Viral Video: ರೀಲ್ಸ್‌ ಮಾಡಿ ಹೊಸ ಸ್ಕೂಟಿ ಖರೀದಿಸಿದ ರೀಲ್ಸ್‌ ಸ್ಟಾರ್ ಮಂಗಳ ಅರುಣ್; ಫೋಟೋ ವೈರಲ್‌

ಸೋಷಿಯಲ್‌ ಮೀಡಿಯಾ ಬಳಕೆದಾರರಿಗೆ ರೀಲ್ಸ್‌ ಸ್ಟಾರ್‌ ಮಂಗಳ ಅರುಣ್‌ ಚಿರಪರಿಚಿತರ. ಇವರು ಮೂರು ಮಕ್ಕಳ ತಾಯಿಯಾಗಿದ್ದರೂ, ಭರ್ಜರಿಯಾಗಿ ನೃತ್ಯ ಮಾಡುವ ಮೂಲಕವೇ ಪಡ್ಡೆ ಹುಡುಗರ ಹೃದಯ ಗೆದ್ದವರು. ಇದೀಗ ಇವರು ಹೊಸ ಸ್ಕೂಟಿಯೊಂದನ್ನು ಖರೀದಿಸಿದ್ದಾರೆ. ಈ ಕುರಿತ ಫೋಟೋಸ್‌ ಇದೀಗ ವೈರಲ್‌ ಆಗುತ್ತಿದ್ದು, ನೆಟ್ಟಗರು ಅಭಿನಂದನೆಗಳನ್ನು ತಿಳಿಸಿದ್ದಾರೆ.

Viral Video: ರೀಲ್ಸ್‌ ಮಾಡಿ ಹೊಸ ಸ್ಕೂಟಿ ಖರೀದಿಸಿದ ರೀಲ್ಸ್‌ ಸ್ಟಾರ್ ಮಂಗಳ ಅರುಣ್; ಫೋಟೋ ವೈರಲ್‌
Updated By: ಅಕ್ಷಯ್​ ಪಲ್ಲಮಜಲು​​

Updated on: Jul 08, 2024 | 6:29 PM

ಈಗಂತೂ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ತೆರೆದರೆ ಸಾಕು ರೀಲ್ಸ್‌ಗಳದ್ದೇ ಹವಾ. ಈ ರೀಲ್ಸ್‌ ವಿಡಿಯೋಗಳಿಂದಲೇ ಹಲವು ಜನರು ಫೇಮಸ್‌ ಆಗಿದ್ದಾರೆ ಜೊತೆಗೆ ಯಶಸ್ಸನ್ನು ಕಂಡಿದ್ದಾರೆ. ಅದೇ ರೀತಿ ತನ್ನ ಅದ್ಭುತ ಪ್ರತಿಭೆಯಿಂದಲೇ ಸೋಷಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆದವರು ಮಂಗಳ ಅರುಣ್.‌ ಇವರು ತಮ್ಮ ಅದ್ಭುತ ಡಾನ್ಸ್‌, ಟ್ರಾನ್ಸಿಶನ್‌ ರೀಲ್ಸ್‌ಗಳಿಂದಲೇ ಖ್ಯಾತಿಯನ್ನು ಪಡೆದಿದ್ದಾರೆ. ಸೋಷಿಯಲ್‌ ಮೀಡಿಯಾ ಬಳಕೆದಾರರಿಗೆ ರೀಲ್ಸ್‌ ಸ್ಟಾರ್‌ ಮಂಗಳ ಅರುಣ್‌ ಚಿರಪರಿಚಿತ ಅಂತಾನೇ ಹೇಳ್ಬಹುದು. ರೀಲ್ಸ್‌ ಮಾಡ್ತಾ ಮಾಡ್ತಾ ಇದೀಗ ಇವರು ಹೊಸ ಸ್ಕೂಟಿಯನ್ನು ಖರೀದಿ ಮಾಡಿದ್ದು, ಈ ಖುಷಿಯ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಉತ್ತಮ ಡಾನ್ಸರ್‌ ಆಗಿರುವ ಮಂಗಳ ಮೂಲತಃ ಚಿಕ್ಕಮಗಳೂರಿನ ಕಡೂರಿನವರು. ಮೂರು ಮಕ್ಕಳಿದ್ದರೂ ಮನೆಯಲ್ಲಿ ಸುಮ್ಮನೆ ಕೂರದೆ ತನ್ನ ಪ್ರತಿಭೆಯನ್ನು ಅನಾವರಣಗೊಳಿಸಲು ಉತ್ತಮ ವೇದಿಕೆಯನ್ನು ಹುಡುಕಿ, ಇನ್‌ಸ್ಟಾಗ್ರಾಮ್‌ನಲ್ಲಿ ಡಾನ್ಸ್‌, ಟ್ರಾನ್ಸಿಶನ್‌ ರೀಲ್ಸ್‌ ಮಾಡುವ ಮೂಲಕ ಸ್ಟಾರ್‌ ಆದವರು. ರೀಲ್ಸ್‌ ಮಾಡ್ತಾ ಮಾಡ್ತಾ ಇದೀಗ ಇವರು ಹೊಸ ಸ್ಕೂಟಿಯನ್ನೇ ಖರೀಸಿದ್ದಾರೆ.

ವೈರಲ್​​ ಪೋಸ್ಟ್​​

ಈ ಕುರಿತ ಪೋಸ್ಟ್‌ ಒಂದನ್ನು ಮಂಗಳ ಅರುಣ್‌ (arunmangalaa) ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡು “ಹೊಸ ಸ್ಕೂಟಿ ಖರೀದಿಸಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್‌ ಫೋಟೋದಲ್ಲಿ ಮಂಗಳಾ ಅವರು ಹೊಸ ಹೋಂಡಾ ಆಕ್ಟಿವಾದಲ್ಲಿ ಕುಳಿತು ಸ್ಟೈಲ್‌ ಆಗಿ ಪೋಸ್‌ ಕೊಟ್ಟಿರುವ ಕ್ಯೂಟ್‌ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಮಕ್ಕಳಿಲ್ಲದ ಮಹಿಳೆಯರನ್ನು ಗರ್ಭಿಣಿಯರನ್ನಾಗಿಸಿ, ಭರ್ಜರಿ ಹಣ ಸಂಪಾದಿಸಿ; ಜಾಹೀರಾತು ವೈರಲ್

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್‌ 23 ಸಾವಿರಕ್ಕೂ ಅಧಿಕ ಲೈಕ್ಸ್‌ಗಳನ್ನು ಪಡೆದುಕೊಂಡಿದ್ದು, ಅಭಿನಂದನೆಗಳು, ಇದೇ ರೀತಿ ಇನ್ನೂ ಎತ್ತರಕ್ಕೆ ಬೆಳೆಯಿರಿ ಎಂದು ನೆಟ್ಟಿಗರು ಕಾಮೆಂಟ್ಸ್‌ ಮಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ