ಮಹಾರಾಷ್ಟ್ರ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ಮಹಾರಾಷ್ಟ್ರದ ಮಿಸಲ್ ಪಾವ್ ಅನ್ನು ತಿಂದ ವೀಡಿಯೋ ಹಂಚಿಕೊಂಡಿದ್ದಾರೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮಹಾರಾಷ್ಟ್ರದ ಪ್ರಸಿದ್ಧ ತಿನಿಸುಗಳಲ್ಲಿ ಮಿಸಲ್ ಪಾವ್ ಕೂಡ ಒಂದು. ಅದನ್ನು ಬಾಯಿಚಪ್ಪರಿಸಿ ತಿನ್ನುವ ವೀಡಿಯೋವನ್ನು ಸಚಿನ್ ಶೇರ್ ಮಾಡಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಹಾಗೂ ಟ್ವಿಟರ್ ಎರಡರಲ್ಲೂ ವಿಡಿಯೋ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ 25 ಸೆಕೆಂಡ್ಗಳ ಸಚಿನ್ ಮಿಸಲ್ ಪಾವ್ ಸವಿಯುತ್ತಿರುವ ವೀಡಿಯೋ 5.5 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಅದೇ ರೀತಿ ಟ್ವಿಟರ್ನಲ್ಲಿ 3 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ.
Be it a Sunday or a Monday, I’ll take Misal Pav any day!
What’s your idea of a perfect breakfast???#MisalPav pic.twitter.com/VewgsNTsRH
— Sachin Tendulkar (@sachin_rt) December 12, 2021
ವೈರಲ್ ಆಗಿರುವ ವೀಡಿಯೋದಲ್ಲಿ ಸಚಿನ್ ಮೊದಲು ಮಿಸಲ್ ಗೆ ನಂಬೆ ರಸವನ್ನು ಹಾಕಿಕೊಳ್ಳುತ್ತಾರೆ ಬಳಿಕ ಪಾವ್ ಅಥವಾ ಬ್ರೆಡ್ನ ತುಂಡನ್ನು ಹಾಕಿಕೊಂಡು ತಿನ್ನುತ್ತಾರೆ. ಸಚಿನ್ ಮಿಸಲ್ ಪಾವ್ ಅನ್ನು ಖುಷಿಯಿಂದ ತಿನ್ನುತ್ತಿರುವುದನ್ನು ಕಾಣಬಹುದು. ಈ ಬಗ್ಗೆ ಸಚಿನ್ ಮಿಸಲ್ ಪಾವ್ ತನಗೆ ಬರ್ಮೀಸ್ ಖಾವೋ ಸೂಯಿಯನ್ನು (ಬರ್ಮೀಸ್ ಖಾವೋ ಸೂಯಿ ಎಂದರೆ ನೂಡಲ್ಸ್ ಸೂಪ್. ಇದನ್ನು ಮೊಟ್ಟೆ ಮತ್ತು ಚಿಕನ್ನಿಂದಲೂ ಮಾಡುತ್ತಾರೆ)ನೆನಪಿಸುತ್ತದೆ ಎಂದಿದ್ದಾರೆ. ಅದೇ ರೀತಿ ಮಿಸಲ್ ಪಾವ್ ಕಿ ಕುಚ್ ಬಾತ್ ಹೈ ಅಲಗ್ ಹೈ ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಸಚಿನ್ ಭಾನುವಾರ ಮಹಾರಾಷ್ಟ್ರಕ್ಕೆ ತೆರಳಿದ್ದ ವೇಳೆ ಮಿಸಲ್ ಪಾವ್ ಅನ್ನು ಸವಿದಿದ್ದಾರೆ ಅದರ ಮಿಸಲ್ ಪಾವ್ರುಚಿಯನ್ನು ವಿವರಿಸುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
Viral Video: ಮದುವೆ ಮಂಟಪದಲ್ಲಿ ತಮಾಷೆ ಮಾಡಿದ ವರನ ಸ್ನೇಹಿತರಿಗೆ ಸರಿಯಾದ ಉತ್ತರ ಕೊಟ್ಟ ವಧು; ವಿಡಿಯೋ ನೋಡಿ
Viral video: ಗಂಭೀರ ಸ್ಥಿತಿಯಲ್ಲಿದ್ದ ಕೋತಿಗೆ ಉಸಿರು ನೀಡಿ ಪ್ರಾಣ ಉಳಿಸಿದ ಕಾರು ಚಾಲಕ; ವಿಡಿಯೋ ವೈರಲ್