ಜ್ವಾಲಾಮುಖಿಯಲ್ಲಿ ಪಿಜ್ಜಾ ತಯಾರು; ನೀವೂ ಹೀಗೆಲ್ಲ ಮಾಡಬೇಡಿ ಹುಷಾರು!
ಅಕೌಂಟೆಟ್ ವೃತ್ತಿಯಲ್ಲಿರುವ 34 ವರ್ಷದ ಡೇವಿಡ್ ಗಾರ್ಸಿಯಾ ಎಂಬುವವರು ಜ್ವಾಲಮುಖಿಯ ಬಂಡೆಯ ಮೇಲೆ ಪಿಜ್ಜಾ ಮಾಡಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕಳೆದ ಫೆಬ್ರವರಿ ತಿಂಗಳಿನಿಂದ ಗ್ವಾಟೆಮಾಲಾದ ಪಕಾಯಾ ಜ್ವಾಲಾಮುಖಿ ಸ್ಟೋಟಗೊಳ್ಳುತ್ತಿದೆ. ಅಲ್ಲಿನ ಜನರು ಮತ್ತು ಅಧಿಕಾರಿಗಳಿಗೆ ಜ್ವಾಲಾಮುಖಿಯ ಭೀಕರತೆ ಹೆಚ್ಚು ಎಚ್ಚರವಹಿಸುವಂತೆ ಮಾಡಿದೆ. ಅಕೌಂಟೆಟ್ ವೃತ್ತಿಯಲ್ಲಿರುವ 34 ವರ್ಷದ ಡೇವಿಡ್ ಗಾರ್ಸಿಯಾ ಎಂಬುವವರು ಜ್ವಾಲಮುಖಿಯ ಬಂಡೆಯ ಮೇಲೆ ಪಿಜ್ಜಾ ಮಾಡಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜ್ವಾಲಾಮುಖಿ ಸ್ಪೋಟಗೊಂಡಿರುವುದರಿಂದಾಗಿ ಕಲ್ಲಿನ ಬಂಡೆಗಳು ಹೆಚ್ಚು ಬಿಸಿಯಿದೆ. ಬಂಡೆಗಳ ಶಾಖದ ತೀವ್ರತೆಯಿಂದ ಪಿಜ್ಜಾ ತಯಾರಿಸಿದ್ದೇನೆ. ಇಂದು ಪಿಜ್ಜಾ ಸವಿಯಲು ಅನೇಕ ಜನರು ಬರುತ್ತಾರೆ ಎಂದು ಡೇವಿಡ್ ಗಾರ್ಸಿಯಾ ಹೇಳಿದ್ದಾರೆ. ಪಿಜ್ಜಾ ತಯಾರಿಸುವಾಗ ಗಾರ್ಸಿಯಾ ಅವರು ಬೆಂಕಿಯಿಂದ ರಕ್ಷಿಸುವ ಉಡುಪನ್ನು ಧರಿಸಿರುತ್ತಾರೆ. ತೀವ್ರತೆಯ ಶಾಖದಲ್ಲಿ ಪಿಜ್ಜಾ ಬೇಯಿಸಿ, ಅದಕ್ಕೆ ಟೊಮ್ಯಾಟೋ ಸಾಸ್ ಮತ್ತು ಚೀಸ್ಅನ್ನು ಮಿಶ್ರಣ ಮಾಡಿ ಪಿಜ್ಜಾ ಕತ್ತರಿಸುತ್ತಾರೆ.
ಅಡುಗೆ ಹೇಗೆ ಮಾಡಿದರು ಎಂಬುದರ ಕುರಿತಾಗಿ ಹೇಳಿದ ಗಾರ್ಸಿಯಾ ಅವರು, ಸುಮಾರು 800 ಡಿಗ್ರಿಗಳಷ್ಟು ಇರುವ ಶಾಖದಲ್ಲಿ ಪಿಜ್ಜಾದ ಪಾತ್ರೆಯನ್ನು ಇರಿಸಿದ್ದೇನೆ. ಅದು 14 ನಿಮಿಷಗಳಲ್ಲಿ ಸಿದ್ಧಗೊಂಡಿತು. ನಂತರ ಅದನ್ನು ಸವಿದೆ. ತುಂಬಾ ರುಚಿಕರವಾಗಿತ್ತು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಕೊರೊನಾ ಎಫೆಕ್ಟ್! ದಿವಾಳಿ ಘೋಷಿಸಿದ ಪಿಜ್ಜಾ ಹಟ್