Viral Video: ಕಾಲಿನ ಕೂದಲು ತೆಗೆಯಲು ಸ್ಯಾಂಡ್​ ಪೇಪರ್ ಬಳಸಿದ ಮಹಿಳೆಗೆ ಎಚ್ಚರಿಕೆ ನೀಡಿದ ವೈದ್ಯರು

|

Updated on: May 14, 2021 | 6:11 PM

ಮಹಿಳೆಯೋರ್ವರು ಕಾಲಿನ ಕೂದಲು ತೆಗೆಯಲು ಸ್ಯಾಂಡ್​ ಪೆಪರ್​ ಬಳಸಿ, ಕಾಲಿನ ಕೂದಲು ತೆಗೆಯಲು ಹೊಸ ಮಾರ್ಗವನ್ನು ಅನುಸರಿಸಿದ್ದೇನೆ ಎಂದು ಬರೆದುಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾತಲಾಣದಲ್ಲಿ ವೈರಲ್​ ಆಗುತ್ತಿದೆ.

Viral Video: ಕಾಲಿನ ಕೂದಲು ತೆಗೆಯಲು ಸ್ಯಾಂಡ್​ ಪೇಪರ್ ಬಳಸಿದ ಮಹಿಳೆಗೆ ಎಚ್ಚರಿಕೆ ನೀಡಿದ ವೈದ್ಯರು
ಕಾಲಿನ ಕೂದಲು ತೆಗೆಯಲು ಸ್ಯಾಂಡ್​ ಪೇಪರ್ ಬಳಸಿದ ಮಹಿಳೆಗೆ ಎಚ್ಚರಿಕೆ ನೀಡಿದ ವೈದ್ಯರು
Follow us on

ಮಹಿಳೆಯೋರ್ವರು ಮರಳು ಕಾಗದವನ್ನು(ಸ್ಯಾಂಡ್ ಪೇಪರ್) ಬಳಸಿ, ಕಾಲಿನ ಕೂದಲು ತೆಗೆಯಲು ಹೊಸ ಮಾರ್ಗವನ್ನು ಅನುಸರಿಸಿದ್ದೇನೆ ಎಂದು ಟಿಕ್​ಟಾಕ್​ನಲ್ಲಿ ವಿಡಿಯೋ ಮೂಲಕ ಹೇಳಿರುವ ಮಾತು ಇದೀಗ ಸಾಮಾಜಿಕ ಜಾತಲಾಣದಲ್ಲಿ ವೈರಲ್​ ಆಗುತ್ತಿದೆ. 

ಮಹಿಳೆ, ಮರಳು ಕಾಗದದ ಮೂಲಕ ಕಾಲಿನ ಕೂದಲು ತೆಗೆದುಕೊಳ್ಳುತ್ತಿರುವ ವಿಡಿಯೋ ಹಂಚಿಕೊಂಡ ಸಾಮಾಜಿಕ ಖಾತೆದಾರರೋರ್ವರು, ಅವಳು ತನ್ನ ಕಾಲಿಗೆ 600 ಗ್ರಿಟ್​ ಮರಳು ಕಾಗದವನ್ನು ಬಳಸಿದ್ದರು. ಮರಳು ಕಾಗದದ ಮೂಲಕ ಸುಮಾರು ಹತ್ತು ಬಾರಿ ತನ್ನ ಕಾಲಿಗೆ ಅಂಟಿಸಿದಳು ಮತ್ತು ಇದೇ ರೀತಿ ವಿರುದ್ಧ ದಿಕ್ಕಿನಲ್ಲಿ ಪುನಃ ಹತ್ತು ಬಾರಿ ಅಂಟಿಸುವಂತೆ ಹೇಳಿದರು. ಕೇವಲ 600 ಗ್ರಿಟ್​ ಮರಳು ಕಾಗದ ಸಾಕು ಬೇರೇನು ಉಪಕರಣಗಳು ಬೇಡ ಧನ್ಯವಾದಗಳು ಎಂದು ಹೇಳಿದ್ದಾರೆ ಎಂಬುದನ್ನು ವಿಡಿಯೋ ಹಂಚಿಕೊಂಡ ಖಾತೆದಾರರು ವಿವರಿಸಿದ್ದಾರೆ.

ವಿಡಿಯೋ ನೋಡಿದ ಆರೋಗ್ಯ ತಜ್ಞರು ಈ ಕುರಿತಂತೆ ಮಾತನಾಡಿ, ಮರಳು ಕಾಗದದಿಂದ ಕಾಲಿನ ಕೂದಲು ತೆಗೆಯುವುದು ಕ್ಷೇಮವಲ್ಲ. ಅಷ್ಟು ಸುರಕ್ಷಿತವೂ ಅಲ್ಲ. ಇದರಿಂದ ಚರ್ಮದ ಪದರಗಳು ಕಿತ್ತು ಹೋಗುತ್ತವೆ ಎಂದು ಎಚ್ಚರಿಸಿದ್ದಾರೆ.

 

ಇದನ್ನೂ ಓದಿ: Remdesivir: ರೆಮಿಡಿಸಿವರ್ ಇಂಜೆಕ್ಷನ್​ಗೆ ಬಾಲಿವುಡ್ ಕೊರಿಯೋಗ್ರಾಫರ್​ ಹೆಸರು; ಫನ್ನಿ ವಿಡಿಯೋ ವೈರಲ್​