿನ್ನ ಕದಿಯಲು ಖತರ್ನಾಕ್ ಉಪಾಯ ಮಾಡಿದ ಮಹಿಳೆ; ವಿಡಿಯೋ ವೈರಲ್
Shocking News: ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯ ಕಣ್ಣಿಗೆ ಕಚ್ಚಿದ ಇಲಿ; ಆಮೇಲೇನಾಯ್ತು?
Viral News: ಮೆರವಣಿಗೆಗೆ ಬರದೆ ಕುಡಿದು ಗೆಳೆಯರೊಂದಿಗೆ ಡ್ಯಾನ್ಸ್​ ಮಾಡಿದ ವರ; ಬೇರೆಯವನನ್ನು ಮದುವೆಯಾದ ವಧು!

ತಾವೇ ಬಿಡುಗಡೆ ಮಾಡಿದ್ದ ಟಾಟಾ ನ್ಯಾನೋದಲ್ಲಿ ತಾಜ್ ಹೋಟೆಲ್‌ಗೆ ಆಗಮಿಸಿದ ರತನ್ ಟಾಟಾ ಮತ್ತೊಮ್ಮೆ ಇಂಟರ್ನೆಟ್‌ ಬಳಕೆದಾರರ ಹೃದಯವನ್ನು ಗೆದ್ದಿದ್ದಾರೆ. ಈ ಬಜೆಟ್ ಸ್ನೇಹಿ ಕಾರನ್ನು 2008ರಲ್ಲಿ ಬಿಡುಗಡೆ ಮಾಡಲಾಯಿತು. ಮುಂಬೈ ಮೂಲದ ಸೆಲೆಬ್ರಿಟಿ ಛಾಯಾಗ್ರಾಹಕ ವೈರಲ್ ಭಯಾನಿ ಅವರು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ರತನ್ ಟಾಟಾ ಅವರು ಯಾವುದೇ ಬಾಡಿಗಾರ್ಡ್​ ಇಲ್ಲದೆ ಬಿಳಿ ನ್ಯಾನೋದಲ್ಲಿ ತಾಜ್ ಹೋಟೆಲ್​ಗೆ ಆಗಮಿಸುತ್ತಿರುವುದನ್ನು ಕಾಣಬಹುದು. ನಂತರ ಅವರನ್ನು ಹೋಟೆಲ್ ಸಿಬ್ಬಂದಿ ಒಳಗೆ ಕರೆದೊಯ್ದರು. ಈ ವಿಡಿಯೋಗೆ 1.26 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಮತ್ತು ಹಲವಾರು ಪ್ರತಿಕ್ರಿಯೆಗಳು ಬಂದಿವೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:17 pm, Wed, 18 May 22