ಜೀವನ ನಾವಂದುಕೊಂಡಂತೆ ಎಂದೂ ನಡೆಯುವುದಿಲ್ಲ, ಭಗವಂತನ ಇಚ್ಛೆ ಇನ್ನೇನೋ ಇರುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
ಪ್ರತಿಯೊಂದು ಮಕ್ಕಳಿಗೆ ತನ್ನ ತಂದೆ ತಾಯಿಯೇ ತನ್ನ ಪ್ರಪಂಚವಾಗಿರುತ್ತಾರೆ. ಆದರೆ ತಾನು ತಾಯಿ ಎಂದು ನಂಬಿರುವ ಆಕೆ ತನಗೆ ಜನ್ಮ ನೀಡಿದವಳಲ್ಲ ಎಂದು ತಿಳಿದಾಗ ಆಗುವ ನೋವು ಸಾಮಾನ್ಯದ್ದಲ್ಲ.
ಆಗ ಹಾಗಾದರೆ ತನ್ನ ಹೆತ್ತವಳು ಎಲ್ಲಿದ್ದಾಳೆ, ನೋಡುವುದಕ್ಕೆ ಹೇಗಿರಬಹುದು, ಬದುಕಿದ್ದಾಳೋ ಇಲ್ಲವೋ ಇಂಥಾ ಹಲವು ಪ್ರಶ್ನೆಗಳು ನಿಮ್ಮನ್ನು ಕಾಡಲು ಶುರುವಾಗುತ್ತದೆ.
ಅಂಥದ್ದೇ ಒಂದು ಘಟನೆಯ ಬಗ್ಗೆ ನಾವಿಂದು ವಿವರಿಸಲಿದ್ದೇವೆ. ಲಂಡನ್ನಲ್ಲಿ ನಡೆದ ಘಟನೆ ಇದು. ಸ್ಟೀವನ್ ಸ್ಮಿತ್ಗೆ ತನ್ನ ನಿಜವಾದ ತಾಯಿ ಬೇರೆ ಎಂದು ತಿಳಿದಾಗ ಆಕೆಯನ್ನು ಹೇಗಾದರೂ ನೋಡಲೇಬೇಕೆಂದು ನಿರ್ಧರಿಸುತ್ತಾರೆ. ಹಲವು ವರ್ಷಗಳ ಬಳಿಕ ವಿಳಾಸ ಸಿಕ್ಕಿ ಮನೆಗೆ ಹೋಗಿ ನೋಡುವಷ್ಟರಲ್ಲಿ ಬಾತ್ರೂಮ್ನಲ್ಲಿ ತಾಯಿ ಶವವಾಗಿ ಕಾಣಿಸಿಕೊಂಡಿದ್ದರು.
ಮತ್ತಷ್ಟು ಓದಿ: Viral News: ತನ್ನನ್ನು 4 ವರ್ಷದ ಮಗುವಿನಿಂದ ಸಾಕಿದ ವ್ಯಕ್ತಿಯನ್ನೇ ಮದುವೆಯಾದ ಯುವತಿ
ಸ್ಟೀವ್ ಸ್ಮಿತ್ ಜನಿಸಿದಾಗ ಅವರ ತಂದೆ ಜೈಲು ಶಿಕ್ಷೆ ಅನುಭವಿಸುತ್ತಿದ್ದರು. ಈ ಕಾರಣಕ್ಕಾಗಿ, ಸ್ಟೀವನ್‌ನ ತಾಯಿ ತನ್ನ ಮಗನಿಗೆ ಉತ್ತಮ ಭವಿಷ್ಯ ರೂಪಿಸುವ ನೊಟ್ಟಿನಲ್ಲಿ ದತ್ತು ಕೊಟ್ಟಿದ್ದರು.
ತನ್ನನ್ನು ದತ್ತು ತೆಗೆದುಕೊಂಡಿರುವ ವಿಚಾರ ಸ್ಟೀವನ್ಗೆ ತಿಳಿದಾಗ ತಂದೆ-ತಾಯಿಯನ್ನು ಹುಡುಕಲು ಆರಮಭಿಸಿದ್ದರು. 41 ವರ್ಷಗಳ ಬಳಿಕ ತನ್ನ ನಿಜವಾದ ತಾಯಿ ಯಾರೆಂದು ತಿಳಿದರೂ ಭೇಟಿಯಾಗುವ ಯೋಗ ಅವರಿಗಿರಲಿಲ್ಲ.
ಆಕೆಯನ್ನು ಹುಡುಕು ಹೋಗಿ ಅಮ್ಮಾ ಎಂದು ಕರೆದರೂ ಅತ್ತ ಕಡೆಯಿಂದ ಯಾವುದೇ ಸದ್ದಿರಲಿಲ್ಲ, ಬಾತ್ ರೂಂನಲ್ಲಿ ಶವವಾಗಿ ಮಲಗಿದ್ದರು. ಅವರು ತನ್ನ ತಂದೆ ಫ್ರಾಂಕ್ ಎಂಬುವವರ ಹುಡುಕಾಟ ಮುಂದುವರೆಸಿದ್ದಾರೆ. ಒಂದಲ್ಲಾ ಒಂದು ದಿನ ತಂದೆಯಾದರೂ ಸಿಗಬಲ್ಲರು ಎನ್ನುವ ವಿಶ್ವಾಸದಲ್ಲಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:24 pm, Sun, 31 December 23