AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

41 ವರ್ಷಗಳ ಕಾಲ ತಾಯಿಯ ಹುಡುಕಾಟ, ಇನ್ನೇನು ಭೇಟಿಯಾಗಬೇಕೆನ್ನುವಷ್ಟರಲ್ಲಿ ನಡೆದಿದ್ದೇ ಬೇರೆ

ಜೀವನ ನಾವಂದುಕೊಂಡಂತೆ ಎಂದೂ ನಡೆಯುವುದಿಲ್ಲ, ಭಗವಂತನ ಇಚ್ಛೆ ಇನ್ನೇನೋ ಇರುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಪ್ರತಿಯೊಂದು ಮಕ್ಕಳಿಗೆ ತನ್ನ ತಂದೆ ತಾಯಿಯೇ ತನ್ನ ಪ್ರಪಂಚವಾಗಿರುತ್ತಾರೆ. ಆದರೆ ತಾನು ತಾಯಿ ಎಂದು ನಂಬಿರುವ ಆಕೆ ತನಗೆ ಜನ್ಮ ನೀಡಿದವಳಲ್ಲ ಎಂದು ತಿಳಿದಾಗ ಆಗುವ ನೋವು ಸಾಮಾನ್ಯದ್ದಲ್ಲ.

41 ವರ್ಷಗಳ ಕಾಲ ತಾಯಿಯ ಹುಡುಕಾಟ, ಇನ್ನೇನು ಭೇಟಿಯಾಗಬೇಕೆನ್ನುವಷ್ಟರಲ್ಲಿ ನಡೆದಿದ್ದೇ ಬೇರೆ
ಸ್ಟೀವನ್Image Credit source: News 18
ನಯನಾ ರಾಜೀವ್
|

Updated on:Dec 31, 2023 | 3:26 PM

Share

ಜೀವನ ನಾವಂದುಕೊಂಡಂತೆ ಎಂದೂ ನಡೆಯುವುದಿಲ್ಲ, ಭಗವಂತನ ಇಚ್ಛೆ ಇನ್ನೇನೋ ಇರುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಪ್ರತಿಯೊಂದು ಮಕ್ಕಳಿಗೆ ತನ್ನ ತಂದೆ ತಾಯಿಯೇ ತನ್ನ ಪ್ರಪಂಚವಾಗಿರುತ್ತಾರೆ. ಆದರೆ ತಾನು ತಾಯಿ ಎಂದು ನಂಬಿರುವ ಆಕೆ ತನಗೆ ಜನ್ಮ ನೀಡಿದವಳಲ್ಲ ಎಂದು ತಿಳಿದಾಗ ಆಗುವ ನೋವು ಸಾಮಾನ್ಯದ್ದಲ್ಲ.

ಆಗ ಹಾಗಾದರೆ ತನ್ನ ಹೆತ್ತವಳು ಎಲ್ಲಿದ್ದಾಳೆ, ನೋಡುವುದಕ್ಕೆ ಹೇಗಿರಬಹುದು, ಬದುಕಿದ್ದಾಳೋ ಇಲ್ಲವೋ ಇಂಥಾ ಹಲವು ಪ್ರಶ್ನೆಗಳು ನಿಮ್ಮನ್ನು ಕಾಡಲು ಶುರುವಾಗುತ್ತದೆ.

ಅಂಥದ್ದೇ ಒಂದು ಘಟನೆಯ ಬಗ್ಗೆ ನಾವಿಂದು ವಿವರಿಸಲಿದ್ದೇವೆ. ಲಂಡನ್​ನಲ್ಲಿ ನಡೆದ ಘಟನೆ ಇದು. ಸ್ಟೀವನ್​ ಸ್ಮಿತ್​ಗೆ ತನ್ನ ನಿಜವಾದ ತಾಯಿ ಬೇರೆ ಎಂದು ತಿಳಿದಾಗ ಆಕೆಯನ್ನು ಹೇಗಾದರೂ ನೋಡಲೇಬೇಕೆಂದು ನಿರ್ಧರಿಸುತ್ತಾರೆ. ಹಲವು ವರ್ಷಗಳ ಬಳಿಕ ವಿಳಾಸ ಸಿಕ್ಕಿ ಮನೆಗೆ ಹೋಗಿ ನೋಡುವಷ್ಟರಲ್ಲಿ ಬಾತ್​ರೂಮ್​ನಲ್ಲಿ ತಾಯಿ ಶವವಾಗಿ ಕಾಣಿಸಿಕೊಂಡಿದ್ದರು.

ಮತ್ತಷ್ಟು ಓದಿ: Viral News: ತನ್ನನ್ನು 4 ವರ್ಷದ ಮಗುವಿನಿಂದ ಸಾಕಿದ ವ್ಯಕ್ತಿಯನ್ನೇ ಮದುವೆಯಾದ ಯುವತಿ

ಸ್ಟೀವ್ ಸ್ಮಿತ್ ಜನಿಸಿದಾಗ ಅವರ ತಂದೆ ಜೈಲು ಶಿಕ್ಷೆ ಅನುಭವಿಸುತ್ತಿದ್ದರು. ಈ ಕಾರಣಕ್ಕಾಗಿ, ಸ್ಟೀವನ್‌ನ ತಾಯಿ ತನ್ನ ಮಗನಿಗೆ ಉತ್ತಮ ಭವಿಷ್ಯ ರೂಪಿಸುವ ನೊಟ್ಟಿನಲ್ಲಿ ದತ್ತು ಕೊಟ್ಟಿದ್ದರು.

ತನ್ನನ್ನು ದತ್ತು ತೆಗೆದುಕೊಂಡಿರುವ ವಿಚಾರ ಸ್ಟೀವನ್​ಗೆ ತಿಳಿದಾಗ ತಂದೆ-ತಾಯಿಯನ್ನು ಹುಡುಕಲು ಆರಮಭಿಸಿದ್ದರು. 41 ವರ್ಷಗಳ ಬಳಿಕ ತನ್ನ ನಿಜವಾದ ತಾಯಿ ಯಾರೆಂದು ತಿಳಿದರೂ ಭೇಟಿಯಾಗುವ ಯೋಗ ಅವರಿಗಿರಲಿಲ್ಲ.

ಆಕೆಯನ್ನು ಹುಡುಕು ಹೋಗಿ ಅಮ್ಮಾ ಎಂದು ಕರೆದರೂ ಅತ್ತ ಕಡೆಯಿಂದ ಯಾವುದೇ ಸದ್ದಿರಲಿಲ್ಲ, ಬಾತ್​ ರೂಂನಲ್ಲಿ ಶವವಾಗಿ ಮಲಗಿದ್ದರು. ಅವರು ತನ್ನ ತಂದೆ ಫ್ರಾಂಕ್​ ಎಂಬುವವರ ಹುಡುಕಾಟ ಮುಂದುವರೆಸಿದ್ದಾರೆ. ಒಂದಲ್ಲಾ ಒಂದು ದಿನ ತಂದೆಯಾದರೂ ಸಿಗಬಲ್ಲರು ಎನ್ನುವ ವಿಶ್ವಾಸದಲ್ಲಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:24 pm, Sun, 31 December 23

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್