ಸುಭಾಷ್​ ಚಂದ್ರ ಬೋಸ್ ​125ನೇ ಜನ್ಮದಿನ; ಮರಳಿನ ಕಲಾಕೃತಿ ಮೂಲಕ ಸ್ಮರಿಸಿದ ಕಲಾವಿದ ಸುದರ್ಶನ್​ ಪಟ್ನಾಯಕ್​

| Updated By: Pavitra Bhat Jigalemane

Updated on: Jan 23, 2022 | 4:45 PM

ಅಂತಾರಾಷ್ಟ್ರೀಯ ಮರಳು ಚಿತ್ರ ಕಲಾವಿದ (Sand Artist) ಸುದರ್ಶನ್​ ಪಟ್ನಾಯಕ್​​ ಮರಳಿನ ಶಿಲ್ಪ ನಿರ್ಮಿಸಿ ವಿಶೇಷವಾಗಿ ಸ್ವಾತಂತ್ರ ಹೋರಾಟಗಾರರನ್ನು ಸ್ಮರಿಸಿದ್ದಾರೆ.

ಸುಭಾಷ್​ ಚಂದ್ರ ಬೋಸ್ ​125ನೇ ಜನ್ಮದಿನ; ಮರಳಿನ ಕಲಾಕೃತಿ ಮೂಲಕ ಸ್ಮರಿಸಿದ ಕಲಾವಿದ ಸುದರ್ಶನ್​ ಪಟ್ನಾಯಕ್​
ಮರಳಿನ ಕಲಾಕೃತಿ
Follow us on

ನೇತಾಜಿ ಸುಭಾಷ್​ ಚಂದ್ರ ಬೋಸ್ (Subhas Chandra Bose)  ಅವರ 125ನೇ ಜನ್ಮದಿನವಾದ ಇಂದು ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ದೇಶದ ಜನತೆ  ಅವರನ್ನು ಸ್ಮರಿಸಿದ್ದಾರೆ. ಈ ನಡುವೆ ಅಂತಾರಾಷ್ಟ್ರೀಯ ಮರಳು ಚಿತ್ರ ಕಲಾವಿದ (Sand Artist) ಸುದರ್ಶನ್​ ಪಟ್ನಾಯಕ್​​ ಮರಳಿನ ಶಿಲ್ಪ ನಿರ್ಮಿಸಿ ವಿಶೇಷವಾಗಿ ಸ್ವಾತಂತ್ರ ಹೋರಾಟಗಾರರನ್ನು ಸ್ಮರಿಸಿದ್ದಾರೆ. ಮರಳಿನ ಮೂಲಕ ನೇತಾಜಿ ಸುಭಾಷ್​ ಚಂದ್ರ ಬೋಸ್​ ಅವರ ಕಲಾಕೃತಿಯನ್ನು ನಿರ್ಮಿಸಿ ಗಮನ ಸೆಳೆದಿದ್ದಾರೆ. ಸುದರ್ಶನ್​​ ಅವರು ಇಂದು ದೆಹಲಿಯ ಇಂಡಿಯಾ ಗೇಟ್​​ ಬಳಿ ಉದ್ಘಾಟನೆಯಾದ ನೇತಾಜಿ ಸುಭಾಷ್​ ಚಂದ್ರ ಬೀಸ್​​ ಅವರ ಹೋಲೋಗ್ರಾಮ್ (Hologram)​ ಪ್ರತಿಮೆಯನ್ನು ಮರಳಿನ ಮೂಲಕ ಚಿತ್ರಿಸಿದ್ದಾರೆ.

ಈ ಕುರಿತು ಅಂತಾರಾಷ್ಟ್ರೀಯ ಮರಳು ಕಲಾವಿದ ಸುದರ್ಶನ್​ ಪಟ್ನಾಯಕ್​ ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು ನೇತಾಜಿ ಸುಭಾಷ್​ ಚಂದ್ರ ಬೋಸ್​ ಅವರ 125ನೇ ಜನ್ಮದಿನದ ಪ್ರಯುಕ್ತ 7 ಅಡಿ ಎತ್ತರದ ಪ್ರತಿಮೆಯನ್ನು ಪೂರಿ ಬೀಚ್​ ದಡದಲ್ಲಿ ರಚಿಸಲಾಯಿತು ಎಂದು ಬರೆದುಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸುದರ್ಶನ ಅವರ ಕೈಚಳಕದಲ್ಲಿ ಮೂಡಿಬಂದ ನೇತಾಜಿ ಸುಭಾಷ್​ಚಂದ್ರ ಬೋಸ್​ ಅವರ ಪ್ರತಿಮೆ ವೈರಲ್ ಆಗಿದೆ.

ಸುಭಾಸ್​ ಚಂದ್ರ ಬೋಸ್​ ಅವರ 125ನೇ ಜನ್ಮದಿನದ ಅಂಗವಾಗಿ ಇಂಡಿಯಾ ಗೇಟ್​ ಬಳಿ ಗ್ರಾನೈಟ್​ ಪ್ರತಿಮೆಯನ್ನು ಉದ್ಘಾಟಿಸಲಾಯಿತು.  ಈ ಪ್ರತಿಮೆ 28 ಅಡಿ ಎತ್ತರ ಮತ್ತು ಆರು ಅಡಿ ಅಗಲವಿದೆ. ಅದನ್ನು ಇಂದು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ಇಂದು ದೇಶದ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್​ ಚಂದ್ರ ಬೋಸ್​ ಅವರನ್ನು ಇಡೀ ದೇಶ ನೆನಪಿಸಿಕೊಂಡಿದೆ. ಪರಾಕ್ರಮ ದಿನವೆಂದು ಆಚರಿಸಿದೆ. ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಸೇರಿದಂತೆ ಹಲವು ಗಣ್ಯರು ನಮನ ಸಲ್ಲಿದ್ದಾರೆ.

ಇದನ್ನೂ ಓದಿ:

Republic Day 2022: ಇಂದು ಪ್ರಧಾನಿ ಮೋದಿಯಿಂದ ನೇತಾಜಿ ಸುಭಾಷ್​ ಚಂದ್ರ ಬೋಸ್​ರ ಹೊಲೋಗ್ರಾಮ್​ ಪ್ರತಿಮೆ ಅನಾವರಣ