Viral Video: ಕಾಲಿನ ಕೂದಲು ತೆಗೆಯಲು ಸ್ಯಾಂಡ್ ಪೇಪರ್ ಬಳಸಿದ ಮಹಿಳೆಗೆ ಎಚ್ಚರಿಕೆ ನೀಡಿದ ವೈದ್ಯರು
ಮಹಿಳೆಯೋರ್ವರು ಕಾಲಿನ ಕೂದಲು ತೆಗೆಯಲು ಸ್ಯಾಂಡ್ ಪೆಪರ್ ಬಳಸಿ, ಕಾಲಿನ ಕೂದಲು ತೆಗೆಯಲು ಹೊಸ ಮಾರ್ಗವನ್ನು ಅನುಸರಿಸಿದ್ದೇನೆ ಎಂದು ಬರೆದುಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾತಲಾಣದಲ್ಲಿ ವೈರಲ್ ಆಗುತ್ತಿದೆ.
ಮಹಿಳೆಯೋರ್ವರು ಮರಳು ಕಾಗದವನ್ನು(ಸ್ಯಾಂಡ್ ಪೇಪರ್) ಬಳಸಿ, ಕಾಲಿನ ಕೂದಲು ತೆಗೆಯಲು ಹೊಸ ಮಾರ್ಗವನ್ನು ಅನುಸರಿಸಿದ್ದೇನೆ ಎಂದು ಟಿಕ್ಟಾಕ್ನಲ್ಲಿ ವಿಡಿಯೋ ಮೂಲಕ ಹೇಳಿರುವ ಮಾತು ಇದೀಗ ಸಾಮಾಜಿಕ ಜಾತಲಾಣದಲ್ಲಿ ವೈರಲ್ ಆಗುತ್ತಿದೆ.
ಮಹಿಳೆ, ಮರಳು ಕಾಗದದ ಮೂಲಕ ಕಾಲಿನ ಕೂದಲು ತೆಗೆದುಕೊಳ್ಳುತ್ತಿರುವ ವಿಡಿಯೋ ಹಂಚಿಕೊಂಡ ಸಾಮಾಜಿಕ ಖಾತೆದಾರರೋರ್ವರು, ಅವಳು ತನ್ನ ಕಾಲಿಗೆ 600 ಗ್ರಿಟ್ ಮರಳು ಕಾಗದವನ್ನು ಬಳಸಿದ್ದರು. ಮರಳು ಕಾಗದದ ಮೂಲಕ ಸುಮಾರು ಹತ್ತು ಬಾರಿ ತನ್ನ ಕಾಲಿಗೆ ಅಂಟಿಸಿದಳು ಮತ್ತು ಇದೇ ರೀತಿ ವಿರುದ್ಧ ದಿಕ್ಕಿನಲ್ಲಿ ಪುನಃ ಹತ್ತು ಬಾರಿ ಅಂಟಿಸುವಂತೆ ಹೇಳಿದರು. ಕೇವಲ 600 ಗ್ರಿಟ್ ಮರಳು ಕಾಗದ ಸಾಕು ಬೇರೇನು ಉಪಕರಣಗಳು ಬೇಡ ಧನ್ಯವಾದಗಳು ಎಂದು ಹೇಳಿದ್ದಾರೆ ಎಂಬುದನ್ನು ವಿಡಿಯೋ ಹಂಚಿಕೊಂಡ ಖಾತೆದಾರರು ವಿವರಿಸಿದ್ದಾರೆ.
ವಿಡಿಯೋ ನೋಡಿದ ಆರೋಗ್ಯ ತಜ್ಞರು ಈ ಕುರಿತಂತೆ ಮಾತನಾಡಿ, ಮರಳು ಕಾಗದದಿಂದ ಕಾಲಿನ ಕೂದಲು ತೆಗೆಯುವುದು ಕ್ಷೇಮವಲ್ಲ. ಅಷ್ಟು ಸುರಕ್ಷಿತವೂ ಅಲ್ಲ. ಇದರಿಂದ ಚರ್ಮದ ಪದರಗಳು ಕಿತ್ತು ಹೋಗುತ್ತವೆ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: Remdesivir: ರೆಮಿಡಿಸಿವರ್ ಇಂಜೆಕ್ಷನ್ಗೆ ಬಾಲಿವುಡ್ ಕೊರಿಯೋಗ್ರಾಫರ್ ಹೆಸರು; ಫನ್ನಿ ವಿಡಿಯೋ ವೈರಲ್