Viral Video: ಅಜ್ಜಿ ನೀವು ಸ್ವರ್ಗಕ್ಕೆ ಹೋಗುತ್ತಿರೋ? ನರಕಕ್ಕೋ? ಮೊಮ್ಮಗ ಕೇಳಿದ ಪ್ರಶ್ನೆಗೆ ಅಜ್ಜಿಯ ಉತ್ತರ; ಫಿದಾ ಆದ ನೆಟ್ಟಿಗರು
ಅಜ್ಜಿ ನೀವು ಸ್ವರ್ಗಕ್ಕೆ ಹೋಗುತ್ತಿರೋ? ನರಕ್ಕಕ್ಕೋ? ಎಂಬ ಮೊಮ್ಮಗನ ಪ್ರಶ್ನೆಗೆ ಅಜ್ಜಿ ಏನೆಂದು ಉತ್ತರಿಸುತ್ತಾರೆ ನೀವೇ ನೋಡಿ.. ವಿಡಿಯೋ ವೈರಲ್ ಅಗಿದೆ.
ಅಜ್ಜಿ- ಮೊಮ್ಮಗನ ಮಾತುಕತೆಯ ವಿಡಿಯೋ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ಕೆಲವು ಬಾರಿ ಮೊಮ್ಮಗನ ಕೀಟಲೆಯ ಪ್ರಶ್ನೆಗೆ ಅಜ್ಜಿ ಏನೆಂದು ಉತ್ತರಿಸಬಹುದು? ಎಂಬ ಕುತೂಹಲ. ಅದೇ ರೀತಿ ಅಜ್ಜಿ-ಮೊಮ್ಮಗನ ಸಂಭಾಷಣೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಜ್ಜಿ ನೀವು ಸ್ವರ್ಗಕ್ಕೆ ಹೋಗುತ್ತಿರೋ? ನರಕಕ್ಕೋ? ಎಂದು ಮೊಮ್ಮಗ ಕೇಳಿದ ಪ್ರಶ್ನೆಗೆ ಅಜ್ಜಿ ಏನೆಂದು ಉತ್ತರಿಸುತ್ತಾರೆ? ಅಜ್ಜಿಯಿಂದ ತಮಾಷೆಯ ಉತ್ತರ ನಿರೀಕ್ಷಿಸಬಹುದು. ವಿಡಿಯೋ ಇಲ್ಲಿದೆ ನೀವೂ ನೋಡಿ.
ವಿಡಿಯೋದಲ್ಲಿ ಗಮನಿಸಿದಂತೆ ಅಜ್ಜಿ ಖುರ್ಚಿಯಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿರುತ್ತಾರೆ. ಆ ಸಮಯದಲ್ಲಿ ‘ಅಜ್ಜಿ ನೀವು ಸ್ವರ್ಗಕ್ಕೆ ಹೋಗುತ್ತೀರೋ? ಅಥವಾ ನರಕ್ಕೆ ಹೋಗುತ್ತಿರೋ? ಎಂದು ಮೊಮ್ಮಗ ಪ್ರಶ್ನಿಸುತ್ತಾನೆ. ಮೊಮ್ಮಗನ ಈ ಪ್ರಶ್ನೆಗೆ ಆಶ್ಚರ್ಯಗೊಂಡ ಅಜ್ಜಿ ನಾನು ಸ್ವರ್ಗಕ್ಕೆ ಹೋಗುತ್ತೇನೆ ಎಂದು ಉತ್ತರಿಸುತ್ತಾರೆ. ನೀವು ಯಾಕೆ ಸ್ವರ್ಗಕ್ಕೆ ಹೋಗುತ್ತೀರಿ? ಎಂದು ಮೊಮ್ಮಗ ಮತ್ತೆ ಪ್ರಶ್ನೆ ಕೇಳುತ್ತಾನೆ.
ಮೊಮ್ಮಗನ ಪ್ರಶ್ನೆಗೆ ಅಜ್ಜಿ ನಗುತ್ತಾ ಉತ್ತರಿಸುತ್ತಾರೆ. ಅಲ್ಲಿ ಒಳ್ಳೆಯ ಮೊಬೈಲ್ ಇದೆ. ಫೋಟೋ ಹೊಡೆದು,ಅಲ್ಲಿಂದ ನಾನು ಒಳ್ಳೊಳ್ಳೆಯ ಫೋಟೋಗಳನ್ನು ಕಳುಹಿಸುತ್ತೇನೆ ಎಂದು ತಮಾಷೆಯಾಗಿ ಉತ್ತರಿಸುತ್ತಾರೆ. ಇದನ್ನು ಕೇಳಿದ ಪ್ರಚಂಡ ಪುಟಾಣಿ ಮೊಮ್ಮಗ, ಅಜ್ಜಿ, ಸ್ವರ್ಗದಲ್ಲಿ ನೆಟ್ವರ್ಕ್ ಇದೆ ಎಂದು ನಿಮಗೆ ಹೇಗೆ ಗೊತ್ತು? ಎಂದು ಹೇಳುತ್ತಾನೆ. ಹೌದು, ನಾನು ನೋಡೊದ್ದೇನೆ. ನೆಟ್ವರ್ಕ್ ಸಿಗುತ್ತದೆ ಎಂದು ಮೊಮ್ಮಗನ ಕೀಟಲೆಯ ಪ್ರಶ್ನೆಗೆ ಅಜ್ಜಿ ಉತ್ತರಿಸುತ್ತಾರೆ.
View this post on Instagram
ಅಜ್ಜಿ ಮೊಮ್ಮಗನ ಸಂಭಾಷಣೆಗೆ ಸಾಮಾಜಿಕ ಜಾಲತಾಣದಲ್ಲಿ 16 ಸಾವಿರ ಜನರು ಇಷ್ಟಪಟ್ಟಿದ್ದಾರೆ. ಈ ತಮಾಷೆಯ ಪ್ರಸಂಗಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವೃದ್ದೆಯರಿಬ್ಬರು ರಸ್ತೆಯಲ್ಲಿ ಕುಣಿಯುವ ವಿಡಿಯೋ ವೈರಲ್; ಸಖತ್ ಸ್ಟೆಪ್ಗೆ ನೆಟ್ಟಿಗರ ಶ್ಲಾಘನೆ