Love Insurance: ಲವ್ ಬ್ರೇಕಪ್​ಗೂ ಇನ್ಷೂರೆನ್ಸ್; 25,000 ರೂ ರೀಫಂಡ್ ಪಡೆದ ಲವರ್; ಇದ್ಯಾವುದಪ್ಪಾ ವಿಮಾ ಸ್ಕೀಮ್?

|

Updated on: Mar 19, 2023 | 5:46 PM

Heartbreak Insurance Fund: ರಿಲೇಶನ್​ಶಿಪ್ ಆರಂಭದ ಜೊತೆಗೆ ಹಾರ್ಟ್​ಬ್ರೇಕ್ ಇನ್ಷೂರೆನ್ಸ್ ಫಂಡ್ ತೆರೆದ ಪ್ರೇಮಿಗಳು... ಬ್ರೇಕಪ್ ಆಗಿ ವಂಚನೆಗೊಳಗಾದವರಿಗೆ ಇನ್ಷೂರೆನ್ಸ್ ರೀಫಂಡ್... ತನಗೆ 25,000 ರೂ ರೀಫಂಡ್ ಆಯಿತು ಎಂದ ಟ್ವೀಟಿಗ

Love Insurance: ಲವ್ ಬ್ರೇಕಪ್​ಗೂ ಇನ್ಷೂರೆನ್ಸ್; 25,000 ರೂ ರೀಫಂಡ್ ಪಡೆದ ಲವರ್; ಇದ್ಯಾವುದಪ್ಪಾ ವಿಮಾ ಸ್ಕೀಮ್?
ಲವ್ ಬ್ರೇಕಪ್
Follow us on

ನವದೆಹಲಿ: ಈಗ ನಾನಾ ತರಹದ ಇನ್ಷೂರೆನ್ಸ್ ಸ್ಕೀಮ್​ಗಳಿವೆ. ಮಾನಸಿಕ ವ್ಯಾಧಿಗಳನ್ನೂ ಕವರ್ ಮಾಡುವ ವಿಮಾ ಪಾಲಿಸಿಗಳಿವೆ. ಆದರೆ, ಲವ್ ಫೇಲ್ಯೂರ್​ನಿಂದ (Love Failure) ಆದ ಮಾನಸಿಕ ವೇದನೆಗೆ ಇನ್ಷೂರೆನ್ಸ್ ಸ್ಕೀಮ್ ಇದೆಯಾ? ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬ ತಾನು ಹಾರ್ಟ್​ಬ್ರೇಕ್ ಇನ್ಷೂರೆನ್ಸ್ ಫಂಡ್​ನಿಂದ (Heartbreak Insurance Fund) 25,000 ರುಪಾಯಿ ಪಡೆದಿದ್ದಾಗಿ ಹೇಳಿಕೊಂಡಿದ್ದಾರೆ. ತನ್ನ ಗರ್ಲ್​ಫ್ರೆಂಡ್ ಕೈಕೊಟ್ಟಿದ್ದರಿಂದ ತನಗೆ ರೀಫಂಡ್ ಬಂದಿತು ಎಂದು ಪ್ರತೀಕ್ ಆರ್ಯನ್ ಹೆಸರಿನ ಟ್ವಿಟ್ಟರ್ ಅಕೌಂಟ್ ಹೊಂದಿರುವ ವ್ಯಕ್ತಿ ಪೋಸ್ಟ್ ಹಾಕಿದ್ದಾರೆ.

ನನ್ನ ಗರ್ಲ್ ಫ್ರೆಂಡ್ ನನಗೆ ಕೈ ಕೊಟಿದ್ದರಿಂದ ನನಗೆ 25,000 ರುಪಾಯಿ ಬಂದಿತು. ಇದು ಹಾರ್ಟ್​ಬ್ರೇಕ್ ಇನ್ಷೂರೆನ್ಸ್ ಫಂಡ್ ಎಂದು ಪ್ರತಿಕ್ ಆರ್ಯನ್ ಟ್ವೀಟ್ ಮಾಡಿದ್ದಾರೆ.

ಏನಿದು ಹಾರ್ಟ್​ಬ್ರೇಕ್ ಇನ್ಷೂರೆನ್ಸ್ ಫಂಡ್?

ವಾಸ್ತವವಾಗಿ ಹಾರ್ಟ್ ಬ್ರೇಕ್ ಇನ್ಷೂರೆನ್ಸ್ ಎಂದು ಯಾವುದೂ ಇಲ್ಲ. ಪ್ರತೀಕ್ ಆರ್ಯನ್ ಹೇಳಿಕೊಂಡಿರುವ ಪ್ರಕಾರ ಅವರು ಮತ್ತು ಮಾಜಿ ಗರ್ಲ್ ಫ್ರೆಂಡ್ ಮಧ್ಯೆ ಎರಡು ವರ್ಷದಿಂದ ರಿಲೇಶನ್​ಶಿಪ್ ಇತ್ತು. ಅವರಿಬ್ಬರ ಸಂಬಂಧ ಆರಂಭವಾಗುವಾಗ ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ಹಾರ್ಟ್​ಬ್ರೇಕ್ ಇನ್ಷೂರೆನ್ಸ್ ಫಂಡ್ ಎಂಬ ಜಾಯಿಂಟ್ ಅಕೌಂಟ್ ತೆರೆದಿದ್ದರು. ಈ ಖಾತೆಗೆ ಇಬ್ಬರೂ ಕೂಡ ಪ್ರತೀ ತಿಂಗಳೂ ತಲಾ 500 ರುಪಾಯಿ ತುಂಬುತ್ತಾ ಹೋದರು. ಒಪ್ಪಂದದ ಪ್ರಕಾರ ಇಬ್ಬರಲ್ಲಿ ಯಾರಿಗೆ ಈ ಸಂಬಂಧದಲ್ಲಿ ವಂಚನೆ ಆಗುತ್ತದೋ ಅವರಿಗೆ ಈ ಹಣ ಸಿಗಬೇಕು ಎಂದಿತ್ತು. ಅಂದರೆ, ಹುಡುಗ ಬ್ರೇಕಪ್ ಮಾಡಿದರೆ ಹಣ ಹುಡುಗಿಗೆ ಹೋಗಬೇಕು. ಹುಡುಗಿ ಬ್ರೇಕಪ್ ಮಾಡಿದರೆ ಹಣ ಹುಡುಗನಿಗೆ ಹೋಗಬೇಕು ಎಂಬುದು ಈ ಒಪ್ಪಂದ.


ಇದನ್ನೂ ಓದಿInspiration: ಅಜ್ಜನನ್ನು ಕಳೆದುಕೊಂಡ ಮೊಮ್ಮಗಳ ಸ್ಫೂರ್ತಿ ಕಥೆ; 1500 ಕ್ಕೂ ಹೆಚ್ಚು ಸೈಕಲ್​ಗಳಿಗೆ ಹೆಡ್​ಲೈಟ್ ವಿತರಿಸಿದ ಖುಷಿ!

ಪ್ರತೀಕ್ ಆರ್ಯನ್ ತನಗೆ ಈ ಸಂಬಂಧದಲ್ಲಿ ಗರ್ಲ್​ಫ್ರೆಂಡ್​ನಿಂದ ವಂಚನೆಯಾಗಿದ್ದು ತನಗೆ 25,000 ರುಪಾಯಿ ಬಂದಿತು ಎಂದು ಹೇಳಿಕೊಂಡಿದ್ದಾರೆ. ಎರಡು ವರ್ಷಗಳಿಂದ ಇಬ್ಬರೂ ತಲಾ 500 ರುಪಾಯಿ ಹಾಕಿದ್ದರಿಂದ 25 ಸಾವಿರ ರುಪಾಯಿ ಮೊತ್ತ ಖಾತೆಯಲ್ಲಿ ಜಮೆಯಾಗಿತ್ತು. ಇದರಲ್ಲಿ ಪ್ರತೀಕ್ ಆರ್ಯನ್ ಕೊಡುಗೆ ಕಳೆದರೆ 12,500 ರು ಹಣ ಅವರಿಗೆ ಪರಿಹಾರವಾಗಿ ಬಂದಂತಾಯಿತು.

ಪ್ರತೀಕ್ ಆರ್ಯನ್ ಅವರ ಈ ಟ್ವೀಟ್​ನಲ್ಲಿರುವ ಸಂಗತಿ ಕಾಲ್ಪನಿಕವೋ ಅಥವಾ ಅವರ ವೈಯಕ್ತಿಕ ಸಂಗತಿಯೋ, ಒಟ್ಟಿನಲ್ಲಿ ಅವರ ಈ ಪೋಸ್ಟ್ ಬಹಳ ವೈರಲ್ ಆಗುತ್ತಿದೆ. ಪ್ರತೀಕ್ ಆರ್ಯನ್ ತನ್ನ ಟ್ವಿಟ್ಟರ್ ಪ್ರೊಫೈಲ್​ನಲ್ಲಿ ಹಾರ್ಟ್​ಬ್ರೇಕ್ ಇನ್ಷೂರೆನ್ಸ್ ಫಂಡ್​ನ ಸಿಇಒ ಮತ್ತು ಸ್ಥಾಪಕ ಎಂದು ಹಾಕಿಕೊಂಡಿರುವುದು ಕುತೂಹಲ ಮೂಡಿಸಿದೆ. ಎಂಬಿಬಿಎಸ್ ಓದಿರುವುದಾಗಿ ಬರೆದಿರುವ ಅವರು ಮುಂದಿನ ರಿಲೇಶನ್​ಶಿಪ್​ನಲ್ಲಿ ಹಾರ್ಟ್​ಬ್ರೇಕ್ ಇನ್ಷೂರೆನ್ಸ್ ಫಂಡ್​ಗೆ ತಿಂಗಳಿಗೆ 50 ಸಾವಿರ ರು ಹಾಕುವುದಾಗಿ ಒಂದು ಕಮೆಂಟ್​ನಲ್ಲಿ ಬರೆದಿದ್ದಾರೆ.

ಹುಡುಗಿ ಕೈಕೊಟ್ಟಳೆಂದು ಹಿಂದೆಲ್ಲಾ ಹುಡುಗರು ದೇವದಾಸರಾಗುತ್ತಿದ್ದರು. ಈಗ ಕಾಲ ಬದಲಾಗಿದೆ. ಬದಲಾದ ಕಾಲಕ್ಕೆ ತಕ್ಕಂತೆ ಈಗ ಹುಡುಗರೂ ಹೊಸ ಸಂಗಾತಿ ಹುಡುಕುತ್ತಾರೆ. ಈಗ ಹಾರ್ಟ್​ಬ್ರೇಕ್ ಇನ್ಷೂರೆನ್ಸ್ ಫಂಡ್​ನಂತಹ ಐಡಿಯಾವನ್ನು ತಮ್ಮ ಸಂಬಂಧಗಳಲ್ಲಿ ಅಳವಡಿಸಿದರೆ ಹುಡುಗರಿಗೆ ಒಳ್ಳೆಯ ಬ್ಯುಸಿನೆಸ್ ಫಂಡ್ ಕೂಡ ಆಗಬಹುದು ಎಂಬುದು ಕೆಲ ನೆಟ್ಟಿಗರ ಅನಿಸಿಕೆ.

ಇನ್ನಷ್ಟು ವೈರಲ್ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:46 pm, Sun, 19 March 23