ವೈರಲ್ ವೀಡಿಯೋ: ಬೈಕ್ ಒಂದೇ -ಆದರೆ ಅದರ ಮೇಲೆ ಏಳು ಮಂದಿ ಪ್ರಯಾಣಿಕರು, ಎರಡು ನಾಯಿ, ಕೋಳಿ! ಅದನ್ನು ನೋಡಿ ಬೆಚ್ಚಿಬಿದ್ದ ಜನ

|

Updated on: Oct 10, 2023 | 6:45 PM

purvanchal51 ಹೆಸರಿನ ಖಾತೆಯಿಂದ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ..ಇದು ವೈರಲ್ ಆಗಿದೆ. ಒಂದು ಬೈಕ್‌ನಲ್ಲಿ ಏಳು ಜನ, ಎರಡು ನಾಯಿಗಳು, ಒಂದು ಕೋಳಿ ಮತ್ತು ಲಗೇಜ್. ಕೆಲವರು ಈ ವಿಡಿಯೋವನ್ನು ವೀಕ್ಷಿಸಿದ್ದು, ವಿವಿಧ ಮಾಧ್ಯಮಗಳಲ್ಲಿ ಶೇರ್ ಮಾಡುತ್ತಿದ್ದಾರೆ. ಆದರೆ ಈ ವಿಡಿಯೋ ಎಲ್ಲಿಂದ ಬಂತು ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಈ ಕ್ಲಿಪ್ ನೋಡಿದ ನೆಟ್ಟಿಗರು ಸುಮ್ಮನೆ ನಗಾಡುತ್ತಿದ್ದಾರೆ.

ವೈರಲ್ ವೀಡಿಯೋ: ಬೈಕ್ ಒಂದೇ -ಆದರೆ ಅದರ ಮೇಲೆ ಏಳು ಮಂದಿ ಪ್ರಯಾಣಿಕರು, ಎರಡು ನಾಯಿ, ಕೋಳಿ! ಅದನ್ನು ನೋಡಿ ಬೆಚ್ಚಿಬಿದ್ದ ಜನ
ವೈರಲ್ ವೀಡಿಯೋ: ಒಂದೇ ಬೈಕ್ - ಅದರ ಮೇಲೆ ಪ್ರಯಾಣಿಕರು ಏಳು ಮಂದಿ
Follow us on

ಸಾಮಾನ್ಯವಾಗಿ, ಬೈಕ್‌ ಮೇಲೆ ಮೂರನೇ ವ್ಯಕ್ತಿ ಪ್ರಯಾಣಿಸುವುದನ್ನು ಕಂಡರೆ ಪೊಲೀಸರು ದಂಡ ಹಾಕಲು ಮುಂದಾಗುತ್ತಾರೆ. ಆದರೂ ಪೊಲೀಸರ ಕಣ್ಣುತಪ್ಪಿಸಿ ಎಲ್ಲೋ ನಾಲ್ಕು ಜನ ಸಾಗುವುದನ್ನು ನೋಡಿರುತ್ತೀರಿ. ಹಾಗೆ ಸಾಗುವ ಬೈಕ್​ಅನ್ನು ನೋಡಲು ಸಹ ಭಯವಾಗುತ್ತದೆ. ಆದರೆ ಬೈಕ್‌ನಲ್ಲಿ ಎರಡು ನಾಯಿಗಳು, ಒಂದು ಕೋಳಿ ಮತ್ತು ಭಾರೀ ಸಾಮಾನುಗಳೊಂದಿಗೆ ಒಂದೇ ಬಾರಿಗೆ ಏಳು ಜನರು ಪ್ರಯಾಣಿಸುವುದನ್ನು ಕಂಡಿದ್ದೀರಾ!? ಈ ವಿಡಿಯೋ ನೋಡಿದ ಮೇಲೆ ನೀವೂ ಶಾಕ್ ಆಗುತ್ತೀರಿ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ಕಂಡು ನೆಟಿಜನ್‌ಗಳು ನಾನಾ ರೀತಿಯ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ.

ವೈರಲ್ ಆಗಿರುವ ಈ ವಿಡಿಯೋ ಪ್ರಕಾರ ಇಡೀ ಕುಟುಂಬವೇ ಬೈಕ್ ಮೇಲೆ ಪ್ರಯಾಣಿಸುತ್ತಿರುವಂತೆ ಇತ್ತು. ಬೈಕ್ ಓಡಿಸುವ ವ್ಯಕ್ತಿ, ಮುಂದೆ ಇಬ್ಬರು ಮಕ್ಕಳು, ಹಿಂದೆ ಪತ್ನಿ, ಆಕೆಯ ಮೇಲೆ ಮಗು, ಆ ಮಗುವಿನ ಹಿಂದೆ ಇನ್ನಿಬ್ಬರು ಮಕ್ಕಳು ಕುಳಿತಿದ್ದಾರೆ. ಅವುಗಳ ಜೊತೆಗೆ ಎರಡು ನಾಯಿ ಮರಿಗಳೂ, ಒಂದು ಕೋಳಿಯೂ ಇದ್ದವು. ಇದಲ್ಲದೆ, ಅವರೊಂದಿಗೆ ಇನ್ನೂ ಅನೇಕಾನೇಕ ಸಾಮಾನುಗಳೂ ಇದ್ದವು.

ಸ್ವಾಭಾವಿಕವಾಗಿ, ಈ ವಿಡಿಯೋ ಕ್ಲಿಪ್ ನೋಡಿದ ನಂತರ, ಒಂದೇ ಬೈಕ್‌ನಲ್ಲಿ ಇಷ್ಟೊಂದು ಜನರು ಹೇಗೆ ಸಾಗುತ್ತಿದ್ದಾರೆ? ಎಂದು ನೀವು ನಿಜವಾಗಿಯೂ ಶಾಕ್ ಆಗುತ್ತೀರಿ. ಆದರೆ ಬೈಕ್ ಪಕ್ಕ ಸಾಗುತ್ತಿದ್ದ ಮತ್ತೊಬ್ಬ ವಾಹನ ಸವಾರರು ಅದನ್ನು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ವೈರಲ್ ಆಗಿದ್ದು, ಸದ್ದು ಮಾಡುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇದು ನಿಜಕ್ಕೂ ದೊಡ್ಡ ಸಾಹಸವೇ.. ಬೈಕ್ ಓಡಿಸುವವನಿಗೆ ಸೆಲ್ಯೂಟ್ ಮಾಡುವೆ.. ಏನೇ ಆಗಲಿ ಇಷ್ಟೆಲ್ಲಾ ಜೀವಗಳ ಜೊತೆ ಆಟವಾಡುವುದು ಸರಿಯಲ್ಲ ಎಮದೂ ಅನೇಕರು ಎಚ್ಚರಿಸಿದ್ದಾರೆ.

purvanchal51 ಹೆಸರಿನ ಖಾತೆಯಿಂದ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ..ಇದು ವೈರಲ್ ಆಗಿದೆ. ಒಂದು ಬೈಕ್‌ನಲ್ಲಿ ಏಳು ಜನ, ಎರಡು ನಾಯಿಗಳು, ಒಂದು ಕೋಳಿ ಮತ್ತು ಲಗೇಜ್. ಕೆಲವರು ಈ ವಿಡಿಯೋವನ್ನು ವೀಕ್ಷಿಸಿದ್ದು, ವಿವಿಧ ಮಾಧ್ಯಮಗಳಲ್ಲಿ ಶೇರ್ ಮಾಡುತ್ತಿದ್ದಾರೆ. ಆದರೆ ಈ ವಿಡಿಯೋ ಎಲ್ಲಿಂದ ಬಂತು ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಈ ಕ್ಲಿಪ್ ನೋಡಿದ ನೆಟ್ಟಿಗರು ಸುಮ್ಮನೆ ನಗಾಡುತ್ತಿದ್ದಾರೆ.

ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ