
ನಮ್ಮ ಹಿರಿಯರು ಏನು ಆಚರಣೆಗಳನ್ನು ಮಾಡಿಕೊಂಡು ಬಂದಿದ್ದಾರೋ ಅದೆಲ್ಲವನ್ನು ನಾವುಗಳೂ ಚಾಚು ತಪ್ಪದೇ ಪಾಲಿಸಿಕೊಂಡು ಬಂದಿದ್ದೇವೆ. ಅದರಲ್ಲಿ ನಿಂಬೆಹಣ್ಣು (lemon) ಹಾಗೂ ಮೆಣಸಿನಕಾಯಿಯನ್ನು (chilly) ತೂಗು ಹಾಕುವುದು ಕೂಡ ಸೇರಿದೆ. ಈ ಸಂಪ್ರದಾಯವು ಬಹಳ ಹಳೆಯದು. ಹೀಗಾಗಿ ಈ ಬಗ್ಗೆ ಪ್ರಶ್ನೆ ಮಾಡದೇ ಇವತ್ತಿಗೂ ಅನುಸರಿಸಿಕೊಂಡು ಬರುತ್ತಿದ್ದೇವೆ. ಹೌದು, ಮನೆಯ ಮುಂಭಾಗದ ಬಾಗಿಲ ಮೇಲೆ, ಅಂಗಡಿಯ ಮುಂಭಾಗದಲ್ಲಿ, ವಾಹನಗಳಲ್ಲಿ ನಿಂಬೆಹಣ್ಣಿನ ಜೊತೆಗೆ ಮೆಣಸಿನಕಾಯಿ ನೇತು ಹಾಕುತ್ತಾರೆ. ಆದರೆ ಈ ರೀತಿ ಯಾಕೆ ನೇತು ಹಾಕುತ್ತಾರೆ ಎಂಬ ಬಗ್ಗೆ ಯಾವತ್ತಾದ್ರೂ ಯೋಚನೆ ಮಾಡಿದ್ದೀರಾ. ಈ ರೀತಿಯ ಆಚರಣೆಯೂ ವೈಜ್ಞಾನಿಕ ಕಾರಣವನ್ನು ಒಳಗೊಂಡಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ.
ಮನೆಯ ಬಾಗಿಲಿಗೆ, ವಾಹನಗಳಿಗೆ ನಿಂಬೆಹಣ್ಣು ಹಾಗೂ ಮೆಣಸಿನಕಾಯಿಗಳನ್ನು ಕಟ್ಟುವುದರಿಂದ ದುಷ್ಟ ಕಣ್ಣಿನಿಂದ ರಕ್ಷಿಸುತ್ತದೆ. ಇದು ಅಪಘಾತಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಹಾಗೂ ವಾಹನವನ್ನು ರಕ್ಷಿಸುತ್ತದೆ ಎನ್ನಲಾಗಿದೆ. ವೈಜ್ಞಾನಿಕ ಕಾರಣದ ಬಗ್ಗೆ ನೋಡುವುದಾದರೆ ನಿಂಬೆ ಮತ್ತು ಮೆಣಸಿನಕಾಯಿಯ ಗುಣಲಕ್ಷಣಗಳು ಪರಿಸರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಹೊಸ ವಾಹನದ ಕೆಳಗೆ ನಿಂಬೆ ಹಣ್ಣು ಇಡೋದು ಯಾಕೆ ಗೊತ್ತಾ? ಇದೆ ನೋಡಿ ಕಾರಣ
ಈ ನಿಂಬೆ ಮತ್ತು ಮೆಣಸಿನಕಾಯಿಯ ಬಲವಾದ ವಾಸನೆಯು ಸೊಳ್ಳೆಗಳು, ನೊಣಗಳು ಮತ್ತು ಇತರ ಕೀಟಗಳನ್ನು ದೂರವಿಡುತ್ತದೆ. ಇದು ಮನೆ ಅಥವಾ ವಾಹನದ ವಾತಾವರಣವನ್ನು ಸ್ವಚ್ಛವಾಗಿರಿಸುತ್ತದೆ. ಗಾಳಿಯಲ್ಲಿನ ಸೂಕ್ಷ್ಮಜೀವಿಗಳು ಮತ್ತು ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ, ಇದರಿಂದ ವಾತಾವರಣವು ಸಕಾರಾತ್ಮಕವಾಗಿರುತ್ತದೆ ಎನ್ನಲಾಗಿದೆ. ಹೀಗಾಗಿ ಹೆಚ್ಚಿನವರು ಮನೆಯ ಬಾಗಿಲು ಅಥವಾ ವಾಹನಗಳಲ್ಲಿ ನಿಂಬೆ ಮತ್ತು ಮೆಣಸಿನಕಾಯಿ ತೂಗು ಹಾಕಲು ಇದುವೇ ಮುಖ್ಯ ಕಾರಣವಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ