Viral: ರೀಲ್ಸ್‌ ತಂದ ಪಜೀತಿ, ಟೆರೇಸ್‌ ಮೇಲೆ ರೀಲ್ಸ್‌ ಮಾಡಲು ಹೋಗಿ ಮುಗ್ಗರಿಸಿ ಬಿದ್ದ ಯುವತಿ

ಈಗಂತೂ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಎಲ್ಲರೂ ರೀಲ್ಸ್‌ ಮಾಡುವವರೇ. ಪ್ರತಿನಿತ್ಯ ರೀಲ್ಸ್‌ ಮಾಡುತ್ತಾ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬಳು ಯುವತಿ ಮಳೆ ಬಂದು ಹೋದ ನಂತರ ವೆದರ್‌ ಚೆನ್ನಾಗಿದೆಯಲ್ವಾ ಎಂದು ಟೆರೇಸ್‌ ಮೇಲೆ ರೀಲ್ಸ್‌ ಮಾಡಲು ಬಂದಿದ್ದು, ಮಳೆ ನೀರಿನಲ್ಲಿ ಡಾನ್ಸ್‌ ಮಾಡುವ ಭರಕ್ಕೆ ದೊಪ್ಪನೆ ಜಾರಿ ಬಿದ್ದಿದ್ದಾಳೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Viral: ರೀಲ್ಸ್‌ ತಂದ ಪಜೀತಿ, ಟೆರೇಸ್‌ ಮೇಲೆ ರೀಲ್ಸ್‌ ಮಾಡಲು ಹೋಗಿ ಮುಗ್ಗರಿಸಿ ಬಿದ್ದ ಯುವತಿ
ವೈರಲ್​​​ ವಿಡಿಯೋ
Edited By:

Updated on: Sep 13, 2024 | 5:34 PM

ಇಂದಿನ ಈ ಸೋಷಿಯಲ್‌ ಮೀಡಿಯಾ ಯುಗದಲ್ಲಿ ರೀಲ್ಸ್‌ ಮಾಡೋದು, ಯುಟ್ಯೂಬ್‌ ವ್ಲಾಗ್‌ ಮಾಡೋದು ಟ್ರೆಂಡ್‌ ಆಗಿ ಪರಿಣಮಿಸಿದೆ. ಪುಟ್‌ ಪುಟ್ಟ ಮಕ್ಕಳಿಂದ ಹಿಡಿದು ಹಣ್ಣು ಮುದುಕರವರೆಗೂ ಎಲ್ಲರೂ ಕೈಯಲ್ಲಿ ಮೊಬೈಲ್‌ ಹಿಡಿದುಕೊಂಡು ರೀಲ್ಸ್‌ ಮಾಡುವವರೇ. ಕೆಲವರಂತೂ ಪ್ರತಿನಿತ್ಯ ತಮ್ಮ ಚಿತ್ರವಿಚಿತ್ರ ರೀಲ್ಸ್‌ಗಳನ್ನು ಅಪ್‌ಲೋಡ್‌ ಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಳು ಯುವತಿ ಮಳೆ ಬಂದು ಹೋದ ನಂತರ ವೆದರ್‌ ತುಂಬಾ ಚೆನ್ನಾಗಿದೆಯಲ್ವಾ ಎನ್ನುತ್ತಾ ಟೆರೇಸ್‌ ಮೇಲೆ ರೀಲ್ಸ್‌ ಮಾಡಲು ಹೋಗಿ, ಸಖತ್‌ ಆಗಿರುವ ಹಾಡೊಂದಕ್ಕೆ ಡಾನ್ಸ್‌ ಮಾಡುವ ಭರದಲ್ಲಿ ದೊಪ್ಪನೆ ಜಾರಿ ಬಿದ್ದಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಸಾಕಷ್ಟು ಫನ್ನಿ ವಿಡಿಯೋಗಳು ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್‌ ಆಗಿದ್ದು, ರೀಲ್ಸ್‌ ಮಾಡಲು ಹೋಗಿ ಯುವತಿಯೊಬ್ಬಳು ಮುಗ್ಗರಿಸಿ ಬಿದ್ದಿದ್ದಾಳೆ. ಈ ಕುರಿತ ಫನ್ನಿ ವಿಡಿಯೋವನ್ನು ಹಕೀಮ್‌ ಖಾನ್‌ (hakeen.khan86) ಎಂಬವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಯುವತಿಯೊಬ್ಬಳು ಮನೆಯ ಟೆರೇಸ್‌ ಮೇಲೆ ನಿಂತಿದ್ದ ಮಳೆ ನೀರಿನಲ್ಲಿ ಡಾನ್ಸ್‌ ಮಾಡುತ್ತಾ ರೀಲ್ಸ್‌ ವಿಡಿಯೋ ಮಾಡುವ ದೃಶ್ಯವನ್ನು ಕಾಣಬಹುದು. ಹೀಗೆ ಸೊಂಟ ಬಳುಕಿಸುತ್ತಾ ಡಾನ್ಸ್‌ ಮಾಡುತ್ತಿದ್ದ ವೇಳೆ ಕಾಲ್ಜಾರಿ ಆ ಯುವತಿ ದೊಪ್ಪನೆ ಬಿದ್ದಿದ್ದಾಳೆ.

ಇದನ್ನೂ ಓದಿ: ಬಡವರಿಗೊಂದು ನ್ಯಾಯ, ಶ್ರೀಮಂತರಿಗೊಂದು ನ್ಯಾಯ… ದೇವರ ಸನ್ನಿಧಾನದಲ್ಲೂ ಯಾಕಿ ಭೇದ-ಭಾವ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅವಳಿಗೆ ಹಿಂಗೇ ಆಗ್ಬೇಕುʼ ಎಂದು ಕಾಮೆಂಟ್‌ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ದೃಶ್ಯ ತುಂಬಾನೇ ಫನ್ನಿಯಾಗಿದೆʼ ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us