Viral Video: ತನ್ನ ಮರಿಗಳ ಜೊತೆ ನಾಯಿಮರಿಗಳಿಗೂ ಆಶ್ರಯ ನೀಡಿದ ಸಂಗಾತಿ ಕೋಳಿಯನ್ನು ಕಂಡು ಹುಂಜ ಗೊಂದಲಕ್ಕೆ ಬಿತ್ತು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 13, 2022 | 4:30 PM

ಅದೇ ಸಮಯಕ್ಕೆ ಅಲ್ಲಿಗೆ ಆಗಮಿಸುವ ಹುಂಜ (ತಂದೆ ಕೋಳಿ) ತನ್ನ ಸಂಗಾತಿಯ ಅಡಿಯಿಂದ ಹೊರಬರುವ ಪಪ್ಪೀಗಳನ್ನು ಕಂಡು ಆಶ್ಚರ್ಯಚಕಿತಗೊಳ್ಳುತ್ತದೆ. ಇವೂ ನಮ್ಮ ಮರಿಗಳಾ? ಎಂಬ ಪ್ರಶ್ನಾರ್ಥಕ ಭಾವದೊಂದಿಗೆ ಸಂಗಾತಿಯತ್ತ ನೋಡುತ್ತದೆ.

Viral Video: ತನ್ನ ಮರಿಗಳ ಜೊತೆ ನಾಯಿಮರಿಗಳಿಗೂ ಆಶ್ರಯ ನೀಡಿದ ಸಂಗಾತಿ ಕೋಳಿಯನ್ನು ಕಂಡು ಹುಂಜ ಗೊಂದಲಕ್ಕೆ ಬಿತ್ತು!
ಕೋಳಿಮರಿಗಳ ಜೊತೆ ನಾಯಿಮರಿಗಳು!
Follow us on

ನೀವು ಪ್ರಾಣಿಗಳನ್ನು ಪ್ರೀತಿಸುವವರ ಗುಂಪಿಗೆ ಸೇರಿದ್ದರೆ ನಿಸ್ಸಂದೇಹವಾಗಿ ಈ ವಿಡಿಯೋವನ್ನು ಇಷ್ಟಪಡುತ್ತೀರಿ. ಸಾಮಾಜಿಕ ಜಾಲತಾಣಗಳಲ್ಲಿ (social media) ಅಪರೂಪಕ್ಕೊಮ್ಮೆ ಹೀಗೆ ಮನಸ್ಸಿಗೆ ಮುದನೀಡುವ ವಿಡಿಯೋಗಳು ಪೋಸ್ಟ್ ಆಗುತ್ತವೆ. ವಿಡಿಯೋದಲ್ಲಿ ನಿಮಗೆ ಕಾಣಿಸೋದು ಒಂದು ಸಮೃದ್ಧ ಕೋಳಿ ಕುಟುಂಬ (hen family). ಹೆಣ್ಣುಕೋಳಿ ಮೊಟ್ಟೆಗಳಿಗೆ ತನ್ನ ಉದರಭಾಗದ ಅಡಿಯಲ್ಲಿ ಕಾವು ನೀಡಿ ಅವುಗಳಿಂದ ಮರಿಗಳು ಹೊರಬಂದ ನಂತರವೂ ಪುಟಾಣಿಗಳನ್ನು ಬೆಚ್ಚಗಿಡಲು ಅದೇ ಜಾಗದಲ್ಲಿ ಸೇರಿಸಿಕೊಳ್ಳುತ್ತದೆ. ಮರಿಗಳು ಅಮ್ಮನ ಆಶ್ರಯ ಮತ್ತು ಬಿಸುಪುನಲ್ಲಿ ಭದ್ರತೆಯನ್ನು (security) ಕಂಡುಕೊಳ್ಳುತ್ತವೆ. ಅದು ಸರಿ, ಈ ವಾತ್ಸಲ್ಯಮಯಿ, ವಿಶಾಲ ಹಾಗೂ ಮಾತೃಹೃದಯಿ ಕೋಳಿ ತನ್ನ ಮರಿಗಳ ಜೊತೆ ಎರಡು ಮುದ್ದಾದ ನಾಯಿಮರಿಗಳಿಗೂ ರೆಕ್ಕೆಗಳಡಿ ಆಶ್ರಯ ನೀಡಿದೆ!

ಅದೇ ಸಮಯಕ್ಕೆ ಅಲ್ಲಿಗೆ ಆಗಮಿಸುವ ಹುಂಜ (ತಂದೆ ಕೋಳಿ) ತನ್ನ ಸಂಗಾತಿಯ ಅಡಿಯಿಂದ ಹೊರಬರುವ ಪಪ್ಪೀಗಳನ್ನು ಕಂಡು ಆಶ್ಚರ್ಯಚಕಿತಗೊಳ್ಳುತ್ತದೆ. ಇವೂ ನಮ್ಮ ಮರಿಗಳಾ? ಎಂಬ ಪ್ರಶ್ನಾರ್ಥಕ ಭಾವದೊಂದಿಗೆ ಸಂಗಾತಿಯತ್ತ ನೋಡುತ್ತದೆ. ತಾಯಿ ಕೋಳಿ ಮಾತ್ರ ನಮ್ಮ ಮರಿಗಳೊಂದಿಗೆ ನಾಯಿಮರಿಗಳಿಗೂ ಆಶ್ರಯ ಕೊಟ್ಟರೆ ಅದರಲ್ಲೇನು ತಪ್ಪು ಅನ್ನೋ ಥರ ಹುಂಜನ ಮುಖ ನೋಡುತ್ತದೆ!

ವೀಕ್ಷಕರ ಮನಸನ್ನು ಹರ್ಷೋಲ್ಲಾಸಗೊಳಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಇದನ್ನು ಈಗಾಗಲೇ 5 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅನೇಕ ನೆಟ್ಟಿಗರು ಕಾಮೆಂಟ್ ಕೂಡ ಮಾಡಿದ್ದಾರೆ. ಒಬ್ಬರು, ‘ಇದು ಹೇಗೆ ಸಾಧ್ಯ ಅಂತ ಹುಂಜ ಯೋಚಿಸುತ್ತಿರುವಂತಿದೆ,’ ಅಂತ ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು, ‘ತಾಯಿ ಕೋಳಿಯನ್ನು ನೋಡುತ್ತಿದ್ದರೆ ನನಗೆ ಪಿಟ್ಬುಲ್ ತಳಿ ನಾಯಿ ನೆನಪಾಗುತ್ತದೆ. ಪಿಟ್ಬುಲ್ ನಾಯಿ ತನ್ನ ಬದುಕಿನ ಉದ್ದೇಶವೇ ಬೆಕ್ಕಿನ ಮರಿಗಳನ್ನು ಅದರಲ್ಲೂ ವಿಶೇಷವಾಗಿ ನವಜಾತ ಮರಿಗಳನ್ನು ಸಂರಕ್ಷಿಸುವುದು ಅನ್ನೋ ರೀತಿಯಲ್ಲಿ ಅವುಗಳನ್ನು ಹೆತ್ತ ಬೆಕ್ಕು ಸಹ ಹೊಟ್ಟೆಕಿಚ್ಚು ಪಡುವ ಹಾಗೆ ಆಶ್ರಯ ಒದಗಿಸುತ್ತದೆ ಮತ್ತು ಸಂರಕ್ಷಿಸುತ್ತದೆ,’ ಅಂತ ಕಾಮೆಂಟ್ ಮಾಡಿದ್ದಾರೆ.

‘ಹುಂಜ ಕೊನೆಯಲ್ಲಿ ತೆಗೆಯುವ ಶಬ್ದವು ನಾನು ನನ್ನ ಹುಂಜವನ್ನು ಮೇಲಕ್ಕೆ ಎಸೆದ ನಂತರ ಲ್ಯಾಂಡ್ ಮಾಡುವಾಗ ತೆಗೆಯುವ ಶಬ್ದ್ದವನ್ನು ನೆನಪಿಸುತ್ತದೆ. ಏನಾದರೂ ವಿಚಿತ್ರವಾದುದನ್ನು ನೋಡಿದಾಗ ಹುಂಜಗಳು ಹಾಗೆ ಶಬ್ದಮಾಡುತ್ತವೆ. ಅ ಶಬ್ದ ಕೇಳಿಸಿಕೊಂಡಾಗಲೆಲ್ಲ ನನಗೆ ನಗು ತಡೆಯಾಗಲ್ಲ,’ ಅಂತ ಮೂರನೇಯವರು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬ ಯೂಸರ್ ಬಾಲ್ಯದಲ್ಲಿ ಹುಂಜಗಳಿಂದ ಹೆದರಿಕೆಗೊಳಗಾಗುತ್ತಿದ್ದ ಸಂದರ್ಭಗಳನ್ನು ಜ್ಞಾಪಿಸಿಕೊಂಡಿದ್ದಾರೆ. ‘ಹುಂಜ ಗೊಂದಲಕ್ಕೇನೂ ಬಿದ್ದಿಲ್ಲ. ಅವು ಆಕ್ರಮಣಕಾರಿಯಾಗಬಲ್ಲವು. ಬಾಲ್ಯದಲ್ಲಿ ಒಂದು ಹುಂಜ ನನ್ನನ್ನು ಭೀತಿಗೊಳಪಡಿಸಿತ್ತು. ನಾಯಿಮರಿಗಳು ಸುರಕ್ಷಿತವಾದ ಜಾಗವನ್ನು ಕಂಡುಕೊಂಡಿವೆ,’ ಅಂತ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ